For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಬ್ಯಾಂಕ್‌ಗೆ ಬೇಕು 1422 ಸಿಬಿಒ ಹುದ್ದೆ; ಆರಂಭಿಕ ಸಂಬಳ 68 ಸಾವಿರವರೆಗೆ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1422 ಸಿಬಿಒ ಹುದ್ದೆಗಳು ಖಾಲಿ ಇದ್ದು, ಇವುಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಲ್ ಬೇಸ್ಡ್ ಆಫೀಸರ್‌ಗಳ ನೇಮಕಾತಿಗೆ ಎಸ್‌ಬಿಐ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ನವೆಂಬರ್ 7ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ.

ನೋಟಿಫಿಕೇಶನ್ ಪ್ರಕಾರ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಿಬಿಒ ಹುದ್ದೆಗಳು ಖಾಲಿ ಇವೆ. ತಿಂಗಳಿಗೆ 63 ಸಾವಿರ ರೂವರೆಗೂ ಸಂಬಳದ ಆಫರ್ ಕೊಡಲಾಗಿದೆ.

ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?ಎನ್‌ಬಿಎಫ್‌ಸಿ ಎಫ್‌ಡಿ ಹೂಡಿಕೆ ಉತ್ತಮ ಯಾಕೆ?

ಅಭ್ಯರ್ಥಿಗಳ ವಯಸ್ಸು 30 ವರ್ಷ ಮೀರಿರಬಾರದು. ವಿಶೇಷ ಚೇತನದ ಅಭ್ಯರ್ಥಿಗಳಿಗೆ 45 ವರ್ಷದವರೆಗೂ ಅವಕಾಶ ಇದೆ. ಆನ್‌ಲೈನ್‌ನಲ್ಲೇ ಪರೀಕ್ಷೆ ನಡೆಸಲಾಗುತ್ತದೆ.

ಸಿಬಿಒ ಕೆಲಸ ಹೇಗಿರುತ್ತದೆ?

ಸಿಬಿಒ ಎಂದರೆ ಸರ್ಕಲ್ ಬೇಸ್ಡ್ ಆಫೀಸರ್. ಇವರು ಬ್ಯಾಂಕ್ ಚಟುವಟಿಕೆಯ ಮುಖ್ಯಭಾಗದಲ್ಲಿರುತ್ತಾರೆ. ತಮ್ಮ ನಿಯೋಜಿತ ಶಾಖೆಗಳಲ್ಲಿ ಸಾಲದ ಅರ್ಜಿಗಳನ್ನು ಅನುಮೋದಿಸುವ ಹೊಣೆಗಾರಿಕೆ ಇವರದ್ದಾಗಿರುತ್ತದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳು ಯಾವ ಅಡೆತಡೆ ಇಲ್ಲದೇ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳುವುದು ಇವರ ಜವಾಬ್ದಾರಿ. ಬ್ಯಾಂಕ್ ಮತ್ತು ಗ್ರಾಹಕರ ಮಧ್ಯೆ ಆರೋಗ್ಯಯುತ ಸಂಬಂಧ ಇರುವಂತೆ ನೋಡಿಕೊಳ್ಳಬೇಕು.

ಯಾವುದೇ ಹೊಸ ನೀತಿ ಬಂದರೂ ಅದು ಸರಾಗವಾಗಿ ಅಳವಡಿಕೆ ಮಾಡುವ ಹೊಣೆ ಇವರದ್ದು.

ಎಸ್‌ಬಿಐನ ಸಿಬಿಒ ನೇಮಕಾತಿ ವಿವರ

ಎಸ್‌ಬಿಐನ ಸಿಬಿಒ ನೇಮಕಾತಿ ವಿವರ

ಹುದ್ದೆ ಹೆಸರು: ಸಿಬಿಒ- ಸರ್ಕಲ್ ಬೇಸ್ಡ್ ಆಫಿಸರ್
ಒಟ್ಟು ಹುದ್ದೆ: 1422
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 2022, ನವೆಂಬರ್ 7
ಶಿಕ್ಷಣ: ಮಾನ್ಯ ವಿಶ್ವವಿದ್ಯಾಲಯದಿಂದ ಪದವಿ
ಅರ್ಜಿ ಹೇಗೆ ಸಲ್ಲಿಸುವುದು: ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಸೆಪ್ಟೆಂಬರ್ 30ಕ್ಕೆ ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ಆಗಿರಬೇಕು.
ಆಯ್ಕೆ ಪ್ರಕ್ರಿಯೆ: ಆನ್‌ಲೈನ್‌ನಲ್ಲಿ ಪರೀಕ್ಷೆ, ಸ್ಕ್ರೀನಿಂಗ್ ಮತ್ತು ಇಂಟರ್ವ್ಯೂ

ವಯೋಮಿತಿಯಲ್ಲಿ ವಿನಾಯಿತಿ:

ವಯೋಮಿತಿ 30 ವರ್ಷ ಎಂದು ನಿಗದಿಯಾಗಿದೆ. ಒಬಿಸಿಗೆ 3 ವರ್ಷ, ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಇದೆ. ಅಂದರೆ 33 ವರ್ಷದ ಒಬಿಸಿ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

ವಿಶೇಷ ಚೇತನದ ಅಭ್ಯರ್ಥಿಗಳ ವಿಚಾರಕ್ಕೆ ಬಂದರೆ ಜನರಲ್ ಕೆಟಗರಿಯವರಿಗೆ ವಯೋಮಿತಿಯಲ್ಲಿ 10 ವರ್ಷ ವಿನಾಯಿತಿ ಇದೆ. ಒಬಿಸಿಯವರಿಗೆ 13 ವರ್ಷ, ಎಸ್ಸಿ ಎಸ್ಟಿಯವರಿಗೆ 15 ವರ್ಷದವರೆಗೂ ರಿಲ್ಯಾಕ್ಸೇಶನ್ ಇದೆ.

ಮೇಕ್ ಮೈ ಟ್ರಿಪ್, ಗೋಐಬಿಬೋ ಮತ್ತು ಓಯೋಗೆ 392 ಕೋಟಿ ರೂ ದಂಡಮೇಕ್ ಮೈ ಟ್ರಿಪ್, ಗೋಐಬಿಬೋ ಮತ್ತು ಓಯೋಗೆ 392 ಕೋಟಿ ರೂ ದಂಡ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸುವ ವಿಧಾನ

* ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಾಫ್ಟ್ ಕಾಪಿ ಇಟ್ಟುಕೊಂಡಿರಬೇಕು.
* ಸಕ್ರಿಯವಾಗಿರುವ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಇರಬೇಕು.
* ಆನ್‌ಲೈನ್‌ನಲ್ಲಿ ನೀವು ಅರ್ಜಿ ಸಲ್ಲಿಸುವಾಗ ಭರ್ತಿ ಮಾಡುವ ಹೆಸರು, ಜನ್ಮದಿನಾಂಕ, ವಿಳಾಸ ಇತ್ಯಾದಿ ಎಲ್ಲಾ ಮಾಹಿತಿಯೂ ಅಂತಿಮ ಎಂದು ಪರಿಗಣಿಸಲಾಗುತ್ತದೆ. ಯಾವ ಹಂತದಲ್ಲೂ ಇವುಗಳನ್ನು ಬದಲಿಸಲು ಆಗುವುದಿಲ್ಲ.
* ವಿಶೇಷ ಚೇತನ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. ಆದರೆ, ಇತರರಿಗೆ 750 ರೂ ಶುಲ್ಕ ಇರುತ್ತದೆ. ಇದನ್ನು ಆನ್‌ಲೈನ್‌ನಲ್ಲೇ ಪೇ ಮಾಡಬೇಕು.

ಎಲ್ಲೆಲ್ಲಿ ಎಸ್‌ಬಿಒ ಹುದ್ದೆಗಳು ಖಾಲಿ?

ಎಲ್ಲೆಲ್ಲಿ ಎಸ್‌ಬಿಒ ಹುದ್ದೆಗಳು ಖಾಲಿ?

ಒಟ್ಟು ಎಸ್‌ಬಿಒ ಹುದ್ದೆಗಳು: 1422
ಮಧ್ಯಪ್ರದೇಶ/ಛತ್ತೀಸ್‌ಗಡ: 183
ಒಡಿಶಾ: 175
ತೆಲಂಗಾಣ: 176
ರಾಜಸ್ಥಾನ: 201
ಪಶ್ಚಿಮ ಬಂಗಾಳ/ಸಿಕ್ಕಿಂ/ಅಂಡಮಾನ್ ನಿಕೋಬಾರ್: 175
ಮಹಾರಾಷ್ಟ್ರ/ಗೋವಾ: 212
ಅಸ್ಸಾಂ/ ಅರುಣಾಚಲಪ್ರದೇಶ/ ಮಣಿಪುರ/ ಮೇಘಾಲಯ / ಮಿಝೋರಾಂ / ನಾಗಾಲ್ಯಾಂಡ್ / ತ್ರಿಪುರ: 300

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಕೆಲವೊಮ್ಮೆ ಗೊಂದಲ ಅಥವಾ ತಾಂತ್ರಿಕ ದೋಷಗಳು ಎದುರಾಗಬಹುದು. ಸಹಾಯವಾಣಿ ಸಂಖ್ಯೆ: 022-22820427 ಅನ್ನು ಬೆಳಗ್ಗೆ 11ರಿಂದ ಮಧ್ಯಾಹ್ನ 5ರವರೆಗೆ ಕರೆ ಮಾಡಿ ಮಾತನಾಡಬಹುದು.

English summary

SBI Bank 1422 CBO Jobs Recruitment Details, Start Salary Upto Rs 68k

State bank of India has published notification about 1422 CBO job vacance at various state and UTs. Interesting candidates can apply online till November 7th.
Story first published: Thursday, October 20, 2022, 16:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X