For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಮಾರ್ಟ್ ನಿಂದ ದೇಶಾದ್ಯಂತ ಸೇವೆ ವಿಸ್ತರಣೆ

|

ವಾಟ್ಸಾಪ್ ಮೂಲಕ ಆರ್ಡರ್ ಪಡೆದು, ಆನ್ ಲೈನ್ ಸೇವೆ ನೀಡುವುದನ್ನು ರಿಲಯನ್ಸ್ ಜಿಯೋ ಮಾರ್ಟ್ ಭಾರತದ ವಿವಿಧ ನಗರಗಳಲ್ಲಿ ಶನಿವಾರ ವಿಸ್ತರಿಸಿದೆ. ಈ ವಿಚಾರವನ್ನು ರಿಲಯನ್ಸ್ ರೀಟೇಲ್ ಗ್ರೋಸರಿ ಸಿಇಒ ದಾಮೋದರ್ ಮಲ್ ಅವರು ಖಚಿತ ಮಾಡಿದ್ದಾರೆ. ಟ್ವೀಟ್ ಮಾಡಿರುವ ಅವರು, ವೆಬ್ ಸೈಟ್ ಕಾರ್ಯ ನಿರ್ವಹಿಸುವುದಕ್ಕೆ ಆರಂಭಿಸಿದೆ. ಗ್ರಾಹಕರು ಆರ್ಡರ್ ನೀಡಬಹುದು ಎಂದಿದ್ದಾರೆ.

ಸದ್ಯಕ್ಕೆ ಆಪಲ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಗೆ ದೊರೆಯುತ್ತಿಲ್ಲ. ಆದರೆ jiomart.comನಿಂದ ಡೌನ್ ಲೋಡ್ ಮಾಡಬಹುದು ಎಂದು ತಿಳಿಸಲಾಗಿದೆ. ಭಾರತದಲ್ಲಿ 40 ಕೋಟಿ ಮಂದಿ ವಾಟ್ಸಾಪ್ ಬಳಕೆದಾರರು ಇದ್ದಾರೆ. ಫೇಸ್ ಬುಕ್ ನವರ ವಾಟ್ಸಾಪ್ ಬಳಸಿಕೊಂಡು ಜಿಯೋಮಾರ್ಟ್ ಹೆಚ್ಚು ಗ್ರಾಹಕರನ್ನು ತಲುಪುವ ಪ್ರಯತ್ನ ಮಾಡುತ್ತಿದೆ.

ಜಿಯೋಮಾರ್ಟ್ ನಲ್ಲಿ ಏನೇನು ಸಿಗುತ್ತವೆ?

ಜಿಯೋಮಾರ್ಟ್ ನಲ್ಲಿ ಏನೇನು ಸಿಗುತ್ತವೆ?

ಜಿಯೋಮಾರ್ಟ್ ವೆಬ್ ಸೈಟ್ ನಲ್ಲಿ ಯಾವ ಉತ್ಪನ್ನಗಳು ದೊರೆಯಲಿವೆ ಎಂಬ ಬಗ್ಗೆ ಮಾಹಿತಿ ಇದೆ. ಹಣ್ಣು, ತರಕಾರಿ, ಡೇರಿ, ಬೇಕರಿ, ಪರ್ಸನಲ್ ಕೇರ್, ಹೋಮ್ ಕೇರ್ ಮತ್ತು ಬೇಬಿ ಕೇರ್ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಪ್ರಾಡಕ್ಟ್ ಗಳು ದೊರೆಯುತ್ತವೆ. ರಿಲಯನ್ಸ್ ಫ್ರೆಷ್, ರಿಲಯನ್ಸ್ ಸ್ಮಾರ್ಟ್ ನಲ್ಲಿನ ಗ್ರಾಹಕರ ಮಾಹಿತಿಯನ್ನು ಜಿಯೋಮಾರ್ಟ್ ಗೆ ಕೂಡ ಇಂಟಿಗ್ರೇಟ್ ಮಾಡಲಾಗಿದೆ.

ಹಣ ಪಾವತಿ ವಿಧಾನ ಹೇಗೆ

ಹಣ ಪಾವತಿ ವಿಧಾನ ಹೇಗೆ

ಸದ್ಯಕ್ಕೆ ಜಿಯೋಮಾರ್ಟ್ ವೆಬ್ ಸೈಟ್ ನಲ್ಲಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣ ಬಳಕೆ ಪಾವತಿಸಬಹುದು. ಇನ್ನಷ್ಟು ಪಾವತಿ ಆಯ್ಕೆಗಳನ್ನು ಮುಂಬರುವ ದಿನಗಳಲ್ಲಿ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರ್ಡರ್ ಮೌಲ್ಯ 750 ರುಪಾಯಿಗಿಂತ ಕಡಿಮೆ ಇದ್ದಲ್ಲಿ 25 ರುಪಾಯಿ ಡೆಲಿವರಿ ಶುಲ್ಕ ವಿಧಿಸಲಾಗುತ್ತದೆ.

ಕಿರಾಣಿ ಅಂಗಡಿಗಳ ಜತೆ ಒಪ್ಪಂದ

ಕಿರಾಣಿ ಅಂಗಡಿಗಳ ಜತೆ ಒಪ್ಪಂದ

ಜಿಯೋ ಮಾರ್ಟ್ ನಿಂದ ಕಿರಾಣಿ ಅಂಗಡಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಗ್ರಾಹಕರು ಆನ್ ಲೈನ್ ಮೂಲಕ ಆರ್ಡರ್ ಮಾಡಲು ಅನುಕೂಲ ಆಗಲಿದ್ದು, ದಿನಸಿ ಪದಾರ್ಥಗಳು ಈ ಮಳಿಗೆಗಳಿಂದ ಡೆಲಿವರಿ ಆಗುತ್ತವೆ. ಜಿಯೋಮಾರ್ಟ್ ನಿಂದ 11,784 ಆಫ್ ಲೈನ್ ಸ್ಟೋರ್ ಗಳನ್ನು ವಿಲೀನ ಮಾಡುವುದಕ್ಕೆ ಎದುರು ನೋಡಲಾಗುತ್ತಿದೆ. ಗ್ರಾಹಕರಿಗೆ ಆನ್ ಲೈನ್ ಅಥವಾ ಆಫ್ ಲೈನ್ ಯಾವುದರಿಂದಾದರೂ ಸರಿ, ಸರಕು ದೊರೆಯುವಂತಾಗಲಿ ಎಂಬುದು ಉದ್ದೇಶ ಎಂದು ಕಂಪೆನಿ ಅಧಿಕಾರಿಗಳು ಹೇಳಿದ್ದಾರೆ.

ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಗಳ ಆರಂಭ

ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಗಳ ಆರಂಭ

ರಿಲಯನ್ಸ್ ನಿಂದ ಸ್ಥಳೀಯವಾಗಿ "ರಿಲಯನ್ಸ್ ಸ್ಮಾರ್ಟ್ ಪಾಯಿಂಟ್"ಗಳನ್ನು ಆರಂಭಿಸಲಾಗುತ್ತದೆ. ಇದರಿಂದ ಖರೀದಿ ಬಹಳ ಸುಲಭ ಹಾಗೂ ಅನುಕೂಲವಾಗುತ್ತದೆ. ಅಗತ್ಯ ಇದ್ದಲ್ಲಿ ಆನ್ ಲೈನ್ ಮೂಲಕ ಖರೀದಿಸಬಹುದು. ಮತ್ತು ಹತ್ತಿರದ ಮಳಿಗೆಗಳಿಂದ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಸಹ ಅವಕಾಶ ಇದೆ.

English summary

Reliance Jio Mart Goes Live Across India: Available Products And Service Details

Reliance Jiomart online service goes live nationwide, available products and service details here.
Story first published: Sunday, May 24, 2020, 9:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X