For Quick Alerts
ALLOW NOTIFICATIONS  
For Daily Alerts

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ: ದೆಹಲಿಯಲ್ಲಿ ವಿಮಾನ ಹಾರಾಟ ರದ್ದು

|

ದೇಶದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ವಾರಗಳ ಕಾಲ 2 ಗಂಟೆ ಅವಧಿ ವಿಮಾನ ಸಂಚಾರ ರದ್ದು ಮಾಡಲಾಗಿದೆ.

ಜನವರಿ ತಿಂಗಳಿನಲ್ಲಿ ಏಳು ದಿನಗಳ ಕಾಲ ವಿಮಾನ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಆಗಲು ಎರಡು ಗಂಟೆಗಳ ಕಾಲ ನಿಷೇಧ ಹೇರಲಾಗಿದೆ. ಜನವರಿ 18, 20,21,22,24 ಮತ್ತು 26 ರಂದು ಬೆಳಗ್ಗೆ 10.15 ರಿಂದ 12.15ರವರೆಗೆ ಎರಡು ಗಂಟೆಗಳ ಕಾಲ ವಿಮಾನ ಲ್ಯಾಂಡ್ ಆಗಲು ಮತ್ತು ಟೇಕಾಫ್ ಆಗಲು ಅನುಮತಿ ಇಲ್ಲ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಎಲ್ಲಾ ಪೈಲಟ್‌ಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಲ್ಲಿ ಹೇಳಿದೆ.

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ: ದೆಹಲಿಯಲ್ಲಿ ವಿಮಾನ ಹಾರಾಟ ರದ್ದು

ಎರಡು ಗಂಟೆಗಳ ಕಾಲ ವಿಮಾನ ಸಂಚಾರ ರದ್ದು ಮಾಡಿದ ಹಿನ್ನೆಲೆಯಲ್ಲಿ ಪ್ರತಿದಿನ 140 ವಿಮಾನಗಳ ಸಂಚಾರ ಸ್ಥಗಿತಗೊಳ್ಳಲಿದೆ. ಈ ವಿಮಾನ ನಿಲ್ದಾಣವು ಗಂಟೆಗೆ ಸುಮಾರು 70 ವಿಮಾನ ಚಲನೆಯನ್ನು ಹೊಂದಿದೆ.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಕುರಿತು ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್ ಅವರು ಸಬ್ ಡಿವಿಷನಲ್ ಪೊಲೀಸ್ ಅಧಿಕಾರಿಗಳು ಮತ್ತು ಠಾಣಾಧಿಕಾರಿಗಳ ಜತೆ ಮಾತುಕತೆ ನಡೆಸಿರುವುದಾಗಿ ವರದಿ ವಿವರಿಸಿದೆ. ಅಲ್ಲದೆ ಎಲ್ಲೆಡೆ ಭಾರೀ ಭದ್ರತೆಯನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary

Republic day Effect Delhi Will Be No Fly Zone

Delhi will turn into a no-fly zone for nearly two hours for a period of seven days ahead of the Republic Day parade.
Story first published: Tuesday, January 14, 2020, 12:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X