For Quick Alerts
ALLOW NOTIFICATIONS  
For Daily Alerts

SBI ಉಳಿತಾಯ ಖಾತೆಯ ಬಡ್ಡಿ ದರ ಈಗ ಹಿಂದೆಂದಿಗಿಂತಲೂ ಕಡಿಮೆ: 2.75 ಪರ್ಸೆಂಟ್‌ಗೆ ಇಳಿಕೆ

|

ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಹಿಂದೆಂದಿಗಿಂತಲೂ ಕಡಿಮೆ ಮಟ್ಟಕ್ಕೆ ಕಡಿತಗೊಳಿಸಿದೆ. ಎಸ್‌ಬಿ ಖಾತೆಯ ಮೇಲಿನ ಬಡ್ಡಿದರವು 0.25 ಪರ್ಸೆಂಟ್ ಕಡಿತಗೊಳಿಸಿದ್ದು 2.75 ಪರ್ಸೆಂಟ್‌ಗೆ ಇಳಿಸಿದೆ.

 

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಮತ್ತೆ ಇಳಿಸಿದ SBI : 2020ರಲ್ಲಿ ನಾಲ್ಕನೇ ಬಾರಿಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಮತ್ತೆ ಇಳಿಸಿದ SBI : 2020ರಲ್ಲಿ ನಾಲ್ಕನೇ ಬಾರಿ

ಎಸ್‌ಬಿಐನ ಈ ಹೊಸ ಬಡ್ಡಿ ದರಗಳು ಇದೇ ತಿಂಗಳು 15ರಿಂದಲೇ ಜಾರಿಗೆ ಬರಲಿದೆ. ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಹರಿವು ಇರುವುದರಿಂದ ಬಡ್ಡಿ ದರ ಮರು ಹೊಂದಾಣಿಕೆ ಮಾಡಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

 
SBI ಉಳಿತಾಯ ಖಾತೆಯ ಬಡ್ಡಿ ದರ ಈಗ ಹಿಂದೆಂದಿಗಿಂತಲೂ ಕಡಿಮೆ

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ (ಎಂಸಿಎಲ್ಆರ್) ಎಲ್ಲಾ ಅವಧಿಯ ಬಡ್ಡಿ ದರವನ್ನೂ ಶೇಕಡಾ 0.32 ಪರ್ಸೆಂಟ್ ಇಳಿಸಲಾಗಿದೆ. ಹೊಸ ದರವು ಇದೇ ತಿಂಗಳು 10ರಿಂದ ಅನ್ವಯವಾಗಲಿದೆ.

ಇತ್ತೀಚೆಗಷ್ಟೇ ಕೆನರಾ ಬ್ಯಾಂಕ್ ಆರ್‌ಬಿಐ ರೆಪೋ ದರ ಕಡಿತಗೊಳಿಸಿದ ಬಳಿಕ, ರೆಪೋ ದರ ಆಧರಿಸಿರುವ ಸಾಲಗಳ ಮೇಲಿನ ಬಡ್ಡಿದರದಲ್ಲಿ (RLLR) 0.75ರಷ್ಟು ಕಡಿಮೆ ಮಾಡಿದೆ.ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ(ಎಂಸಿಎಲ್ಆರ್)ಆಧಾರಿತ ಸಾಲದ ಬಡ್ಡಿ ದರದಲ್ಲಿಯೂ ಒಂದು ವರ್ಷದ ಮಟ್ಟಿಗೆ 0.35 ಪರ್ಸೆಂಟ್‌ವರೆಗೂ ಇಳಿಕೆ ಮಾಡಿದೆ.

English summary

SBI Cuts Savings Deposit Rate To Lowest Ever

SBI Cuts Savings Deposit Rate To Lowest Ever 2.75 Percent
Story first published: Wednesday, April 8, 2020, 18:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X