For Quick Alerts
ALLOW NOTIFICATIONS  
For Daily Alerts

ಜಸ್ಟ್‌ ಡಯಲ್‌ನ 3,497 ಕೋಟಿ ರೂ. ಮೌಲ್ಯದ ಷೇರುಗಳನ್ನ ಖರೀದಿಸಿದ ರಿಲಯನ್ಸ್‌ ರೀಟೈಲ್

|

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್, ಜಸ್ಟ್ ಡಯಲ್ ಲಿಮಿಟೆಡ್‌ನಲ್ಲಿ ಒಟ್ಟು 3,497 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನ ಸ್ವಾಧೀನ ಪಡಿಸಿಕೊಂಡಿರುವುದಾಗಿ ಪ್ರಕಟಿಸಿದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್, ಶೇ 40.95ರಷ್ಟು ಪಾಲು ಹೊಂದಲಿದೆ ಮತ್ತು ಸ್ವಾಧೀನ ನಿಯಮಾವಳಿಗಳಿಗೆ ಅನುಗುಣವಾಗಿ ಶೇ 26.0ರವರೆಗೆ ಸ್ವಾಧೀನಕ್ಕೆ ಮುಕ್ತ ಆಹ್ವಾನ ನೀಡಲಿದೆ.

ಇನ್ನು ಜಸ್ಟ್‌ ಡಯಲ್‌ ಪ್ರಮೋಟರ್ ವಿಎಸ್ಎಸ್ ಮಣಿ ಅವರು ಜಸ್ಟ್ ಡಯಲ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.

ಜಸ್ಟ್‌ ಡಯಲ್‌ನ  3,497 ಕೋಟಿ ಮೌಲ್ಯದ ಷೇರುಗಳನ್ನ ಖರೀದಿಸಿದ ರಿಲಯನ್ಸ್

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ("ಆರ್‌ಆರ್‌ವಿಎಲ್"), ಜಸ್ಟ್ ಡಯಲ್ ಲಿಮಿಟೆಡ್ ("ಜಸ್ಟ್ ಡಯಲ್") ಮತ್ತು ವಿಎಸ್‌ಎಸ್‌ ಮಣಿ ಮತ್ತು ಇತರರು ಶುಕ್ರವಾರ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳಲ್ಲಿರುವ ಅಂಶಗಳೆಂದರೆ:

A) ಪ್ರತಿ ಷೇರಿಗೆ 1,022.25 ರೂಪಾಯಿಯ ದರದಲ್ಲಿ 2.12 ಕೋಟಿ ಈಕ್ವಿಟಿ ಷೇರುಗಳ ಆದ್ಯತೆಯ ಹಂಚಿಕೆ (ಆದ್ಯತೆ ಬಳಿಕದ ಷೇರು ಬಂಡವಾಳದ 25.33% ಕ್ಕೆ ಸಮ)
B) ವಿಎಸ್ಎಸ್ ಮಣಿಯಿಂದ 1.31 ಕೋಟಿ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ 1,020.00 ರೂಪಾಯಿ ದರದಂತೆ (15.62%) ಆದ್ಯತೆ ನಂತರದ ಷೇರು ಬಂಡವಾಳಕ್ಕೆ ಸಮ) ಆರ್‌ಆರ್‌ವಿಎಲ್ ಸ್ವಾಧೀನಪಡಿಸಿಕೊಳ್ಳುವುದು.
C) ಪಾರ್ಟಿಗಳ ನಡುವೆ ನಿರ್ದಿಷ್ಟ ಹಕ್ಕುಗಳು ಮತ್ತು ಬಾಧ್ಯತೆಗಳ ನಿರ್ವಹಣೆಯ ಕುರಿತಾದ ಷೇರುದಾರರ ಒಪ್ಪಂದ.

ಆರ್‌ಆರ್‌ವಿಎಲ್, ಸೆಬಿ ಸ್ವಾಧೀನ ನಿಯಮಗಳಿಗೆ ಅನುಗುಣವಾಗಿ ಜಸ್ಟ್ ಡಯಲ್‌ನ 2.17 ಕೋಟಿವರೆಗಿನ ಈಕ್ವಿಟಿ ಷೇರುಗಳನ್ನು, ಅಂದರೆ 26.00%ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಾಗಿ ಜಸ್ಟ್ ಡಯಲ್‌ನ ಸಾರ್ವಜನಿಕ ಷೇರುದಾರರಿಗೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಲಿದೆ.

ವಿಎಸ್ಎಸ್ ಮಣಿ ಅವರು ಜಸ್ಟ್ ಡಯಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮುಂದಿನ ಹಂತದ ಬೆಳವಣಿಗೆಯತ್ತ ಮುನ್ನಡೆಸುವ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಈ ಒಪ್ಪಂದದ ಕುರಿತು ಮಾತನಾಡಿದ ಆರ್‌ಆರ್‌ವಿಎಲ್ ನಿರ್ದೇಶಕಿ ಇಶಾ ಅಂಬಾನಿ, ''ಜಸ್ಟ್ ಡಯಲ್ ಮತ್ತು ತಮ್ಮ ವ್ಯವಹಾರ ತೀಕ್ಷ್ಣತೆ ಮತ್ತು ದೃಢತೆ ಮೂಲಕ ಪ್ರಬಲ ಉದ್ಯಮವನ್ನು ಸೃಷ್ಟಿಸಿದ ಮೊದಲ ಪೀಳಿಗೆಯ ಸಾಹಸೋದ್ಯಮಿ ಶ್ರೀ ವಿಎಸ್‌ಎಸ್ ಮಣಿ ಅವರೊಂದಿಗೆ ಪಾಲುದಾರಿಕೆ ಹೊಂದಲು ರಿಲಯನ್ಸ್ ಕಾತರವಾಗಿದೆ. ಜಸ್ಟ್ ಡಯಲ್‌ನಲ್ಲಿನ ಹೂಡಿಕೆಯು, ನಮ್ಮ ಲಕ್ಷಾಂತರ ಪಾಲುದಾರ ವ್ಯಾಪಾರಿಗಳು, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ವೃದ್ಧಿಸುವ ಮೂಲಕ ನೂತನ ವಾಣಿಜ್ಯದೆಡೆಗಿನ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ನಾವು ಉದ್ಯಮವನ್ನು ಮತ್ತಷ್ಟು ಮುಂದಕ್ಕೆ ವಿಸ್ತರಿಸುವುದಕ್ಕಾಗಿ ಜಸ್ಟ್ ಡಯಲ್‌ನ ಬಹಳ ಅನುಭವಿ ನಿರ್ವಹಣಾ ತಂಡದೊಂದಿಗೆ ಸೇರಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ'' ಎಂದಿದ್ದಾರೆ.

ಆರ್‌ಆರ್‌ವಿಎಲ್ ಹೂಡಿಕೆ ಮಾಡುತ್ತಿರುವ ಬಂಡವಾಳವು ಜಸ್ಟ್ ಡಯಲ್ ಅನ್ನು ವಿಶಾಲವಾದ ಸ್ಥಳೀಯ ಸಂಸ್ಥೆ ಮತ್ತು ವಾಣಿಜ್ಯ ವೇದಿಕೆಯನ್ನಾಗಿ ಬೆಳವಣಿಗೆ ಹೊಂದಲು ಮತ್ತು ವಿಸ್ತರಿಸಲು ನೆರವಾಗಲಿದೆ. ಜಸ್ಟ್ ಡಯಲ್ ತನ್ನ ವೇದಿಕೆಯಲ್ಲಿನ ಆವಿಷ್ಕಾರಗಳನ್ನು ಹೆಚ್ಚಿಸಲಿದೆ ಮತ್ತು ಲಕ್ಷಾಂತರ ಉತ್ಪನ್ನಗಳು ಹಾಗೂ ಸೇವೆಗಳ ವಹಿವಾಟುಗಳನ್ನು ವೃದ್ಧಿಸಲಿದೆ. ಈ ಹೂಡಿಕೆಗಳು ಜಸ್ಟ್ ಡಯಲ್‌ನ ಪ್ರಸ್ತುತದ ಡೇಟಾ ಬೇಸ್‌ನಲ್ಲಿನ 30.4 ಮಿಲಿಯನ್ ಸಂಸ್ಥೆಗಳು ಮತ್ತು ಅದರ ತ್ರೈಮಾಸಿಕ 129.1 ಮಿಲಿಯನ್ ವಿಶಿಷ್ಟ ಬಳಕೆದಾರರ ಹಾಲಿ ಗ್ರಾಹಕರಿಗೆ ಅನುಕೂಲಗಳನ್ನು ಒದಗಿಸಲಿದೆ.

English summary

Reliance Retail Acquires Majority Stake In Just Dial For Rs 3497 Crore

Reliance Retail, the retail arm of billionaire Mukesh Ambani-led Reliance Industries Limited, acquired a stake of 40.95 per cent for Rs 3,497 crore in leading internet technology B2B company Just Dial.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X