For Quick Alerts
ALLOW NOTIFICATIONS  
For Daily Alerts

ಫಾರ್ಚೂನ್ ಗ್ಲೋಬಲ್ 500 ಕಂಪೆನಿ: ಹೊಸ ದಾಖಲೆ ಬರೆದ ರಿಲಯನ್ಸ್

|

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಭಾರತದ ಕಾರ್ಪೊರೇಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ. ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಹತ್ತು ಸ್ಥಾನಗಳ ಜಿಗಿತ ಕಂಡು ವಿಶ್ವದ ಟಾಪ್ 100 ಕಂಪೆನಿಯೊಳಗೆ ಬಂದಿದೆ. ತೈಲದಿಂದ ಟೆಲಿಕಾಂ ತನಕ ವಿವಿಧ ಉದ್ಯಮದಲ್ಲೂ ತೊಡಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಫಾರ್ಚೂನ್ 500 ಪಟ್ಟಿಯಲ್ಲಿ 96ನೇ ಸ್ಥಾನಕ್ಕೆ ಏರಿದೆ.

2020ನೇ ಇಸವಿಯ ಶ್ರೇಯಾಂಕದ ಪಟ್ಟಿಯನ್ನು ಫಾರ್ಚೂನ್ ಮಂಗಳವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಟಾಪ್ 100 ಕಂಪೆನಿಯೊಳಗೆ ರಿಲಯನ್ಸ್ ಸ್ಥಾನ ಗಿಟ್ಟಿಸಿದೆ. ಈ ವರೆಗೆ ಭಾರತದ ಯಾವುದೇ ಕಂಪೆನಿ ಫಾರ್ಚೂನ್ ಗ್ಲೋಬಲ್ 500 ಪಟ್ಟಿಯಲ್ಲಿ ಇಂಥ ಸಾಧನೆಯನ್ನು ಮಾಡಿಲ್ಲ.

ರಿಲಯನ್ಸ್ ನಲ್ಲಿ 1500 ಕೋಟಿ USD ಹೂಡಿಕೆ ಮೇಲೆ ಈಗಲೂ ಅರಾಮ್ಕೋ ಕಣ್ಣು

 

2012ನೇ ಇಸವಿಯಲ್ಲಿ ಟಾಪ್ ನೂರರ ಪಟ್ಟಿಯೊಳಗೆ ಬಂದಿದ್ದ ರಿಲಯನ್ಸ್, 99ನೇ ಸ್ಥಾನದಲ್ಲಿ ನಿಂತಿತ್ತು. ಆದರೆ 2016ರಲ್ಲಿ 215ನೇ ಸ್ಥಾನಕ್ಕೆ ಜಾರಿತ್ತು. ಇನ್ನು ಭಾರತದ್ದೇ ಆದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 151ನೇ ಸ್ಥಾನದಲ್ಲಿದ್ದರೆ, ಒಎನ್ ಜಿಸಿ 190, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 221, ಬಿಪಿಸಿಎಲ್ 309, ಟಾಟಾ ಮೋಟಾರ್ಸ್ 337 ಹಾಗೂ ರಾಜೇಶ್ ಎಕ್ಸ್ ಪೋರ್ಟ್ಸ್ 462ನೇ ಸ್ಥಾನದಲ್ಲಿದೆ.

ಫಾರ್ಚೂನ್ ಗ್ಲೋಬಲ್ 500 ಕಂಪೆನಿ: ಹೊಸ ದಾಖಲೆ ಬರೆದ ರಿಲಯನ್ಸ್

ಮಾರ್ಚ್ 31, 2020ಕ್ಕೆ ಅಥವಾ ಅದಕ್ಕೂ ಮುನ್ನ ಆರ್ಥಿಕ ವರ್ಷದಲ್ಲಿ ಕಂಪೆನಿಗಳು ಗಳಿಸಿದ ಒಟ್ಟು ಆದಾಯದ ಮೇಲೆ ಈ ಶ್ರೇಯಾಂಕ ನೀಡಲಾಗಿದೆ ಎಂದು ಫಾರ್ಚೂನ್ ತಿಳಿಸಿದೆ. ಇನ್ನು ಈ ಪಟ್ಟಿಯ ಪ್ರಕಾರ ಮೊದಲ ಆರು ಸ್ಥಾನದಲ್ಲಿ ಕ್ರಮವಾಗಿ ವಾಲ್ ಮಾರ್ಟ್, ಸೈನೋಪೆಕ್ ಗ್ರೂಪ್, ಸ್ಟೇಟ್ ಗ್ರಿಡ್, ಚೀನಾ ನ್ಯಾಷನಲ್ ಪೆಟ್ರೋಲಿಯಂ ಹಾಗೂ ರಾಯಲ್ ಡಚ್ ಶೆಲ್ ಹಾಗೂ ಸೌದಿ ಅರಾಮ್ಕೋ ಇದೆ.

English summary

Reliance Industries In Top 100 Companies Of Fortune Global 500 List

Fortune Tuesday released global 500 companies list. Reliance Industries stand in 96th position. This is the best record made by any Indian company.
Company Search
COVID-19