For Quick Alerts
ALLOW NOTIFICATIONS  
For Daily Alerts

ಹೊಸ ದಾಖಲೆ ಬರೆದ ರಿಲಯನ್ಸ್‌: $200 ಬಿಲಿಯನ್ ತಲುಪಿದ ಭಾರತದ ಮೊದಲ ಕಂಪನಿ

|

ಭಾರತದ ಅತಿದೊಡ್ಡ ಖಾಸಗಿ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರ ಹೊಸ ದಾಖಲೆನ್ನೇ ಸೃಷ್ಟಿಸಿದೆ. ಭಾರತದ ಇತಿಹಾಸದಲ್ಲಿ 200 ಬಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳವನ್ನು ತಲುಪಿದ ಮೊದಲ ಕಂಪನಿ ಎಂಬ ಸಾಧನೆ ಮಾಡಿದೆ.

ಅಮೆರಿಕದ ಖಾಸಗಿ ಇಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಸುಮಾರು ಒಂದು ಬಿಲಿಯನ್ ಡಾಲರ್ (7,500 ಕೋಟಿ ರೂ.) ರಿಲಯನ್ಸ್ ರಿಟೇಲ್‌ನಲ್ಲಿ ಹೂಡಿಕೆ ಮಾಡಿದ ಒಂದು ದಿನದ ನಂತರ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಗುರುವಾರ ಹೊಸ ಗರಿಷ್ಠ ಮಟ್ಟಕ್ಕೆ ಏರಿತು. ರಿಲಯನ್ಸ್ ಇಂಡಸ್ಟ್ರೀಸ್ ಶೇ. 7.32% (158.12 ಪಾಯಿಂಟ್) ಏರಿಕೆ ಕಂಡು 2318.75 ರೂಪಾಯಿಗೆ ತಲುಪಿದೆ.

ಷೇರು ಬೆಲೆ ಏರಿಕೆಯಿಂದಾಗಿ 200 ಬಿಲಿಯನ್ ಮಾರುಕಟ್ಟೆ ಬಂಡವಾಳ ಸೃಷ್ಟಿ

ಷೇರು ಬೆಲೆ ಏರಿಕೆಯಿಂದಾಗಿ 200 ಬಿಲಿಯನ್ ಮಾರುಕಟ್ಟೆ ಬಂಡವಾಳ ಸೃಷ್ಟಿ

ಷೇರು ಬೆಲೆಯ ಏರಿಕೆಯೊಂದಿಗೆ, ಕಂಪನಿಯು 14.63 ಲಕ್ಷ ಕೋಟಿ ರೂ.ಗಳ ಮಾರುಕಟ್ಟೆ ಬಂಡವಾಳವನ್ನು ಮುಟ್ಟಿತು. ಈ ಮೂಲಕ 200 ಬಿಲಿಯನ್ ಮಾರುಕಟ್ಟೆ ಬಂಡವಾಳವನ್ನು ತಲುಪಿದ ಮೊದಲ ಭಾರತೀಯ ಕಂಪನಿಯಾಗಿದೆ. ಮಾರುಕಟ್ಟೆ ಬಂಡವಾಳೀಕರಣವು ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯ ಮೌಲ್ಯವಾಗಿದೆ ಮತ್ತು ಒಟ್ಟು ಷೇರುಗಳ ಸಂಖ್ಯೆಯನ್ನು ಪ್ರಸ್ತುತ ಷೇರು ಬೆಲೆಯಿಂದ ಗುಣಿಸಿದಾಗ ಲೆಕ್ಕಹಾಕಲಾಗುತ್ತದೆ.

ರಿಲಯನ್ಸ್ ರೀಟೆಲ್‌ನಲ್ಲಿ ದೈತ್ಯ ಕಂಪನಿಗಳ ಹೂಡಿಕೆ ಸುದ್ದಿ ಪರಿಣಾಮ

ರಿಲಯನ್ಸ್ ರೀಟೆಲ್‌ನಲ್ಲಿ ದೈತ್ಯ ಕಂಪನಿಗಳ ಹೂಡಿಕೆ ಸುದ್ದಿ ಪರಿಣಾಮ

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿದ ಇತರ ಖಾಸಗಿ ಕಂಪನಿಗಳು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ (RRVL)ನಲ್ಲೂ ಹೂಡಿಕೆಗೆ ಸಜ್ಜಾಗಿದೆ ಎಂದು ಸುದ್ದಿ ಹೊರಬಂದ ಬಳಿಕ ಷೇರುಗಳು ಏರತೊಡಗಿದವು.

ಬುಧವಾರ, ಆರ್‌ಆರ್‌ವಿಎಲ್‌ನಲ್ಲಿ ಅಮೆರಿಕಾದ ಸಿಲ್ವರ್ ಲೇಕ್ ಕಂಪನಿಯು 7,500 ಕೋಟಿ ರೂ. ಹೂಡಿಕೆಯ ಮೂಲಕ ರಿಟೇಲ್ ವ್ಯವಹಾರದಲ್ಲಿ ಶೇಕಡಾ 1.75 ಪಾಲನ್ನು ಪಡೆಯಿತು.

 

ಅಮೆಜಾನ್‌ನೊಂದಿಗೆ ರಿಲಯನ್ಸ್ ಮಾತುಕತೆ

ಅಮೆಜಾನ್‌ನೊಂದಿಗೆ ರಿಲಯನ್ಸ್ ಮಾತುಕತೆ

ರಿಲಯನ್ಸ್ ಇಂಡಸ್ಟ್ರೀಸ್ ಅಮೆಜಾನ್‌ನೊಂದಿಗೆ ರಿಲಯನ್ಸ್ ರಿಟೇಲ್‌ನಲ್ಲಿ ಶೇ. 40ರಷ್ಟು ಪಾಲನ್ನು 20 ಬಿಲಿಯನ್‌ ಡಾಲರ್‌ಗೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ ಎಂದು ಬ್ಲೂಮ್‌ಬರ್ಗ್ ಗುರುವಾರ ವರದಿ ಮಾಡಿದೆ. ಇದು ಆಗಿದ್ದೇ ಆದಲ್ಲಿ ಅಮೆಜಾನ್‌ನ ಅತಿದೊಡ್ಡ ವ್ಯವಹಾರವಾಗಿದೆ.

ಏತನ್ಮಧ್ಯೆ, ರಿಲಯನ್ಸ್ ರಿಟೇಲ್ ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್ ಮತ್ತು ಸಾರ್ವಭೌಮ ಸಂಪತ್ತು ನಿಧಿಗಳಾದ ಮುಬಡಾಲಾ ಇನ್ವೆಸ್ಟ್ಮೆಂಟ್ ಕಂ ಮತ್ತು ಅಬುಧಾಬಿ ಇನ್ವೆಸ್ಟ್ಮೆಂಟ್ ಅಥಾರಿಟಿ (ಎಡಿಐಎ) ಯಿಂದ 5 ಬಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಲು ನೋಡುತ್ತಿದೆ ಎಂದು ಮಿಂಟ್ ವರದಿ ಮಾಡಿದೆ. ಈ ಮೂರು ಸಂಸ್ಥೆಗಳು ಈಗಾಗಲೇ ಈ ವರ್ಷದ ಆರಂಭದಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಹೂಡಿಕೆ ಮಾಡಿವೆ. ಕಂಪನಿಯು ಹೂಡಿಕೆಗಾಗಿ ಫೇಸ್‌ಬುಕ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ವರದಿಗಳೂ ಬಂದವು.

 

13 ಸಂಸ್ಥೆಗಳಿಂದ 1.52 ಲಕ್ಷ ಕೋಟಿ ಸಂಗ್ರಹ

13 ಸಂಸ್ಥೆಗಳಿಂದ 1.52 ಲಕ್ಷ ಕೋಟಿ ಸಂಗ್ರಹ

ಮೂರು ತಿಂಗಳಲ್ಲಿ ಗೂಗಲ್ ಮತ್ತು ಫೇಸ್‌ಬುಕ್ ಸೇರಿದಂತೆ 13 ಹಣಕಾಸು ಮತ್ತು ಕಾರ್ಯತಂತ್ರದ ಹೂಡಿಕೆದಾರರಿಂದ ರಿಲಯನ್ಸ್ ಜಿಯೋ 1,52,056 ಕೋಟಿ ರೂ.ಗಳನ್ನು ಸಂಗ್ರಹಿಸಿದ ನಂತರ ರಿಲಯನ್ಸ್ ರಿಟೇಲ್ ಅಂಬಾನಿಯ ಮುಂದಿನ ಗುರಿಯಾಗಿದೆ.

ಜುಲೈನಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ, ರಿಲಯನ್ಸ್ ರಿಟೇಲ್ ಜಾಗತಿಕವಾಗಿ ಬಲವಾದ ಹೂಡಿಕೆದಾರರ ಆಸಕ್ತಿಯನ್ನು ಪಡೆಯುತ್ತಿದೆ ಎಂದು ಹೇಳಿದರು. ವರದಿಗಳ ಪ್ರಕಾರ, ರಿಲಯನ್ಸ್ ರಿಟೇಲ್ ಸುಮಾರು ಶೇ. 10ರಷ್ಟು ಹೊಸ ಷೇರುಗಳಲ್ಲಿ ಮಾರಾಟ ಮಾಡುವ ಮೂಲಕ 5.7 ಬಿಲಿಯನ್ ಸಂಗ್ರಹಿಸಲು ನೋಡುತ್ತಿದೆ.

ರಿಲಯನ್ಸ್ ರಿಟೇಲ್ ಪ್ರಸ್ತುತ ದೇಶಾದ್ಯಂತ ಸುಮಾರು 12,000 ಮಳಿಗೆಗಳನ್ನು ಹೊಂದಿದೆ ಮತ್ತು ಇದು ಇತ್ತೀಚೆಗೆ ಕಿಶೋರ್ ಬಿಯಾನಿಯ ಫ್ಯೂಚರ್ ಗ್ರೂಪ್‌ನ ಚಿಲ್ಲರೆ ಮತ್ತು ಲಾಜಿಸ್ಟಿಕ್ಸ್ ವ್ಯವಹಾರವನ್ನು 24,713 ಕೋಟಿ ರೂ.ಗಳ ಮಾರಾಟದಲ್ಲಿ ಸ್ವಾಧೀನಪಡಿಸಿಕೊಂಡಿತು. ಇದರಲ್ಲಿ ಅದರ ಪ್ರಮುಖ ಹೈಪರ್‌ಮಾರ್ಕೆಟ್ ಸ್ವರೂಪವಾದ ಬಿಗ್‌ಬಜಾರ್, ಎಫ್‌ಬಿಬಿ, ಫುಡ್‌ಹಾಲ್ ಸೇರಿದಂತೆ 2000 ಕ್ಕೂ ಹೆಚ್ಚು ಮಳಿಗೆಗಳನ್ನು ತನ್ನದಾಗಿಸಿಕೊಂಡಿದೆ.

 

ರಿಲಯನ್ಸ್‌ನ ಪೂರ್ತಿ ಸಂಸ್ಥೆ, ಜಗತ್ತಿನ ಶ್ರೀಮಂತ ವ್ಯಕ್ತಿಯ ಸಂಪತ್ತಿಗೆ ಸಮ

ರಿಲಯನ್ಸ್‌ನ ಪೂರ್ತಿ ಸಂಸ್ಥೆ, ಜಗತ್ತಿನ ಶ್ರೀಮಂತ ವ್ಯಕ್ತಿಯ ಸಂಪತ್ತಿಗೆ ಸಮ

ರಿಲಯನ್ಸ್ ಭಾರತದಲ್ಲಿ 200 ಬಿಲಿಯನ್ ಡಾಲರ್ ಮೌಲ್ಯವನ್ನು ಸಂಪಾದಿಸಿದ ಮೊದಲ ಕಂಪನಿ ಎಂಬ ಹೆಗ್ಗುರುತು ಪಡೆದಿದ್ದು ಒಂದೆಡೆಯಾದರೆ, ಈ ಕಂಪನಿಯ ಇಡೀ ಸಂಪತ್ತು ಜಗತ್ತಿನ ಶ್ರೀಮಂತ ವ್ಯಕ್ತಿ ಅಮೆಜಾನ್‌ನ ಸಿಇಒ ಜೆಫ್‌ ಬೇಜೋಸ್‌ರ ಆಸ್ತಿಗೆ ಸಮನಾಗಿದೆ.

ಅಮೆಜಾನ್ ಸಂಸ್ಥಾಪಕ ಜೆಫ್‌ ಬೇಜೋಸ್ ಇತ್ತೀಚೆಗೆ 200 ಬಿಲಿಯನ್ ಡಾಲರ್ ಸಂಪತ್ತನ್ನ ಗಳಿಸಿದ ವಿಶ್ವದ ಮೊದಲ ವ್ಯಕ್ತಿ ಎಂಬ ಸಾಧನೆ ಮಾಡಿದರು.

 

English summary

Reliance Industries becomes first Indian company to be valued at $200 billion

With the surge in share price, Reliance company hit a market capitalization of Rs 14.63 lakh crore, making it the first Indian company to hit a market capitalization of $200 billion.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X