For Quick Alerts
ALLOW NOTIFICATIONS  
For Daily Alerts

ಡೈನರ್ಸ್ ಕ್ಲಬ್ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದ ಆರ್‌ಬಿಐ

|

ನವದೆಹಲಿ, ನವೆಂಬರ್ 10: ಭಾರತದಲ್ಲಿ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಿಮಿಟೆಡ್ ಮೇಲಿನ ನಿರ್ಬಂಧಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸಡಿಲಿಸಿದೆ. ನವೆಂಬರ್ 9ರಿಂದ ನಿಯಮಗಳ ಸಡಿಲಿಕೆಯು ಜಾರಿಗೆ ಬರಲಿದೆ.

ಕಳೆದ 2021ರ ಮೇ 1ರಿಂದ ದೇಶೀಯ ಗ್ರಾಹಕರನ್ನು ಆನ್‌ಬೋರ್ಡ್ ಮಾಡುವುದಕ್ಕೆ ಆರ್‌ಬಿಐ ನಿರ್ಬಂಧ ವಿಧಿಸಿತ್ತು. ಏಪ್ರಿಲ್ 23 ರಂದು, ಆರ್‌ಬಿಐನ ಸ್ಟೋರೇಜ್ ಆಫ್ ಪೇಮೆಂಟ್ ಸಿಸ್ಟಮ್ ಡೇಟಾ ನಿಯಮವನ್ನು ಅನುಸರಿಸದ ಕಾರಣ ಮಿತಿಗಳನ್ನು ಜಾರಿಗೊಳಿಸಲಾಗಿದೆ.

ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಪೇಟಿಯಂಗೆ ಭಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ

ಭಾರತದಲ್ಲಿ ಕಳೆದ 2021 ಏಪ್ರಿಲ್ 23ರ ಆರ್ಬಿಐ ನಿರ್ಧಾರದ ಪ್ರಕಾರ, ಪಾವತಿ ವ್ಯವಸ್ಥೆಯ ಅಂಕಿ-ಅಂಶಗಳ ಸಂಗ್ರಹಣೆಯಲ್ಲಿ ಏಪ್ರಿಲ್ 6, 2018 ರ RBI ಸುತ್ತೋಲೆಯನ್ನು ಅನುಸರಿಸಿರಲಿಲ್ಲ. ಈ ಹಿನ್ನೆಲೆ 2021ರ ಮೇ 1 ರಿಂದ ತನ್ನ ಕಾರ್ಡ್ ನೆಟ್‌ವರ್ಕ್‌ಗೆ ಹೊಸ ದೇಶೀಯ ಕ್ಲೈಂಟ್‌ಗಳನ್ನು ಆನ್‌ಬೋರ್ಡಿಂಗ್ ಮಾಡದಂತೆ ಡೈನರ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಮೇಲೆ ನಿರ್ಬಂಧ ವಿಧಿಸಲಾಗಿತ್ತು,

ಡೈನರ್ಸ್ ಕ್ಲಬ್ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿದ ಆರ್‌ಬಿಐ

ಕಾರ್ಡ್ ನೆಟ್ ವರ್ಕ್ ನಿರ್ವಹಣೆ ಅಧಿಕಾರ:

2007ರ ಪೇಮೆಂಟ್ ಆಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್ ಅಡಿಯಲ್ಲಿ, ದೇಶದ ಕಾರ್ಡ್ ನೆಟ್ವರ್ಕ್ ಗಳನ್ನು ನಿರ್ವಹಿಸಲು ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಅಧಿಕಾರ ಹೊಂದಿರುವ ಪೇಮೆಂಟ್ ಸಿಸ್ಟಮ್ ಆಪರೇಟರ್ ಆಗಿದೆ (PSS ಕಾಯಿದೆ). ಆದರೆ ಆರ್‌ಬಿಐ ಆದೇಶದಿಂದ ಅಸ್ತಿತ್ವದಲ್ಲಿರುವ ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಗ್ರಾಹಕರ ಮೇಲೆ ಯಾವುದೇ ರೀತಿ ಪ್ರಭಾವ ಬೀರುವುದಿಲ್ಲ.

ನಿಯಮ ಪಾಲನೆ ಪರಿಗಣಿಸಿ ನಿರ್ಬಂಧ ತೆರವು:

"ಡೈನರ್ಸ್ ಕ್ಲಬ್ ಇಂಟರ್ನ್ಯಾಷನಲ್ ಲಿಮಿಟೆಡ್, ಏಪ್ರಿಲ್ 6, 2018ರ ನಂತರ ಪೇಮೆಂಟ್ ಸಿಸ್ಟಮ್ ಡೇಟಾ ಸಂಗ್ರಹಣೆಯಲ್ಲಿ ಆರ್‌ಬಿಐ ಸುತ್ತೋಲೆಯ ಅನುಸರಣೆಯು ತೃಪ್ತಿದಾಯಕವಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

ಅಂತೆಯೇ, ಆರ್‌ಬಿಐ ಈಗಾಗಲೇ ಅಮೆರಿಕನ್ ಎಕ್ಸ್‌ಪ್ರೆಸ್ ಮತ್ತು ಮಾಸ್ಟರ್‌ಕಾರ್ಡ್‌ಗಳನ್ನು ಹೊಸ ಗ್ರಾಹಕರಿಗೆ ಆನ್‌ಬೋರ್ಡ್ ಮಾಡುವುದನ್ನು ತಡೆಯುತ್ತದೆ. ಏಕೆಂದರೆ ಈ ಡೇಟಾವು ಸ್ಥಳೀಕರಣ ನಿಯಮಗಳ ಅನುಸರಣೆಗೆ ಅನುಗುಣವಾಗಿಲ್ಲ.

English summary

Reserve Bank of India Removed restrictions on Diners Club

Reserve Bank of India Removed restrictions on Diners Club; Know More.
Story first published: Wednesday, November 10, 2021, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X