For Quick Alerts
ALLOW NOTIFICATIONS  
For Daily Alerts

ದಿಢೀರ್ ಬಂದ್ ಆದ ಜಿಯೋ ನೆಟ್ವರ್ಕ್; ಗ್ರಾಹಕರು ಕಂಗಾಲು

|

ಮೊಬೈಲ್ ನಮ್ಮ ಪಾಲಿಗೆ ಆಕ್ಸಿಜನ್ ರೀತಿ ಆಗಿಹೋಗಿದೆ. ನಾನಾ ರೀತಿಯಲ್ಲಿ ಮೊಬೈಲ್‌ಗೆ ಅವಲಂಬಿತರಾಗಿದ್ದೇವೆ. ಸ್ವಲ್ಪ ಹೊತ್ತು ಇಂಟರ್ನೆಟ್ ಇಲ್ಲವಾದರೆ, ಅಥವಾ ನೆಟ್ವರ್ಕ್ ಕೈಕೊಟ್ಟರೆ ಕೈ ಕಾಲು ಕಟ್ಟಿಹಾಕಿದ ಅನುಭವ ಬಹಳ ಮಂದಿಗೆ ಆಗಿರಬೇಕು. ನವೆಂಬರ್ 29, ಇಂದು ಮಂಗಳವಾರ ಬೆಳಗ್ಗೆ ರಿಲಾಯನ್ಸ್ ಜಿಯೋ ಗ್ರಾಹಕರಿಗೂ ಇಂಥದ್ದೊಂದು ಅನುಭವವಾಗಿದೆ. ಇಂದು ಬೆಳಗ್ಗೆ 6ರಿಂದ 9ಗಂಟೆಯವರೆಗೆ ಜಿಯೋ ನೆಟ್ವರ್ಕ್ ಭಗ್ನಗೊಂಡಿತ್ತು.

ಕುತೂಹಲವೆಂದರೆ ಬಹುತೇಕ ಜಿಯೋ ಬಳಕೆದಾರರಿಗೆ ಕರೆ ಮಾಡುವ ಮತ್ತು ಎಸ್ಸೆಮ್ಮೆಸ್ ಕಳುಹಿಸುವ ಸೇವೆ ಮಾತ್ರ ಈ 3 ಗಂಟೆ ಅವಧಿಯಲ್ಲಿ ಸ್ಥಗಿತಗೊಂಡಿತ್ತು. ಆದರೆ, ಡಾಟಾ ಮಾತ್ರ ಬಳಸಬಹುದಿತ್ತು.

ನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದೀರಾ? ಮಾರ್ಗೋಪಾಯಗಳಿವೆನೀವು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದೀರಾ? ಮಾರ್ಗೋಪಾಯಗಳಿವೆ

ಎಸ್ಸೆಮ್ಮೆಸ್ ನಿಂತ ಪರಿಣಾಮ ಜಿಯೋ ಬಳಕೆದಾರರು ಅಥೆಂಟಿಕೇಶನ್‌ಗೆ ಒಟಿಪಿ ಪಡೆಯಲೂ ಅಸಾಧ್ಯವಾಗಿತ್ತು. ಇಂಟರ್ನೆಟ್ ಚಾಲನೆಯಲ್ಲಿದ್ದುದ್ದರಿಂದ ಕರೆ ಮಾಡಲು ಜಿಯೋ ಯೂಸರ್‌ಗಳು ವಾಟ್ಸಾಪ್ ಕಾಲ್ ಸೇವೆ ಉಪಯೋಗಿಸಬಹುದಾದ್ದರಿಂದ ಧ್ವನಿ ಸಂವಹನಕ್ಕೆ ಅಡ್ಡಿ ಬರಲಿಲ್ಲ ಎಂಬುದು ಹೌದು.

ದಿಢೀರ್ ಬಂದ್ ಆದ ಜಿಯೋ ನೆಟ್ವರ್ಕ್; ಗ್ರಾಹಕರು ಕಂಗಾಲು

ರಿಲಾಯನ್ಸ್ ಜಿಯೋದ ನೆಟ್ವರ್ಕ್ ಸ್ಥಗಿತಗೊಂಡಿದ್ದು ಇದೇ ಮೊದಲಲ್ಲ. ಈ ವರ್ಷ ಹಲವು ಬಾರಿ ಈ ರೀತಿ ಅಡಚಣೆಗಳಾಗಿವೆ. ಫೆಬ್ರವರಿ, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲೂ ಜಿಯೋ ಡೌನ್ ಆಗಿತ್ತು. ಜಿಯೋ ನೆಟ್ವರ್ಕ್ ಕುಸಿದಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
https://twitter.com/Pratikmalviya36/status/1597411103935320064
"5ಜಿ ಸೇವೆ ಕೊಡಲು ಹೊರಟಿರುವ ಜಿಯೋಗೆ ಮೊದಲು ಸಾಮಾನ್ಯ ಕರೆ ಸೇವೆಯನ್ನು ಸರಿಯಾಗಿ ಕೊಡುವ ಕ್ಷಮತೆ ಇಲ್ಲ" ಎಂಬಂತಹ ಟೀಕೆಗಳು ಟ್ವಿಟ್ಟರ್‌ನಲ್ಲಿ ಕಾಣಸಿಕ್ಕವು.

English summary

Reliance Jio Network Crash On November 29th, Calling and SMS Services Back After 3 Hrs

Reliance Jio, one of India’s most popular telecom operators faced an outage earlier today and left many Jio users unable to make or receive calls as well as use SMS.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X