For Quick Alerts
ALLOW NOTIFICATIONS  
For Daily Alerts

ಗುಡ್ ಫ್ರೈಡೆ; ಷೇರುಪೇಟೆ ಶೈನಿಂಗ್; ಡಾಲರ್ ಎದುರು ರೂಪಾಯಿ ಹೈಜಂಪ್

|

ನವದೆಹಲಿ, ನ. 11: ಅಮೆರಿಕದ ಆರ್ಥಿಕತೆ ಹಳಿಗೆ ಬರುವ ಸೂಚನೆ ಸಿಗುತ್ತಿದ್ದಂತೆಯೇ ಭಾರತಕ್ಕೆ ಬಿಗಿಯಾಗಿ ಸುತ್ತಿಕೊಂಡಿದ್ದ ಸಂಕೋಲೆ ತುಸು ಸಡಿಲಗೊಂಡಿದೆ. ಇದಕ್ಕೆ ಕುರುಹಾಗಿ ಡಾಲರ್ ಎದುರು ರೂಪಾಯಿ ಶುಕ್ರವಾರ ಹೈಜಂಪ್ ಮಾಡಿದೆ. ಶುಕ್ರವಾರ ಬೆಳಗ್ಗೆ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಶೇ. 1.3ಕ್ಕಿಂತ ಹೆಚ್ಚು ವೃದ್ಧಿ ಕಂಡಿದೆ. ಷೇರುಪೇಟೆ ಸಖತ್ತಾಗಿ ಮಿಂಚುತ್ತಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಸೆನ್ಸೆಕ್ಸ್ ಹೆಚ್ಚೂಕಡಿಮೆ 900 ಅಂಕಗಳಷ್ಟು ವೃದ್ಧಿ ಕಂಡರೆ ನಿಫ್ಟಿ 18 ಸಾವಿರ ಅಂಕಗಳ ಗಡಿ ದಾಟಿ ಹೋಗಿದೆ.

 

ಒಟ್ಟಾರೆ ಭಾರತದ ಮಾರುಕಟ್ಟೆಗೆ ಇಂದು ಶುಭ ಶುಕ್ರವಾರದಂತಾಗಿದೆ. ಅಮೆರಿಕದ ಹಣದುಬ್ಬದ ದರ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿದೆ ಎಂಬ ವರದಿ ನಿನ್ನೆ ಪ್ರಕಟವಾಗಿದ್ದೇ ಈ ಸಂಚಲನಕ್ಕೆ ಕಾರಣ. ಅಕ್ಟೋಬರ್ ತಿಂಗಳಲ್ಲಿ ಅಮೆರಿಕದಲ್ಲಿ ಹಣದುಬ್ಬರ ಶೇ. 7.7ಕ್ಕೆ ಇಳಿದಿದೆ. ಹಣದುಬ್ಬರ ಕಡಿಮೆ ಆಗದಿದ್ದರೆ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಹೆಚ್ಚಿಸುವ ಕಾರ್ಯಕ್ಕೆ ಕೈಹಾಕುವ ಸಾಧ್ಯತೆ ಇತ್ತು. ಆದರೆ, ನಿರೀಕ್ಷಿಸಿದಂತೆ ಹಣದುಬ್ಬರ ಏರಿಕೆಯಾಗದೇ ಇಳಿಕೆಯಾಗಿದೆ.

ಸೆಂಟ್ರಲ್ ಬ್ಯಾಂಕ್ ಬಡ್ಡಿ ದರವನ್ನು ಗಣನೀಯವಾಗಿ ಏರಿಸುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಭರವಸೆ ಮಾರುಕಟ್ಟೆಯಲ್ಲಿ ಇದೆ. ಹೀಗಾಗಿ, ಡಾಲರ್‌ನ ಬಾಲ ಹಿಡಿದುಕೊಳ್ಳುವ ಅನಿವಾರ್ಯತೆಯಿಂದ ಹೊರಬರುವ ಹೂಡಿಕೆದಾರರು ಭಾರತದಂಥ ಮಾರುಕಟ್ಟೆಗಳಲ್ಲಿ ತಮ್ಮ ಹಣವನ್ನು ತೊಡಗಿಸಿಕೊಳ್ಳುವ ನಿರೀಕ್ಷೆ ಇದೆ.

ಷೇರುಪೇಟೆ ಮಿಂಚು

ಷೇರುಪೇಟೆ ಮಿಂಚು

ಇದರ ಪರಿಣಾಮವಾಗಿ ಡಾಲರ್‌ಗೆ ಬೇಡಿಕೆ ಕಡಿಮೆಯಾಗಿ ರೂಪಾಯಿಯಂತಹ ಹಲವು ಕರೆನ್ಸಿಗಳಿಗೆ ಲಾಭವಾಗಿದೆ. ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಪರಿಣಾಮವಾಗಿ ಭಾರತದ ಷೇರುಪೇಟೆ ಶುಕ್ರವಾರದ ಬೆಳಗಿನ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ 888.98 ಅಂಕಗಳಷ್ಟು ಹೆಚ್ಚಾಗಿ 61,502.68 ಅಂಕಗಳ ಮಟ್ಟ ಮುಟ್ಟಿದೆ. ಇನ್ನು, ನಿಫ್ಟಿ 50 ಸೂಚ್ಯಂಕವು 260 ಅಂಕಗಳಷ್ಟು ವೃದ್ಧಿಸಿಕೊಂಡು 18,288.20ಕ್ಕೆ ಏರಿದೆ. ಎಫ್‌ಪಿಐಗಳಿಂದ ಇಂದು ಬೆಳಗ್ಗೆ 36 ಕೋಟಿ ಮೌಲ್ಯದ ಷೇರುಗಳ ಖರೀದಿ ಆಗಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿನ್ನೆ 967.13 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿರುವುದು ತಿಳಿದುಬಂದಿದೆ.

 

ಯಾವ್ಯಾವ ಷೇರುಗಳು ವೃದ್ಧಿ?
 

ಯಾವ್ಯಾವ ಷೇರುಗಳು ವೃದ್ಧಿ?

ಬಿಎಸ್‌ಇ ಸೆನ್ಸೆಕ್ಸ್‌ನಲ್ಲಿ 1,957 ಷೇರುಗಳು ವೃದ್ಧಿ ಕಂಡರೆ 1,213 ಷೇರುಗಳ ಮೌಲ್ಯ ಕಡಿಮೆ ಆಗಿದೆ. ಹಿಂಡಾಲ್ಕೋ ಇಂಡಸ್ಟ್ರೀಸ್ ಷೇರು ಶೇ. 2.61ರಷ್ಟು ಏರಿಕೆ ಕಂಡಿದೆ. ಧಾನಿ ಸರ್ವಿಸಸ್‌ನ ಷೇರು ಕೂಡ ಶೇ. 2ಕ್ಕಿಂತ ಹೆಚ್ಚು ವೃದ್ಧಿಸಿದೆ. ಹೆಚ್‌ಎಎಲ್, ಎಲ್‌ಐಸಿ, ಆಲ್ಕೆಮ್ ಲ್ಯಾಬ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್, ಅಶೋಕಾ ಬ್ಯುಲ್ಡ್‌ಕಾನ್, ಆಸ್ಟ್ರಾಲ್, ಝೀ ಎಂಟರ್ಟೈನ್ಮೆಂಟ್, ಬಿಎಚ್‌ಇಎಲ್, ಡೆಲ್ಹಿವರಿ, ಈಸಿ ಟ್ರಿಪ್ ಪ್ಲಾನರ್ಸ್ ಇತ್ಯಾದಿ ಕಂಪನಿಗಳ ಷೇರುಗಳು ಬೆಲೆ ಹೆಚ್ಚಿಸಿಕೊಂಡಿವೆ.

ಅದಾನಿ ಪವರ್, ಫೈಜರ್ ಫಾರ್ಮಾಸ್ಯೂಟಿಕಲ್ಸ್, ಸನ್ ಟಿವಿ ನೆಟ್ವರ್ಕ್, ಉಜ್ಜೀವನ್ ಫೈನಾನ್ಷಿಯಲ್ ಸರ್ವಿಸಸ್ ಮೊದಲಾದ ಕಂಪನಿಗಳ ಷೇರುಗಳು ಶುಕ್ರವಾರದ ವಹಿವಾಟಿನಲ್ಲಿ ಕುಸಿತ ಕಂಡಿವೆ.

ನಿಫ್ಟಿ ಸೂಚ್ಯಂಕದಲ್ಲಿ ಐಟಿ ಕಂಪನಿಗಳ ‍ಷೇರುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ. ಇನ್ಫೋಸಿಸ್, ಎಲ್ ಅಂಡ್ ಟಿ ಇನ್ಫೋಟೆಕ್, ಪರ್ಸಿಸ್ಟೆಂಟ್ ಸಿಸ್ಟಮ್ಸ್, ಕೋಫೋರ್ಜ್ ಕಂಪನಿಗಳ ಷೇರುಗಳ ಮೌಲ್ಯ ಶೇ. 4ಕ್ಕಿಂತ ಹೆಚ್ಚಾಗಿದೆ. ಎಚ್‌ಸಿಎಲ್, ವಿಪ್ರೋ, ಟಿಸಿಎಸ್, ಟೆಕ್ ಮಹೀಂದ್ರ ಮೊದಲಾದ ಷೇರುಗಳೂ ಕೂಡ ಉತ್ತಮ ಬೆಳವಣಿಗೆ ಕಂಡಿವೆ.

 

ರೂಪಾಯಿ ಹೈಜಂಪ್

ರೂಪಾಯಿ ಹೈಜಂಪ್

ಅಮೆರಿಕದ ಹಣದುಬ್ಬರ ದರ ನಿರೀಕ್ಷಿಸಿದಷ್ಟು ಹೆಚ್ಚಿಲ್ಲದ ಕಾರಣ ಡಾಲರ್‌ಗೆ ಬೇಡಿಕೆ ತಗ್ಗಿದೆ. ಫಲವಾಗಿ ಡಾಲರ್ ಎದುರು ರೂಪಾಯಿ 1.3% ಮೌಲ್ಯ ವೃದ್ಧಿಸಿಕೊಂಡಿದೆ. ನಿನ್ನೆ ಗುರುವಾರ ಡಾಲರ್‌ಗೆ 81.80ಕ್ಕೆ ಇಳಿದಿದ್ದ ರೂಪಾಯಿ ಈಗ ಇನ್ನಷ್ಟು ಇಳಿಕೆ ಕಂಡು 80.80 ತಲುಪಿದೆ. ಸದ್ಯ ರೂಪಾಯಿ 80.77ರಂತೆ ವಹಿವಾಟಾಗುತ್ತಿದೆ.

2018 ಡಿಸೆಂಬರ್ ನಂತರ ಈ ನಾಲ್ಕು ವರ್ಷದಲ್ಲಿ ಒಂದೇ ದಿನದಲ್ಲಿ ರೂಪಾಯಿ ಇಷ್ಟು ಮೌಲ್ಯ ಹೆಚ್ಚಿಸಿಕೊಂಡಿದ್ದು ಇದೇ ಮೊದಲು. ಫೋರೆಕ್ಸ್ ಮಾರುಕಟ್ಟೆ ತಜ್ಞರ ಪ್ರಕಾರ ಶುಕ್ರವಾರ ಇಡೀ ದಿನ ಡಾಲರ್ ಎದುರು ರೂಪಾಯಿ 80.80ರಿಂದ 80.50ರ ಬೆಲೆಯಲ್ಲಿ ವಹಿವಾಟಾಗುವ ಸಾಧ್ಯತೆ ಇದೆ. ಶುಕ್ರವಾರ ದಿನಾಂತ್ಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 80.50ರ ಆಸುಪಾಸಿಗೆ ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಹಲವು ದಿನಗಳಿಂದ ಡಾಲರ್ ಎದುರು ರೂಪಾಯಿ ನಿರಂತರವಾಗಿ ಇಳಿಕೆ ಕಾಣುತ್ತಾ ಬಂದಿರುವುದು ಭಾರತದ ಫೋರೆಕ್ಸ್ ಮೀಸಲು ನಿಧಿ ತುಸು ಬರಿದಾಗುವಂತೆ ಮಾಡಿತ್ತು. ಈಗ ರೂಪಾಯಿ ವೃದ್ಧಿಸಿರುವುದು ಸರ್ಕಾರ ಫೋರೆಕ್ಸ್ ಖಜಾನೆ ತುಂಬಿಸುವ ಸಾಹಸಕ್ಕೆ ಮತ್ತೆ ಹೈಹಾಕಬಹುದು.

 

English summary

Rupee See Biggest Gain In 4 Years, Sensex See Huge Rush On Nov 11th

November 11th is Good Friday for indian stock market. Sensex and nifty see huge gain as inflation pressure eases in US. Rupee to see sharp recovery vs Dollar on friday.
Story first published: Friday, November 11, 2022, 12:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X