For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ಷೇರು ದಾಖಲೆ ಜಿಗಿತ; ದಿನಾಂತ್ಯಕ್ಕೆ 1509.80

|

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಷೇರುಗಳು ಮಂಗಳವಾರ ರು. 51.30 ಏರಿಕೆಯಾಗಿ, ರು. 1509.80ಕ್ಕೆ ದಿನಾಂತ್ಯದ ವಹಿವಾಟು ಮುಗಿಸಿದೆ. ಮಂಗಳವಾರದಂದು ಈ ವರ್ಷದ ದಾಖಲೆ ಮೊತ್ತವಾದ ರು. 1514.95 ಅನ್ನು ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ಷೇರುಗಳು ಮುಟ್ಟಿದವು.

ಆ ಮೂಲಕ ಕಂಪೆನಿಯ ಮಾರುಕಟ್ಟೆ ಬಂಡವಾಳವು ದಾಖಲೆಯ 9.50 ಲಕ್ಷ ಕೋಟಿ ರುಪಾಯಿಯನ್ನು ಮೀರಿ ನಿಂತಿತು. ಈ ಹಿಂದೆ, ಅಕ್ಟೋಬರ್ 31ನೇ ತಾರೀಕಿನಂದು ಕಂಪೆನಿಯ ಷೇರುಗಳು ರು. 1490 ತಲುಪಿ ದಾಖಲೆ ಬರೆದಿತ್ತು. ಅಕ್ಟೋಬರ್ 18ನೇ ತಾರೀಕಿನಂದು ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳವು 9 ಲಕ್ಷ ಕೋಟಿ ರುಪಾಯಿ ದಾಟುವ ಮೂಲಕ ಆ ಸಾಧನೆ ಮಾಡಿದ ಮೊದಲ ಕಂಪೆನಿ ಎಂಬ ಅಗ್ಗಳಿಕೆ ಪಡೆಯಿತು.

ಈ ವರೆಗೆ 2019ನೇ ಇಸವಿಯಲ್ಲಿ ಕಂಪೆನಿಯ ಷೇರು ಮೌಲ್ಯದಲ್ಲಿ 34 ಪರ್ಸೆಂಟ್ ಏರಿಕೆ ಆಗಿದೆ. ಅಂದ ಹಾಗೆ, ಇತರ ಟೆಲಿಕಾಂ ಕಂಪೆನಿಗಳಾದ ವೊಡಾಫೋನ್ ಐಡಿಯಾ ಹಾಗೂ ಏರ್ ಟೆಲ್ ಷೇರುಗಳ ಬೆಲೆಯಲ್ಲೂ ಸತತವಾಗಿ ಏರಿಕೆಯಾಗುತ್ತಿದೆ. ಮುಂದಿನ ತಿಂಗಳಿನಿಂದ ದರದಲ್ಲಿ ಏರಿಕೆ ಮಾಡುವ ಬಗ್ಗೆ ಘೋಷಣೆ ಮಾಡಿದ ಮೇಲೆ ಈ ಬೆಳವಣಿಗೆ ಆಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರು ದಾಖಲೆ ಜಿಗಿತ; ದಿನಾಂತ್ಯಕ್ಕೆ 1509.80

ರಿಲಯನ್ಸ್ ನ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಪ್ರವೇಶ ಆದ ನಂತರ ಇದೇ ಮೊದಲ ಬಾರಿಗೆ ಟೆಲಿಕಾಂ ಕಂಪೆನಿಗಳು ದರ ಏರಿಕೆಗೆ ಮುಂದಾಗಿವೆ. ಅಂದಹಾಗೆ ಭಾರತದಲ್ಲಿನ ಮೊಬೈಲ್ ಡೇಟಾ ದರವು ಜಗತ್ತಿನಲ್ಲೇ ಅತ್ಯಂತ ಕಡಿಮೆಯದ್ದಾಗಿದೆ. ಈಗ ಡಿಸೆಂಬರ್ 1, 2019ರಿಂದ ದರ ಏರಿಕೆ ಮಾಡಲು ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾ ಕಂಪೆನಿಗಳು ನಿರ್ಧರಿಸಿವೆ.

English summary

Reliance Industries First Indian Company Which Crossed Market Capitaliation 9.5 Trillion

Reliance Industries company shares made two major record on Tuesday in stock market. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X