For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ವರ್ಕ್ ಫ್ರಮ್ ಹೋಮ್ ಯೋಜನೆ: ಉತ್ತಮ ಡೇಟಾ ಪ್ಯಾಕ್

|

ಕೋವಿಡ್-19 ಸಾಂಕ್ರಾಮಿಕವು ವಿಶ್ವದೆಲ್ಲೆಡೆ ವ್ಯಾಪಿಸಿ ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದುಹೋಗಿದೆ. ಆದರೂ ಕೊರೊನಾದಿಂದಾ ಮುಕ್ತಿ ಸಿಕ್ಕಿಲ್ಲ. ಭಾರತದಂತಹ ರಾಷ್ಟ್ರಗಳು ಈಗಲೂ ಕೂಡ ಅದರ ಪರಿಣಾಮ ಎದುರಿಸುತ್ತಿವೆ. ಇಂತಹ ಅವಧಿಯಲ್ಲಿ ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಧಿಯನ್ನು ವಿಸ್ತರಿಸಿವೆ.

 

ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಲು ಹೆಚ್ಚಿನ ಸಮಯದ ಜೊತೆಗೆ ಡೇಟಾ ಅವಶ್ಯಕತೆಯನ್ನು ಹೊಂದಿದ್ದಾರೆ. ಈ ಕಾರಣದಿಂದ ಉತ್ತಮವಾದ ಡೇಟಾ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

ರಿಲಯನ್ಸ್ ಜಿಯೋ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್

ರಿಲಯನ್ಸ್ ಜಿಯೋ ವರ್ಕ್ ಫ್ರಮ್ ಹೋಮ್ ಪ್ಲ್ಯಾನ್

ಭಾರತದ ಬೃಹತ್ ಟೆಲಿಕಾಂಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ಹಲವಾರು ಡೇಟಾ ಪ್ಲ್ಯಾನ್‌ಗಳನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಮನೆಯಿಂದಲೇ ಕೆಲಸ ಮಾಡುವವರಿಗೆ ಉತ್ತಮ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಯಾವುದು ಡೇಟಾ ಮತ್ತು ವೇಗ ಎರಡೂ ಅತ್ಯುತ್ತಮವಾಗಿವೆ ಎಂಬುದನ್ನು ಮುಂದೆ ತಿಳಿಯಿರಿ.

  151 ರೂಪಾಯಿ ಯೋಜನೆ

151 ರೂಪಾಯಿ ಯೋಜನೆ

ಮನೆಯಿಂದಲೇ ಕೆಲಸ ಮಾಡುವವರಿಗೆ 151 ರೂಪಾಯಿಗಳ ಯೋಜನೆಯು ಅತ್ಯುತ್ತಮ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ, ನೀವು 30 ಜಿಬಿ ಡೇಟಾವನ್ನು ಪಡೆಯುತ್ತೀರಿ, ಅದು 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.

ಈ ಯೋಜನೆಯು ಉತ್ತಮ ವರ್ಕ್ ಫ್ರಮ್ ಯೋಜನೆಯಾಗಿದ್ದು, ಇದು ಮನೆಯಿಂದಲೇ ಕೆಲಸ ಮಾಡುವವರಿಗೆ ಹೆಚ್ಚಿನ ಸಹಾಯವಾಗುತ್ತದೆ. ನಿಮ್ಮ ಸಾಮಾನ್ಯ ಪ್ಯಾಕ್ ಡೇಟಾ ಖಾಲಿಯಾದಾಗ ಈ ಡೇಟಾ ಯೋಜನೆ ಸಕ್ರಿಯಗೊಳ್ಳುತ್ತದೆ.

201 ರೂಪಾಯಿ ಯೋಜನೆ
 

201 ರೂಪಾಯಿ ಯೋಜನೆ

ರಿಲಯನ್ಸ್‌ ಜಿಯೋ 201 ರೂಪಾಯಿ ಯೋಜನೆಯು 30 ದಿನಗಳ ಅವಧಿಯನ್ನು ಹೊಂದಿದ್ದು, 40 ಜಿಬಿ ಡೇಟಾವನ್ನು ಒದಗಿಸಲಾಗಿದೆ. ಉಳಿದ ರೀಚಾರ್ಜ್ ಯೋಜನೆಯಂತೆ, ದೈನಂದಿನ ಡೇಟಾ ಮಿತಿ ಅವಧಿ ಮುಗಿದ ನಂತರ ರೂ 201 ರ ಡೇಟಾ ಯೋಜನೆ ಸಕ್ರಿಯಗೊಳ್ಳುತ್ತದೆ. ಇದರಲ್ಲಿ ನೀವು ಪೂರ್ಣ 4 ಜಿ ಹೈಸ್ಪೀಡ್‌ನಲ್ಲಿ ಇಂಟರ್ನೆಟ್ ಪಡೆಯುತ್ತೀರಿ.

251 ರೂಪಾಯಿ ಯೋಜನೆ

251 ರೂಪಾಯಿ ಯೋಜನೆ

ಇದಲ್ಲದೆ, ಜಿಯೋನ ಡೇಟಾ ಪ್ಯಾಕ್‌ನಿಂದ ಮತ್ತೊಂದು ಉತ್ತಮ ಡೇಟಾ ಯೋಜನೆಯೆಂದರೆ 251 ರೂಪಾಯಿ ಪ್ಲ್ಯಾನ್ ಆಗಿದೆ. ಪ್ರತಿದಿನ ಹೆಚ್ಚಿನ ಇಂಟರ್ನೆಟ್ ಅಗತ್ಯವಿರುವವರಿಗೆ ಈ ಡೇಟಾ ಪ್ಯಾಕ್ ವಿಶೇಷವಾಗಿದೆ. ಈ ಪೂರ್ವ-ಪಾವತಿಸಿದ ಡೇಟಾ ಯೋಜನೆಯಲ್ಲಿ ಗ್ರಾಹಕರು 50 ಜಿಬಿ ಡೇಟಾವನ್ನು ಪಡೆಯುತ್ತಾರೆ. ಉಳಿದ ಯೋಜನೆಯಂತೆ, ಈ ಯೋಜನೆಯು 30 ದಿನಗಳ ಮಾನ್ಯತೆಯನ್ನು ಸಹ ನೀಡುತ್ತದೆ

ವಿಶೇಷವೆಂದರೆ ಈ ಡೇಟಾ ಯೋಜನೆಗೆ ದೈನಂದಿನ ಮಿತಿಯಿಲ್ಲ. ಈ ಯೋಜನೆಯನ್ನು ನಿಮ್ಮ ಮೂಲ ಯೋಜನೆಗೆ ಸೇರಿಸಲಾಗುತ್ತದೆ ಮತ್ತು ನಿಮ್ಮ ಸಾಮಾನ್ಯ ಡೇಟಾ ಯೋಜನೆ ಮಿತಿ ಮುಕ್ತಾಯಗೊಂಡಾಗ ಇದನ್ನು ಬಳಸಬಹುದು.

English summary

Reliance Jio Work From Home Best Plans

Reliance Jio Introdued work from home plans for customers. Here the details
Story first published: Monday, May 10, 2021, 13:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X