For Quick Alerts
ALLOW NOTIFICATIONS  
For Daily Alerts

ರೂಟ್ ಮೊಬೈಲ್ ಐಪಿಒ ಸೆಪ್ಟೆಂಬರ್ 9ರಿಂದ 11: ದರ ಇತ್ಯಾದಿ ಮಾಹಿತಿ

|

ಮೊಬೈಲ್ ತಂತ್ರಜ್ಞಾನ ಸಂಸ್ಥೆ ರೂಟ್ ಮೊಬೈಲ್ ಐಪಿಒ ಸೆಪ್ಟೆಂಬರ್ 9, 2020ರಿಂದ ಆರಂಭವಾಗಲಿದೆ. ಐಪಿಒ ಮೂಲಕ 600 ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ. 240 ಕೋಟಿ ರುಪಾಯಿ ಐಪಿಒ ಮೂಲಕ ಹಾಗೂ ಪ್ರವರ್ತಕರ ಷೇರಿನ ಪಾಲು ಒಂದಷ್ಟು ಪ್ರಮಾಣ ಆಫರ್ ಫಾರ್ ಸೇಲ್ ಮೂಲಕ 360 ಕೋಟಿ ರುಪಾಯಿ ಸಂಗ್ರಹಿಸಲಾಗುವುದು.

ಪ್ರವರ್ತಕ, ನಾನ್ ಎಕ್ಸ್ ಕ್ಯೂಟಿವ್ ನಿರ್ದೇಶಕ ಸಂದೀಪ್ ಕುಮಾರ್ ಗುಪ್ತಾ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ರಾಜ್ ದೀಪ್ ಕುಮಾರ್ ತಲಾ 180 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮಾರಲಿದ್ದಾರೆ. ಪ್ರತಿ ಷೇರಿಗೆ ತಲಾ 340ರಿಂದ 350ರ ದರದಲ್ಲಿ ಮಾರಾಟ ಮಾಡಲಾಗುವುದು. ಕನಿಷ್ಠ 40 ಷೇರುಗಳನ್ನು ಖರೀದಿಸಬೇಕು. ಅದಕ್ಕಿಂತ ಹೆಚ್ಚು ಬೇಕಿದ್ದಲ್ಲಿ 40ರ ಗುಣಕದಲ್ಲಿ ಖರೀದಿಸಬೇಕು.

 

ಸೆಪ್ಟೆಂಬರ್ 11, 2020ಕ್ಕೆ ಈ ಐಪಿಒ ಇಶ್ಯೂ ಮುಕ್ತಾಯ ಆಗಲಿದೆ. ಸೆಪ್ಟೆಂಬರ್ 21, 2020ರಂದು ಲಿಸ್ಟ್ ಆಗುವ ಸಾಧ್ಯತೆ ಇದೆ. ಷೇರು ವಿತರಣೆ ಮೂಲಕ ಸಂಗ್ರಹ ಆಗುವ ಹಣವನ್ನು ಕೆಲವು ಸಾಲಗಳ ಮರುಪಾವತಿ ಅಥವಾ ಕೆಲವು ಸಾಲಗಳ ಪೂರ್ವ ಪಾವತಿ ಮತ್ತು ಇತರ ವ್ಯೂಹಾತ್ಮಕ ಹೂಡಿಕೆಗಳಿಗೆ ಬಳಸಲಾಗುತ್ತದೆ.

ರೂಟ್ ಮೊಬೈಲ್ ಐಪಿಒ ಸೆಪ್ಟೆಂಬರ್ 9ರಿಂದ 11: ದರ ಇತ್ಯಾದಿ ಮಾಹಿತಿ

ರೂಟ್ ಮೊಬೈಲ್ ಕಂಪೆನಿಯು 2014ರಲ್ಲಿ ಆರಂಭವಾಗಿದ್ದು, ವಿವಿಧ ಸಂಸ್ಥೆಗಳು, ಒಟಿಟಿ ಪ್ಲೇಯರ್ ಗಳು ಹಾಗೂ ಮೊಬೈಲ್ ನೆಟ್ ವರ್ಕ್ ಆಪರೇಟರ್ ಗಳಿಗೆ ಸೇವೆ ಒದಗಿಸುತ್ತದೆ ಈ ಕಂಪೆನಿ. ಆಫ್ರಿಕಾ, ಏಷ್ಯಾ ಪೆಸಿಫಿಕ್, ಯುರೋಪ್, ಮಧ್ಯಪ್ರಾಚ್ಯ ಹಾಗೂ ಉತ್ತರ ಅಮೆರಿಕಾದಲ್ಲಿ ಈ ಕಂಪೆನಿಯ ಗ್ರಾಹಕರಿದ್ದಾರೆ.

English summary

Route Mobile IPO Subscription From September 9

The mobile technology firm Route Mobile IPO open from September 9th. Here is the complete details of IPO subscription.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X