For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ತ್ರೈಮಾಸಿಕ ಲಾಭ ಶೇಕಡಾ 47.5ರಷ್ಟು ಜಿಗಿತ: 3,508 ಕೋಟಿ ರೂಪಾಯಿ

|

2020-21ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ತ್ರೈಮಾಸಿಕ ಲಾಭವು ಭರ್ಜರಿಯಾಗಿ ಏರಿಕೆಗೊಂಡಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಸುಮಾರು 47.5 ರಷ್ಟು ಹೆಚ್ಚಳಗೊಂಡು 3,508 ಕೋಟಿ ರೂ. ತಲುಪಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 2,379 ಕೋಟಿ ರೂ. ದಾಖಲಾಗಿತ್ತು. ಕಂಪನಿಯ ಪ್ರತಿ ಗ್ರಾಹಕರ ಆದಾಯ (ಎಆರ್‌ಪಿಯು) ನಾಲ್ಕನೇ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಗೆ 138.2 ರೂ.ಗೆ ಏರಿದ್ದು, ಪ್ರಸ್ತುತ 426 ಮಿಲಿಯನ್ ಗ್ರಾಹಕರನ್ನು ಹೊಂದಿದೆ.

ರಿಲಯನ್ಸ್ ಜಿಯೋ ತ್ರೈಮಾಸಿಕ ಲಾಭ ಶೇಕಡಾ 47.5ರಷ್ಟು ಜಿಗಿತ

ರಿಲಯನ್ಸ್ ಜಿಯೋ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದ ಜೊತೆಗೆ ಬಲವಾದ ಬೆಳವಣಿಗೆಯನ್ನು ವರದಿ ಮಾಡಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಒಟ್ಟು ಆದಾಯ 18,278 ಕೋಟಿ ರೂ. ಆಗಿದ್ದು, ಅದರ ನೆಟ್‌ವರ್ಕ್‌ನಲ್ಲಿ ಒಟ್ಟು ಡೇಟಾ 1,668 ಮಿಲಿಯನ್ ಜಿಬಿ ಆಗಿದೆ. ಇದು ಹಿಂದಿನ ವರ್ಷಕ್ಕಿಂತ ಶೇಕಡಾ 26.7 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ತ್ರೈಮಾಸಿಕದಲ್ಲಿ ಒಟ್ಟು ಧ್ವನಿ ಸಂಚಾರ 1,03,290 ಕೋಟಿ ನಿಮಿಷಗಳಾಗಿದ್ದು, ಈ ಮೂಲಕ ಶೇಕಡಾ 17.9 ರಷ್ಟು ಹೆಚ್ಚಳವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 13,227 ಕೋಟಿ ರೂ.ಗೆ ಏರಿದೆ. ಇದು ಕಳೆದ ವರ್ಷದ ಇದೇ ತ್ರೈಮಾಸಿಕಕ್ಕಿಂತ ಶೇಕಡಾ 108.4ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ರಿಲಯನ್ಸ್ 6,348 ಕೋಟಿ ರೂ. ನಷ್ಟಿತ್ತು.

English summary

Reliance Jio Q4 Profit Jumps 47.5 Percent: Rs 3,508 Crore

Reliance Jio, the telecom arm of Reliance Industries Limited (RIL), recorded a 47.5 percent year-on-year profit in the fourth quarter of financial year 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X