For Quick Alerts
ALLOW NOTIFICATIONS  
For Daily Alerts

ಎಸ್ ಬಿಐ ಕಾರ್ಡ್ಸ್ ಐಪಿಒಗೆ 750ರಿಂದ 755 ರುಪಾಯಿ ದರ ನಿಗದಿ

|

ಎಸ್ ಬಿಐ ಕಾರ್ಡ್ ನ ಐಪಿಒ ಸಮಿತಿಯು ಸಾರ್ವಜನಿಕ ಆರಂಭಿಕ ಕೊಡುಗೆ (ಐಪಿಒ) ದರವನ್ನು ನಿಗದಿ ಮಾಡಿದೆ. ಪ್ರತಿ ಈಕ್ವಿಟಿ ಷೇರಿಗೆ 750ರಿಂದ 755 ರುಪಾಯಿ ದರ ನಿಗದಿ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ ಸಂಜೆ ತಿಳಿಸಿರುವ ಪ್ರಕಾರ 'ಅರ್ಹ ಸಿಬ್ಬಂದಿ'ಗೆ 75 ರುಪಾಯಿ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ.

ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರ

ಇನ್ನು ಬಿಡ್ ಗೆ ಕನಿಷ್ಠ ಸಂಖ್ಯೆಯನ್ನೂ ನಿಗದಿ ಮಾಡಲಾಗಿದೆ. ಕನಿಷ್ಠ 19 ಷೇರುಗಳಿಗೆ ಅರ್ಜಿ ಹಾಕಬೇಕಾಗುತ್ತದೆ. ಹೆಚ್ಚಿನ ಷೇರುಗಳು ಬೇಕಿದ್ದಲ್ಲಿ ಅದರ ಮೇಲೆ 19ರ ಗುಣಕದಲ್ಲಿ ಬಿಡ್ ಮಾಡಬೇಕು. ಎಸ್ ಬಿಐ ಕಾರ್ಡ್ಸ್ ನಿಂದ ಮಾರ್ಚ್ 2ನೇ ತಾರೀಕು ಐಪಿಒ ಆರಂಭವಾಗುತ್ತದೆ. 9000 ಸಾವಿರ ಕೋಟಿಗಿಂತ ಸ್ವಲ್ಪ ಹೆಚ್ಚು ಮೊತ್ತ ಸಂಗ್ರಹಿಸುವ ಗುರಿ ಇರಿಸಿಕೊಳ್ಳಲಾಗಿದೆ. ಆ ಮೂಲಕ ಸಂಗ್ರಹ ಆಗುವ ಮೊತ್ತವನ್ನು ಮಾತೃಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗಾಗಿ ಬಳಸಲಾಗುತ್ತದೆ.

ಎಸ್ ಬಿಐ ಕಾರ್ಡ್ಸ್ ಐಪಿಒಗೆ 750ರಿಂದ 755 ರುಪಾಯಿ ದರ ನಿಗದಿ

ಹೊಸದಾಗಿ 500 ಕೋಟಿ ರುಪಾಯಿ ಮೌಲ್ಯದ 13,05,26,798 ಈಕ್ವಿಟಿ ಷೇರುಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಎಸ್ ಬಿಐನ 3,72,93,371 ಷೇರುಗಳು ಇದ್ದರೆ, ಕಾರ್ಲೈಲ್ ಗ್ರೂಪ್ ನ 9,32,33,427 ಷೇರುಗಳು ಇರುತ್ತದೆ. ಅಂದ ಹಾಗೆ ಬಿಡ್ಡಿಂಗ್ ಪ್ರಕ್ರಿಯೆ ಮಾರ್ಚ್ 5ನೇ ತಾರೀಕು ಕೊನೆಯಾಗುತ್ತದೆ.

English summary

SBI Cards IPO Price Band 750- 755 Fixed

SBI cards IPO price band fixed for 750-755. Bidding date start from March 2nd to 5th.
Story first published: Tuesday, February 25, 2020, 14:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X