For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ಗೆ (RIL) ಈಗ ಯಾವ ಸಾಲವೂ ಇಲ್ಲ

|

ರಿಲಯನ್ಸ್ ಇಂಡಸ್ಟ್ರೀಸ್ ಗೆ (RIL) ಈಗ ಯಾವ ಸಾಲವೂ ಇಲ್ಲ ಎಂದು ಶುಕ್ರವಾರ ಘೋಷಣೆ ಮಾಡಿದೆ. ಕಂಪೆನಿಗೆ 1.61 ಲಕ್ಷ ಕೋಟಿ ನಿವ್ವಳ ಸಾಲ ಇತ್ತು. 1.75 ಲಕ್ಷ ಕೋಟಿ ರುಪಾಯಿಯನ್ನು ಈಚೆಗೆ ಸಂಗ್ರಹ ಮಾಡಿತ್ತು ರಿಲಯನ್ಸ್. ಆ ಪೈಕಿ 1.15 ಲಕ್ಷ ಕೋಟಿ ರುಪಾಯಿಯನ್ನು ಜಿಯೋ ಪ್ಲಾಟ್ ಪಾರ್ಮ್ ನಲ್ಲಿನ 24.71% ಷೇರನ್ನು ಹತ್ತು ಹೂಡಿಕೆದಾರರಿಗೆ ಮಾರಾಟ ಮಾಡುವ ಮೂಲಕ ಸಂಗ್ರಹಿಸಿತ್ತು.

ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಷೇರುಗಳ ರೈಟ್ಸ್ ಇಶ್ಯೂ ಮೂಲಕ 53,124.20 ಕೋಟಿ ರುಪಾಯಿ ಸಂಗ್ರಹಿಸಲಾಗಿತ್ತು. ಬ್ರಿಟಿಷ್ ಪೆಟ್ರೋಲಿಯಂನಲ್ಲಿದ್ದ ಪಾಲು ಮಾರಾಟವೂ ಒಳಗೊಂಡಂತೆ ಸಂಗ್ರಹ ಆಗಿದ್ದು 1.75 ಲಕ್ಷ ಕೋಟಿ ರುಪಾಯಿಗೂ ಹೆಚ್ಚಾಗಿತ್ತು. ಮಾರ್ಚ್ 31, 2020ಕ್ಕೆ ಕಂಪೆನಿಯ ನಿವ್ವಳ ಸಾಲ ಇದ್ದದ್ದು 1,61,035 ಕೋಟಿ ರುಪಾಯಿ. ಈ ಎಲ್ಲ ಹೂಡಿಕೆಗಳಿಂದ ರಿಲಯನ್ಸ್ ನಿವ್ವಳ ಸಾಲಮುಕ್ತ ಆಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

ಎರಡೂವರೆ ತಿಂಗಳೊಳಗೆ 1 ಲಕ್ಷ ಕೋಟಿಯ 9 ಡೀಲ್; ಇದು ಜಿಯೋ ಕಮಾಲ್ಎರಡೂವರೆ ತಿಂಗಳೊಳಗೆ 1 ಲಕ್ಷ ಕೋಟಿಯ 9 ಡೀಲ್; ಇದು ಜಿಯೋ ಕಮಾಲ್

58 ದಿನಗಳಲ್ಲಿ 10 ಹೂಡಿಕೆದಾರರು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ಆಗಿರುವ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 24.71 ಪರ್ಸೆಂಟ್ ಷೇರು ಪಾಲನ್ನು 1.15 ಲಕ್ಷ ಕೋಟಿ ರುಪಾಯಿಗೆ ಖರೀದಿಸುವ ವ್ಯವಹಾರದ ಒಪ್ಪಂದ ಮಾಡಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಗೆ (RIL) ಈಗ ಯಾವ ಸಾಲವೂ ಇಲ್ಲ

ಫೇಸ್ ಬುಕ್, ಜನರಲ್ ಅಟ್ಲಾಂಟಿಕ್, ಟಿಪಿಜಿ, ಕೆಕೆಆರ್, ಸಿಲ್ವರ್ ಲೇಕ್, ಎಲ್ ಕ್ಯಾಟರ್ ಟನ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್, ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ ಮತ್ತು ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ, ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ಹೂಡಿಕೆ ಮಾಡಿವೆ.

English summary

Reliance Industries Now Net Debt Free Company

Now, Reliance Industries become net debt free company. This announcement made by company on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X