For Quick Alerts
ALLOW NOTIFICATIONS  
For Daily Alerts

ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್‌ ಇಂಡಸ್ಟ್ರೀಸ್‌

|

2020-21ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್ ಭಾರೀ ಲಾಭಗಳಿಸಿದೆ. ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಡಿಸೆಂಬರ್ 2020 ರ ತ್ರೈಮಾಸಿಕದಲ್ಲಿ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡಾ 40.48ರಷ್ಟು ಮತ್ತು ವರ್ಷದ ಹಿಂದಿನ ಅವಧಿಯಲ್ಲಿ ಶೇಕಡಾ 25.78 ರಷ್ಟು ಏರಿಕೆಯಾಗಿದೆ.

ಅಕ್ಟೋಬರ್-ಡಿಸೆಂಬರ್ 2020 ರ ತ್ರೈಮಾಸಿಕದಲ್ಲಿ ಕಂಪೆನಿಯ ನಿವ್ವಳ ಲಾಭ 15,015 ಕೋಟಿ ರುಪಾಯಿ ಬಂದಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದಲ್ಲಿ 41.6% ಲಾಭ ಹೆಚ್ಚಾಗಿದೆ

ತ್ರೈಮಾಸಿಕ ಆಧಾರದ ಮೇಲೆ ಕಂಪನಿಯ ಒಟ್ಟು ಆದಾಯವು ಶೇಕಡಾ 6.64 ರಷ್ಟು ಏರಿಕೆಯಾದರೆ, ಅದು ವರ್ಷದಿಂದ ವರ್ಷಕ್ಕೆ ಶೇಕಡಾ 19.94 ರಷ್ಟು ಕುಸಿದಿದೆ. ಕಂಪನಿಯ ಒಟ್ಟು ಆದಾಯವು ಡಿಸೆಂಬರ್ ತ್ರೈಮಾಸಿಕದಲ್ಲಿ 1,28,450 ಕೋಟಿ ರೂ.ಗಳಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ 1,20,444 ಕೋಟಿ ರೂ. ಮತ್ತು ಒಂದು ವರ್ಷದ ಹಿಂದಿನ ತ್ರೈಮಾಸಿಕದಲ್ಲಿ 1,60,447 ಕೋಟಿ ರೂ. ಆಗಿತ್ತು.

ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್‌ ಇಂಡಸ್ಟ್ರೀಸ್‌

ಕೊರೊನಾ ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ 50,000 ಹೊಸ ಉದ್ಯೋಗಗಳನ್ನು ನೀಡಿತು. ಈ ತ್ರೈಮಾಸಿಕದಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳ ಆದಾಯವು 22,858 ಕೋಟಿ ರೂ. (ಅನುಕ್ರಮವಾಗಿ) 5.3% ಹೆಚ್ಚಾಗಿದೆ.

English summary

Reliance Q3 Result: Profit UP 40%, Revenue Down 22%

Reliance Industries Limited (RIL) on Friday reported 12.5 per cent year-on-year growth in consolidated net profit at Rs 13,101 crore
Story first published: Saturday, January 23, 2021, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X