For Quick Alerts
ALLOW NOTIFICATIONS  
For Daily Alerts

ನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ 1.05 ಲಕ್ಷ ಕೋಟಿ ರುಪಾಯಿ

|

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹವು ಸತತ ಎರಡನೇ ತಿಂಗಳಾದ ನವೆಂಬರ್ ನಲ್ಲಿ 1 ಲಕ್ಷ ಕೋಟಿ ರುಪಾಯಿ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 1.4% ಆದಾಯ ಏರಿಕೆ ಆಗಿದೆ. ಒಟ್ಟು 1.05 ಲಕ್ಷ ಕೋಟಿ ರುಪಾಯಿ ಸಂಗ್ರಹ ಆಗಿರುವ ಮೊತ್ತದಲ್ಲಿ ಕೇಂದ್ರ ಜಿಎಸ್ ಟಿ 19,189 ಕೋಟಿ ರುಪಾಯಿ, ರಾಜ್ಯ ಜಿಎಸ್ ಟಿ 25,540 ಕೋಟಿ, ಐಜಿಎಸ್ ಟಿ 51,992 ಕೋಟಿ ಹಾಗೂ ಸೆಸ್ 8242 ಕೋಟಿ ರು. ಸಂಗ್ರಹವಾಗಿದೆ.

ಏಪ್ರಿಲ್ ನಿಂದ ಆಗಸ್ಟ್ ಅವಧಿಯ ತನಕ ಅದರ ಹಿಂದಿನ ವರ್ಷದ ಅವಧಿಗೆ ಹೋಲಿಸಿದಲ್ಲಿ ಇಳಿಕೆ ದಾಖಲಿಸುತ್ತಾ ಬಂದಿತ್ತು. ಸೆಪ್ಟೆಂಬರ್ ನಲ್ಲಿ ಟ್ರೆಂಡ್ ಪಾಸಿಟಿವ್ ಆಗಿತ್ತು. ಅದನ್ನು ಅಕ್ಟೋಬರ್ ನಲ್ಲಿ ಘೋಷಿಸಲಾಯಿತು. ಲಾಕ್ ಡೌನ್ ನಿರ್ಬಂಧದ ತೆರವಿನ ನಂತರ ಆರ್ಥಿಕ ಚೇತರಿಕೆ ಕಂಡುಬರುತ್ತಿದೆ.

ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ

ಹಣಕಾಸು ಸಚಿವಾಲಯದ ಅಧಿಕೃತ ಹೇಳಿಕೆ ಪ್ರಕಾರ, ಮಾಮೂಲಿ ತೀರುವಳಿಗಳ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗಳಿಸಿರುವ ಆದಾಯ ಕ್ರಮವಾಗಿ 22,293 ಕೋಟಿ ರುಪಾಯಿ ಹಾಗೂ 16,286 ಕೋಟಿ ರುಪಾಯಿ. ಒಟ್ಟಾರೆಯಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಾಮೂಲಿ ತೀರುವಳಿಗಳ ಎಲ್ಲದರ ನಂತರ ನವೆಂಬರ್ 2020ರಲ್ಲಿ ಬಂದಿರುವ ಒಟ್ಟು ಆದಾಯ ಸಿಜಿಎಸ್ ಟಿ ಗೆ 41,482 ಕೋಟಿ ಹಾಗೂ ಎಸ್ ಜಿಎಸ್ ಟಿ 41,826 ಕೋಟಿ.

ನವೆಂಬರ್ ತಿಂಗಳ ಜಿಎಸ್ ಟಿ ಸಂಗ್ರಹ 1.05 ಲಕ್ಷ ಕೋಟಿ ರುಪಾಯಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9% ಕುಗ್ಗಿತ್ತು. ಎರಡನೇ ತ್ರೈಮಾಸಿಕದಲ್ಲಿ 7.5% ಕುಗ್ಗಿದೆ.

English summary

Rs 1,04,963 Crore Gross GST Revenue Collected In November 2020

Goods And Service Tax (GST) collection for 2020 November for government 1.05 lakh crore rupees. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X