For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ದುರ್ಬಲಗೊಂಡ ರುಪಾಯಿ:2 ತಿಂಗಳಿನಲ್ಲಿ ಕನಿಷ್ಟ

|

ಡಾಲರ್‌ ಎದುರು ರುಪಾಯಿ 56 ಪೈಸೆಗಳಷ್ಟು ಕುಸಿತ ಕಂಡು 72 ರುಪಾಯಿಗೆ ತಲುಪಿದೆ. ಅಮೆರಿಕಾ-ಚೀನಾ ವಾಣಿಜ್ಯ ಸಮರದ ಜೊತೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣವೂ ಮಾರುಕಟ್ಟೆಯಲ್ಲಿ ಪ್ರಭಾವ ಬೀರಿದ್ದು, ರುಪಾಯಿ ಕಳೆದ 2 ತಿಂಗಳಿನಲ್ಲಿ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದು ಪ್ರತಿ ಡಾಲರ್‌ಗೆ 72 ರುಪಾಯಿಗೆ ತಲುಪಿದೆ.

ಭಾರತದ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿ ಭಾರೀ ಕುಸಿತಭಾರತದ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿ ಭಾರೀ ಕುಸಿತ

ಮಂಗಳವಾರ (ನವೆಂಬರ್ 12) ರುಪಾಯಿ ಬೆಲೆಯು 71.75ಗೆ ಆರಂಭಗೊಂಡಿತು. ಬಳಿಕ 56 ಪೈಸೆಗಳಷ್ಟು ಕುಸಿತ ದಾಖಲಿಸಿದ್ದು ಶೇಕಡಾ 0.8ರಷ್ಟು ಮೌಲ್ಯ ಕಳೆದುಕೊಂಡಿದೆ. ಈ ಮೂಲಕ 72 ರುಪಾಯಿಗೆ ತಲುಪಿದ್ದು, ಕಳೆದ ಬಾರಿ ಸೆಪ್ಟೆಂಬರ್ 4 ರಂದು 72ರ ಗಡಿದಾಟಿದ ಬಳಿಕ ರುಪಾಯಿ ಬೆಲೆಯು ಭಾರೀ ಕುಸಿತ ಕಂಡಿದೆ.

ಡಾಲರ್ ಎದುರು ದುರ್ಬಲಗೊಂಡ ರುಪಾಯಿ:2 ತಿಂಗಳಿನಲ್ಲಿ ಕನಿಷ್ಟ

ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತದ ಆರ್ಥಿಕತೆಯು ಶೇಕಡಾ 5ಕ್ಕಿಂತ ಕಡಿಮೆಯಾಗಿದೆ ಎಂದು ಆರ್ಥಿಕ ವಿಶ್ಲೇಷಕರು ಇತ್ತೀಚೆಗಷ್ಟೇ ಹೇಳಿದ್ದಾರೆ. ಜೊತೆಗೆ ಭಾರತದ ಕೈಗಾರಿಕಾ ಉತ್ಪಾದನೆಯು ಕಳೆದ 8 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಗ್ಗಿದೆ ಎಂದು ವರದಿಯಾಗಿದೆ. ದೇಶದಲ್ಲಿನ ಆರ್ಥಿಕತೆ ಮಂದಗತಿಯಿಂದಾಗಿ ಇದೀಗ ಡಾಲರ್ ಎದುರು ರುಪಾಯಿ ಮತ್ತೆ ದುರ್ಬಲಗೊಂಡಿದ್ದು, 2 ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.

English summary

Rupee Crashes To Over 2 Month Low

The indian rupee reached 2 month low against the US dollar due to weat domestic macro economic data
Story first published: Wednesday, November 13, 2019, 19:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X