For Quick Alerts
ALLOW NOTIFICATIONS  
For Daily Alerts

ಗೃಹ ಸಾಲ ಬಡ್ಡಿ ದರ ಇಳಿಕೆ ಮಾಡಿದ ಎಸ್‌ಬಿಐ

|

ಕೋವಿಡ್-19 ಸಾಂಕ್ರಾಮಿಕ ರೋಗವು ದೇಶದಲ್ಲಿ ನಾನಾ ಸಮಸ್ಯೆಗಳಿಗೆ ಕಾರಣವಾಯಿತು. ಕೋಟ್ಯಾಂತರ ಉದ್ಯೋಗ ನಷ್ಟದ ಜೊತೆಗೆ ಅಪಾರ ಪ್ರಮಾಣದ ನಷ್ಟವು ಉಂಟಾಗಿದೆ. ಇದರ ನಡುವೆ ಸ್ವಂತ ಮನೆ ಕಟ್ಟಬೇಕು ಎನ್ನುವವರಿಗೆ ಇಲ್ಲಿದೆ ಶುಭ ಸುದ್ದಿ.

ಹೌದು, ಗೃಹ ಸಾಲದ ಬಡ್ಡಿ ದರಗಳು ಈಗಾಗಲೇ ಕಳೆದ 10 ವರ್ಷಗಳಲ್ಲಿಯೇ ಕಡಿಮೆ ಮಟ್ಟಕ್ಕೆ ತಲುಪಿದೆ. ಇದರ ನಡುವೆ ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರಗಳನ್ನು ಮಾರ್ಚ್ 31ರವರೆಗೆ ಮತ್ತಷ್ಟು ಇಳಿಕೆ ಮಾಡಿದೆ.

ಎಸ್‌ಬಿಐ ಗೃಹ ಸಾಲಕ್ಕೆ 70 ಬೇಸಿಸ್ ಪಾಯಿಂಟ್‌ಗಳ (ಶೇ 0.70) ರಿಯಾಯಿತಿಯನ್ನು ಬ್ಯಾಂಕ್ ಘೋಷಿಸಿದೆ. ಗೃಹ ಸಾಲದ ಮೇಲಿನ ಬಡ್ಡಿದರವು ಶೇಕಡಾ 6.70ರಿಂದ ಪ್ರಾರಂಭವಾಗುತ್ತಿದೆ. ಜೊತೆಗೆ ಸಂಸ್ಕರಣಾ ಶುಲ್ಕ (Processing Fees) ಶೇಕಡಾ 100ರಷ್ಟು ಮನ್ನಾ ಮಾಡಲಾಗುತ್ತಿದೆ.

ಗೃಹ ಸಾಲ ಬಡ್ಡಿ ದರ ಇಳಿಕೆ ಮಾಡಿದ ಎಸ್‌ಬಿಐ

ಇನ್ನು ಈ ಸಾಲದ ಮೇಲಿನ ಬಡ್ಡಿ ರಿಯಾಯಿತಿಯು ಗ್ರಾಹಕರ ಸಿಬಿಲ್ ಸ್ಕೋರ್ ಆಧರಿಸಿದೆ. ಉತ್ತಮ ಮರುಪಾವತಿ ಇತಿಹಾಸವನ್ನು ಕಾಯ್ದುಕೊಳ್ಳುವ ಗ್ರಾಹಕರಿಗೆ ಉತ್ತಮ ದರವನ್ನು ವಿಸ್ತರಿಸುವುದು ಮುಖ್ಯ ಎಂದು ಎಸ್‌ಬಿಐ ನಂಬಿದೆ ಎಂದು ಬ್ಯಾಂಕ್ ತಿಳಿಸಿದೆ.

SBI ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದೀರಾ? : ಕಡಿಮೆಯಾಗಿದೆ ಬಡ್ಡಿ ದರSBI ನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದೀರಾ? : ಕಡಿಮೆಯಾಗಿದೆ ಬಡ್ಡಿ ದರ

ಎಸ್‌ಬಿಐ ಗೃಹ ಸಾಲ ಬಡ್ಡಿದರಗಳನ್ನು ಸಿಬಿಲ್ ಸ್ಕೋರ್‌ಗೆ ಜೋಡಿಸಿದ್ದು 75 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 6.70 ಬಡ್ಡಿ ದರಗಳನ್ನು ವಿಧಿಸಲಿದೆ.

5 ಬಿಪಿಎಸ್ ಹೆಚ್ಚುವರಿ ಬಡ್ಡಿ ರಿಯಾಯಿತಿ ಪಡೆಯಲು ಗ್ರಾಹಕರು ತಮ್ಮ ಮನೆಯಿಂದಲೇ ಸುಲಭವಾಗಿ ಯೋನೊ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತರರಾಷ್ಟ್ರೀಯ ಮಹಿಳಾ ದಿನದ ಮುನ್ನಾ ದಿನದಂದು ಮಹಿಳಾ ಸಾಲಗಾರರಿಗೆ ವಿಶೇಷ 5 ಬಿಪಿಎಸ್ ರಿಯಾಯಿತಿ ನೀಡಲಾಗುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.

English summary

SBI Reduced Home Loan Rate To 6.7 Percent Till March 31

State bank of india has reduced the rate on home loans to 6.70 percent till 31 March, the bank said in a statement on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X