For Quick Alerts
ALLOW NOTIFICATIONS  
For Daily Alerts

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಷೇರುಪೇಟೆ ಮತ್ತೆ ಕುಸಿತ

|

ಮುಂಬೈ, ಮಾರ್ಚ್ 02: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಪರಿಮಾಣ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಪ್ರತಿ ಕ್ಷಣ ವ್ಯತ್ಯಯ ಉಂಟಾಗುತ್ತಿದೆ. ಭಾರತದಲ್ಲಿ ಷೇರುಪೇಟೆಯಲ್ಲಿ ಮತ್ತೊಮ್ಮೆ ಸೂಚ್ಯಂಕಗಳು ಇಳಿಮುಖದತ್ತ ಸಾಗಿವೆ. ಮಾರ್ಚ್ 02ರಂದು ಆರಂಭಿಕ ವಹಿವಾಟಿನಲ್ಲಿ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕ ಕಂಡು ಬಂದಿವೆ. ಹೂಡಿಕೆದಾರರು ಯುದ್ಧದ ಬಗ್ಗೆ ಚಿಂತಿತರಾಗಿದ್ದು, ದಿನ ನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

 

ಬಿಎಸ್ಇ 900 ಅಂಶ ಕುಸಿದಿದ್ದು, ನಿಫ್ಟಿ50 ಸೂಚ್ಯಂಕ 16,600ಕ್ಕೂ ಕಡಿಮೆ ಅಂಶಕ್ಕೆ ಕುಸಿದಿದೆ. ಸೆನ್ಸೆಕ್ಸ್ ಶೇ 1.6ರಷ್ಟು ಕುಸಿತ ಅಥವಾ 921 ಅಂಕಗಳನ್ನು ಕಳೆದುಕೊಂಡಿದೆ. ನಿಫ್ಟಿ ಶೇ 1.4ರಷ್ಟು ಅಥವಾ 232 ಅಂಕ ಕಳೆದುಕೊಂಡು 16, 562 ಅಂಕಗಳಿಗೆ ಬಂದಿದೆ. ಜಿಡಿಪಿ ಪ್ರಗತಿ ಮಾರ್ಗದರ್ಶಿ ಕೂಡಾ ಸೂಕ್ತವಾಗಿರದ ಕಾರಣ ಹೂಡಿಕೆದಾರರು ಮುಂದೆ ಹೆಜ್ಜೆ ಇಡುತ್ತಿದ್ದಿಲ್ಲ.

 

"Q3 GDP ಬೆಳವಣಿಗೆಯು ಶೇಕಡಾ 5.4 ನಲ್ಲಿ ನಿರೀಕ್ಷೆಗಿಂತ ಕಡಿಮೆಯಾಗಿದೆ. ಈ ನಿಧಾನಗತಿಯು ಮುಂದುವರಿಯುವ ಸಾಧ್ಯತೆಯಿದೆ. ವಿಷಯಗಳು ಈಗ ನಿಂತಿರುವಂತೆ, FY 23 ಕ್ಕೆ ಭಾರತದ GDP ಬೆಳವಣಿಗೆಯು ಕಡಿಮೆಯಿರುತ್ತದೆ ಮತ್ತು ಹಣದುಬ್ಬರವು ಅಂದಾಜುಗಳಿಗಿಂತ ಹೆಚ್ಚಾಗಿರುತ್ತದೆ. ಇದು ಷೇರುಪೇಟೆಗೆ ನಕಾರಾತ್ಮಕವಾಗಿದೆ' ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ತಂತ್ರಜ್ಞ. ವಿ.ಕೆ. ವಿಜಯಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಷೇರುಪೇಟೆ ಮತ್ತೆ ಕುಸಿತ

ಷೇರುಗಳ ಪೈಕಿ, ಮಾರುತಿ ಸುಜುಕಿ, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೋ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಆರಂಭಿಕ ಅವಧಿಯಲ್ಲಿ ಟಾಪ್ 5 ಲೂಸರ್ ಆಗಿದ್ದು, ಕ್ರಮವಾಗಿ.ಶೇ.3.8, ಶೇ.3.8, ಶೇ.3.7, ಶೇ.3.6, ಮತ್ತು ಶೇ.3.3ರಷ್ಟು ಇಳಿಕೆ ಕಂಡಿವೆ. ಹಿಂಡಾಲ್ಕೊ, ಕೋಲ್ ಇಂಡಿಯಾ, ಟಾಟಾ ಸ್ಟೀಲ್, ಒಎನ್‌ಜಿಸಿ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಅಗ್ರ ಐದು ಗೇನರ್‌ಗಳಾಗಿವೆ ಎಂದು ಎನ್‌ಎಸ್‌ಇ ಅಂಕಿಅಂಶಗಳು ತೋರಿಸಿವೆ.

English summary

Russia- Ukrain war: Share Market Today: Sensex Falls Over 900 Points, Nifty50 Below 16,600

Russia- Ukrain war: India’s key indices — S&P BSE Sensex and NSE Nifty50 — have declined sharply in early trade on Wednesday as investors worried about the ongoing geostrategic war.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X