For Quick Alerts
ALLOW NOTIFICATIONS  
For Daily Alerts

ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್ ಸೇರಿ ನಾಲ್ವರಿಗೆ 36 ಲಕ್ಷ ರೂ. ದಂಡ ವಿಧಿಸಿದ ಸೆಬಿ

|

ಮಾರುಕಟ್ಟೆ ನಿಯಂತ್ರಕ ಸೆಬಿಯು ಪಿಜಿಐಎಂ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮತ್ತು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಮೆನನ್ ಸೇರಿದಂತೆ ಐದು ಘಟಕಗಳ ಮೇಲೆ ಒಟ್ಟು 36 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.

ಐಎಸ್‌ಟಿ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣದಿಂದಾಗಿ ಕುಮರೇಶ್ ರಾಮಕೃಷ್ಣನ್, ಪುನೀತ್ ಪಾಲ್, ರಾಕೇಶ್ ಸೂರಿ ಹಾಗೂ ಪಿಜಿಐಎಂ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಮೆನನ್ ಮೇಲೆ ದಂಡವನ್ನು ವಿಧಿಸಿದ್ದಾರೆ. ಕುಮರೇಶ್ ರಾಮಕೃಷ್ಣನ್, ಪುನೀತ್ ಪಾಲ್, ರಾಕೇಶ್ ಸೂರಿ ಈ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಸಂಸ್ಥೆಯ ಫಂಡ್ ಮ್ಯಾನೇಜರ್ ಆಗಿದ್ದರು.

ಇಂಡಿಯಾ ಇನ್ಫೋಲೈನ್‌ಗೆ 1 ಕೋಟಿ ರು ದಂಡ ವಿಧಿಸಿದ ಸೆಬಿಇಂಡಿಯಾ ಇನ್ಫೋಲೈನ್‌ಗೆ 1 ಕೋಟಿ ರು ದಂಡ ವಿಧಿಸಿದ ಸೆಬಿ

ಪಿಜಿಐಎಂ ಎಂಎಫ್‌ನ ಯೋಜನೆಗಳಲ್ಲಿ ಐಎಸ್‌ಟಿಯನ್ನು ಅನ್ವಯ ಮಾಡುವ ಸಂದರ್ಭದಲ್ಲಿ ಐದು ಘಟಕಗಳು ಮ್ಯೂಚುಯಲ್ ಫಂಡ್ ನಿಯಮಗಳ ನಿಬಂಧನೆಗಳಿಗೆ ಬದ್ಧವಾಗಿಲ್ಲ ಎಂದು ಸೆಬಿಯು ಆದೇಶದಲ್ಲಿ ಉಲ್ಲೇಖ ಮಾಡಿದೆ. ಐಎಸ್‌ಟಿ ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಕೆಲವು ಕಡಿಮೆ-ಗುಣಮಟ್ಟದ ಸೆಕ್ಯುರಿಟಿಗಳನ್ನು ಕ್ಲೋಸ್-ಎಂಡೆಡ್ ಸ್ಕೀಮ್‌ಗಳಿಂದ ಓಪನ್-ಎಂಡೆಡ್ ಸ್ಕೀಮ್‌ಗಳಿಗೆ ವರ್ಗಾಯಿಸಲಾಗಿದೆ.

ಪಿಜಿಐಎಂ ಎಎಂಸಿ ಸಿಇಒ ಅಜಿತ್ ಮೆನನ್, ಇತರರಿಗೆ 36 ಲಕ್ಷ ರೂ. ದಂಡ

ಈ ಸ್ವಾಪ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ. ನಿರ್ದಿಷ್ಟವಾಗಿ ಕೆಲವು ಕ್ಲೋಸ್-ಎಂಡೆಡ್ ಸ್ಕೀಮ್‌ಗಳ ಹೂಡಿಕೆದಾರರ ವೆಚ್ಚದಲ್ಲಿ ಹೂಡಿಕೆದಾರರ ಹಿತಾಸಕ್ತಿಯನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕ್ಲೋಸ್-ಎಂಡೆಡ್ ಸ್ಕೀಮ್‌ಗಳ ಹೂಡಿಕೆದಾರರು, ಓಪನ್-ಎಂಡೆಡ್ ಸ್ಕೀಮ್‌ಗಳಿಗಿಂತ ಭಿನ್ನವಾಗಿ, ಯೋಜನೆಯ ಮುಕ್ತಾಯದ ಮೊದಲು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ.

ಸಂಸ್ಥೆಯ ಮೇಲೆ ಇರುವ ಆರೋಪವೇನು?

"ಪರಿಶೀಲನೆಯ ಅವಧಿಯಲ್ಲಿ ಫಂಡ್ ಮ್ಯಾನೇಜರ್‌ಗಳು ಮಾಡಿದ ಐಎಸ್‌ಟಿಗಳು ಕ್ಲೋಸ್-ಎಂಡೆಡ್ ಸ್ಕೀಮ್ ಹೋಲ್ಡರ್‌ಗಳ ಹಿತಾಸಕ್ತಿಗೆ ಸ್ಪಷ್ಟವಾಗಿ ಪೂರ್ವಾಗ್ರಹಪೀಡಿತವಾಗಿದೆ. ಇಂಟರ್ ಸ್ಕೀಮ್ ವರ್ಗಾವಣೆಗಳು ಕೇವಲ ಎರಡು ಕಡೆಯ ಹೂಡಿಕೆದಾರರಿಗೆ (ಓಪನ್ ಮತ್ತು ಕ್ಲೋಸ್ ಎಂಡೆಡ್ ಸ್ಕೀಮ್) ಅನ್ಯಾಯವಾಗಿದೆ. ಎರಡೂ ಚಂದಾದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿಲ್ಲ," ಎಂದು ಸೆಬಿಯು ಹೇಳಿದೆ.

ಅವರು ಮ್ಯೂಚುವಲ್ ಫಂಡ್ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿರುವ ಸೆಬಿಯು ಪಿಜಿಐಎಂ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಗೆ 25 ಲಕ್ಷ, ಮೆನನ್‌ಗೆ 5 ಲಕ್ಷ ಮತ್ತು ರಾಮಕೃಷ್ಣನ್, ಪಾಲ್ ಮತ್ತು ಸೂರಿಗೆ ತಲಾ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಆಗಸ್ಟ್ 2018 ರಿಂದ ಫೆಬ್ರವರಿ 2019 ರ ಅವಧಿಗೆ ಪಿಜಿಐಎಂ ಇಂಡಿಯಾ ಮ್ಯೂಚುಯಲ್ ಫಂಡ್‌ನ ಎಲ್ಲಾ ಯೋಜನೆಗಳ ಪರಿಶೀಲನೆ ಬಳಿಕ ಸೆಬಿಯು ಈ ಆದೇಶವನ್ನು ನೀಡಿದೆ. ಕ್ಲೋಸ್-ಎಂಡೆಡ್ ಸ್ಕೀಮ್‌ಗಳಲ್ಲಿ ಒಟ್ಟು ಸ್ವತ್ತುಗಳು ಮತ್ತು ಎನ್‌ಎವಿಯು ಸ್ಕೀಮ್ ಮುಚ್ಚುವ ಅವಧಿಗೆ ಮಾತ್ರ ಪ್ರಸ್ತುತವಾಗುತ್ತದೆ. ಆದರೆ ಆದರೆ ಚಂದಾದಾರರು ಯಾವುದೇ ಸಮಯದಲ್ಲಿ ಸ್ಕೀಮ್ ಕ್ಲೋಸ್ ಮಾಡುವ ವೇಳೆ ಯೋಜನೆಯ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ತಿಳಿದಿರಬೇಕಾಗುತ್ತದೆ.

English summary

Sebi Fines Rs 36 Lakh, On PGIM AMC, CEO Ajit Menon, Others

Capital markets regulator Sebi has imposed a penalty totalling Rs 36 lakh on five entities including PGIM Asset Management Company and its chief executive officer Ajit Menon.
Story first published: Saturday, July 2, 2022, 13:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X