For Quick Alerts
ALLOW NOTIFICATIONS  
For Daily Alerts

SBI ತುರ್ತು ಸಾಲ ಯೋಜನೆ:ಕೇವಲ 45 ನಿಮಿಷದಲ್ಲಿ 5 ಲಕ್ಷ ರು. ನಿಮ್ಮ ಅಕೌಂಟ್‌ಗೆ!

|

ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 'ಎಸ್‌ಬಿಐ ತುರ್ತು ಸಾಲ ಯೋಜನೆ' ಅಡಿಯಲ್ಲಿ ತನ್ನ ಗ್ರಾಹಕರಿಗೆ ಕೇವಲ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನೀಡಲಿದೆ.

ಸಾಲ ತೆಗೆದುಕೊಂಡು 6 ತಿಂಗಳ ಬಳಿಕ EMI ಪ್ರಾರಂಭ

ಸಾಲ ತೆಗೆದುಕೊಂಡು 6 ತಿಂಗಳ ಬಳಿಕ EMI ಪ್ರಾರಂಭ

ಎಸ್‌ಬಿಐನ ಈ ತುರ್ತು ಸಾಲ ಯೋಜನೆ ಅಡಿಯಲ್ಲಿ ಸಾಲ ಪಡೆದವರು, ಸಾಲ ಅನುಮೋದಿಸಿದ ಆರು ತಿಂಗಳ ನಂತರ ಸಮನಾದ ಮಾಸಿಕ ಕಂತುಗಳನ್ನು ಪಾವತಿಸಬೇಕಾಗುತ್ತದೆ. ಅಂದರೆ ನಿಮ್ಮ ಇಎಂಐ ಸಾಲ ಪಡೆದು ಆರು ತಿಂಗಳ ಬಳಿಕ ಶುರುವಾಗಲಿದೆ.

ಕೊರೊನಾವೈರಸ್‌ದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ಉಂಟಾಗಿರುವ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿರುವ ಗ್ರಾಹಕರಿಗೆ ಈ ತುರ್ತು ಸಾಲ ಯೋಜನೆಯಿಂದ ಸಹಾಯವಾಗುತ್ತದೆ.

 

10.5 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ

10.5 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ

ಎಸ್‌ಬಿಐ ತುರ್ತು ಸಾಲ ಯೋಜನೆಯು 10.5 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಮತ್ತು ಸಾಲದ ಇಎಂಐ ಆರು ತಿಂಗಳ ನಂತರ ಪ್ರಾರಂಭವಾಗಲಿದೆ. ಇದು ಇತರ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮವಾಗಿದೆ.

 

 

ನೀವು ಸಾಲ ಪಡೆಯಲು ಅರ್ಹರೆಂದು ತಿಳಿಯಲು ಮೊದಲು SMS ಮಾಡಬೇಕು

ನೀವು ಸಾಲ ಪಡೆಯಲು ಅರ್ಹರೆಂದು ತಿಳಿಯಲು ಮೊದಲು SMS ಮಾಡಬೇಕು

ಆನ್‌ಲೈನ್‌ನಲ್ಲಿ ಅಥವಾ ಎಸ್‌ಬಿಐನ ಯೋನೊ ಆಪ್ ಮೂಲಕ ಅರ್ಜಿ ಸಲ್ಲಿಸುವ ಮೂಲಕ ನೀವು ಈ ತುರ್ತು ಸಾಲ ಯೋಜನೆಯನ್ನು ಪಡೆಯಬಹುದು. ಆದರೆ ಅದಕ್ಕೂ ಮೊದಲು ನೀವು ಈ ಸಾಲ ಪಡೆಯಲು ಅರ್ಹರೆಂದು ತಿಳಿದುಕೊಳ್ಳಲು ಎಸ್‌ಎಂಎಸ್ ಮಾಡಬೇಕು. ನಿಮ್ಮ ಮೊಬೈಲ್‌ನಲ್ಲಿ 'PAPL' ಎಂದು ಟೈಪ್‌ ಮಾಡಿ ನಿಮ್ಮ ಎಸ್‌ಬಿಐ ಅಕೌಂಟ್ ನಂಬರ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ಟೈಪ್‌ ಮಾಡಿ 567676 ಗೆ ಕಳುಹಿಸುವ ಮೂಲಕ ನೀವು ಈ ಸಾಲ ಯೋಜನೆಯ ಅರ್ಹತೆಯನ್ನು ಪರಿಶೀಲಿಸಬಹುದು. ನೀವು ಸಾಲಕ್ಕೆ ಅರ್ಹರಾಗಿದ್ದರೆ ಎಸ್‌ಬಿಐ ನಿಮ್ಮ ಎಸ್‌ಎಂಎಸ್‌ಗೆ ಪ್ರತಿಕ್ರಿಯಿಸುತ್ತದೆ. ಜೊತೆಗೆ ಕೆಲವು ನಿಯಮಗಳು ಕೂಡ ಅನ್ವಯವಾಗಲಿದೆ.

ಎಸ್‌ಬಿಐ ತುರ್ತು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಎಸ್‌ಬಿಐ ತುರ್ತು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

- ಯೋನೊ ಎಸ್‌ಬಿಐ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು 'ಪೂರ್ವ-ಅನುಮೋದಿತ ಸಾಲ'(Pre-approved Loan) ಕ್ಲಿಕ್ ಮಾಡಿ.

- ಅಧಿಕಾರಾವಧಿ ಮತ್ತು ಸಾಲದ ಮೊತ್ತವನ್ನು ಸೆಲೆಕ್ಟ್ ಮಾಡಿ.

- ನಿಮ್ಮ ಖಾತೆಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುವುದು ಮತ್ತು ನೀವು ಅದನ್ನು ಸಲ್ಲಿಸಬೇಕು.

- ಎಸ್‌ಬಿಐ ತುರ್ತು ಸಾಲದ ಮೊತ್ತವನ್ನು ತಕ್ಷಣ ನಿಮ್ಮ ಎಸ್‌ಬಿಐ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಪ್ರಕ್ರಿಯೆಯು ಎಲ್ಲವೂ ಸರಿಯಾಗಿ ನಡೆದರೆ 45 ನಿಮಿಷಗಳಲ್ಲಿ 5 ಲಕ್ಷ ರುಪಾಯಿವರೆಗೆ ಸಾಲವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

 

English summary

SBI Emergency Loan Scheme Rs 5 lakh Loan In 45 Min

India's largest public sector bank SBI under its 'SBI Emergency Loan Scheme' is giving its customers up to Rs 5 lakh loan in just 45 minutes
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X