For Quick Alerts
ALLOW NOTIFICATIONS  
For Daily Alerts

ಡಾಲರ್ ಎದುರು ರೂಪಾಯಿ ಕುಸಿತ: 75ರ ಮಟ್ಟಕ್ಕಿಂತ ಇಳಿಕೆ

|

ಅಮೆರಿಕಾ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡಿದ್ದು, ಶುಕ್ರವಾರ 75ರ ಮಟ್ಟಕ್ಕಿಂತ ಕೆಳಗಿಳಿದಿದೆ. ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಹೆಚ್ಚಳ ಮತ್ತು ಎಫ್‌ಪಿಐ ಹೊರಹರಿವಿನ ಭೀತಿಯಿಂದಾಗಿ ಡಾಲರ್‌ ಎದುರು ರೂಪಾಯಿ ಕುಸಿತ ಕಂಡಿದೆ.

ಶುಕ್ರವಾರ ಅಮೆರಿಕಾ ಡಾಲರ್ ಎದುರು ರೂಪಾಯಿ 75.01 ಕ್ಕೆ ಕೊನೆಗೊಂಡಿತು. ಇದು ಹಿಂದಿನ ವಹಿವಾಟಿನ ಮುಕ್ತಾಯಕ್ಕಿಂತ 7 ಪೈಸೆಯಷ್ಟು ಕುಸಿತವನ್ನು ದಾಖಲಿಸಿತು.

ಡಾಲರ್ ಎದುರು ರೂಪಾಯಿ ಕುಸಿತ: 75ರ ಮಟ್ಟಕ್ಕಿಂತ ಇಳಿಕೆ

ಕೋವಿಡ್-19 ಪಾಸಿಟಿವ್ ಪ್ರಕರಣಗಳ ಉಲ್ಬಣವು ಭಾರತದ ಆರ್ಥಿಕ ಚೇತರಿಕೆಗೆ ಅಡ್ಡಿಪಡಿಸುವ ಬಗ್ಗೆ ಕಳವಳಗೊಂಡಿರುವ ವಿದೇಶಿ ಬಂಡವಾಳ ಹೂಡಿಕೆದಾರರು, ಈ ತಿಂಗಳಲ್ಲಿ ಹೆಚ್ಚಿನ ಮಾರಾಟಕ್ಕೆ ಮುಂದಾಗಿದ್ದಾರೆ. ಎಫ್‌ಪಿಐಗಳು 1,361 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದು, ಏಪ್ರಿಲ್‌ನಲ್ಲಿ ಒಟ್ಟು ಹೊರಹರಿವು ಸುಮಾರು 8,700 ಕೋಟಿ ರೂ. ನಷ್ಟಿದೆ.

ಟಿಸಿಎಲ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿಟಿಸಿಎಲ್ ಆಫರ್: ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ

ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರ ಉನ್ನತ ಆದಾಯ ತೆರಿಗೆ ಮತ್ತು ಬಂಡವಾಳದ ಲಾಭದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಯೋಜನೆಯು ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಈ ಯೋಜನೆಯಿMದಾಗಿ ಅಮೆರಿಕನ್ನರ ಆದಾಯದ ಮೇಲೆ ಪಾವತಿಸುವ ದರವನ್ನು ಶೇಕಡಾ 20 ರಿಂದ 39.6 ಕ್ಕೆ ಹೆಚ್ಚಿಸುತ್ತದೆ.

English summary

Rupee Down By 7 Paise To Close Below 75 Mark Against Dollar

The rupee fell by 7 paise to close below the 75 mark against the US dollar on Friday as a record spike in COVID-19 cases and losses in the domestic equities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X