For Quick Alerts
ALLOW NOTIFICATIONS  
For Daily Alerts

SEIL ಷೇರುಗಳಲ್ಲಿ ಮೋಸದ ವಹಿವಾಟು: 2.38 ಕೋಟಿ ರು. ದಂಡ ಹಾಕಿದ ಸೆಬಿ

|

ಸ್ಟೀಲ್ ಎಕ್ಸ್ ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (SEIL) ಷೇರುಗಳ ಮೋಸದ ವಹಿವಾಟುಗಳಲ್ಲಿ ಪಾಲ್ಗೊಂಡಿದ್ದಕ್ಕಾಗಿ 23 ಸಂಸ್ಥೆಗಳಿಗೆ ಷೇರು ಮಾರುಕಟ್ಟೆಯ ನಿಯಂತ್ರಕ ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾವು (ಸೆಬಿ) 2.38 ಕೋಟಿ ರುಪಾಯಿ ದಂಡ ವಿಧಿಸಿದೆ. 23 ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ 5ರಿಂದ 8 ಲಕ್ಷ ರುಪಾಯಿ ತನಕ ದಂಡವನ್ನು ಹಾಕಲಾಗಿದೆ.

2017ರ ಜುಲೈನಿಂದ ಡಿಸೆಂಬರ್ ಮಧ್ಯೆ SEIL ಷೇರು ವಹಿವಾಟಿನ ಬಗ್ಗೆ ಸೆಬಿ ತನಿಖೆ ನಡೆಸಿದೆ. ಆ ವರ್ಷದ ಅಕ್ಟೋಬರ್ ನಿಂದ ನವೆಂಬರ್ ಮಧ್ಯೆ ಕೆಲವು ಉತ್ತೇಜನ ಎಸ್ಸೆಮ್ಮೆಸ್ ಗಳನ್ನು ಹೂಡಿಕೆದಾರರ ಮಧ್ಯೆ ಹರಿಬಿಟ್ಟಿರುವುದು ಗಮನಕ್ಕೆ ಬಂದಿದೆ. ಆ ಸಮಯದಲ್ಲಿ 100 ರುಪಾಯಿ ಇದ್ದ ಷೇರು 133 ತಲುಪಿ, 42.95 ರುಪಾಯಿಗೆ ಕುಸಿದಿದೆ.

ಮುಕೇಶ್ ಅಂಬಾನಿಗೆ 15 ಕೋಟಿ ರು., ರಿಲಯನ್ಸ್ ಗೆ 25 ಕೋಟಿ ರು. ದಂಡ ಹಾಕಿದ ಸೆಬಿಮುಕೇಶ್ ಅಂಬಾನಿಗೆ 15 ಕೋಟಿ ರು., ರಿಲಯನ್ಸ್ ಗೆ 25 ಕೋಟಿ ರು. ದಂಡ ಹಾಕಿದ ಸೆಬಿ

SEIL ಷೇರು ವಹಿವಾಟಿನ ಗಾತ್ರವನ್ನು ಈ ಸಂಸ್ಥೆಗಳು ಕೃತಕವಾಗಿ ಸೃಷ್ಟಿಸಲು, ಪರಸ್ಪರ ಕೆಲಸ ಮಾಡಿವೆ. ಈ ಅವಧಿಯಲ್ಲಿ SEIL ಷೇರು ವಹಿವಾಟಿನಲ್ಲಿ ಪದೇ ಪದೇ ತೊಡಗಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ. ಸುಳ್ಳಾದ ಸಕಾರಾತ್ಮಕ ಎಸ್ಸೆಮ್ಮೆಸ್ ಗಳನ್ನು SEIL ಪರವಾಗಿ ಹಬ್ಬಿಸಲಾಗಿದೆ. ಇದರಿಂದಾಗಿ ಹೂಡಿಕೆದಾರರು ಇನ್ನಷ್ಟು ಆಕರ್ಷಿತರಾಗಿದ್ದಾರೆ ಎಂದು ಸೆಬಿ ತಿಳಿಸಿದೆ.

SEIL ಷೇರುಗಳಲ್ಲಿ ಮೋಸದ ವಹಿವಾಟು: 2.38 ಕೋಟಿ ರು. ದಂಡ ಹಾಕಿದ ಸೆಬಿ

ಆ ನಂತರದಲ್ಲಿ ದಿಢೀರ್ ಆಗಿ ಷೇರಿನ ಬೆಲೆ ದೊಡ್ಡ ಮಟ್ಟದಲ್ಲಿ ಕುಸಿದು, ನಿಜವಾದ ಹೂಡಿಕೆದಾರರಿಗೆ ನಷ್ಟ ಉಂಟು ಮಾಡಿದೆ. ಸೆಬಿಯ ಅಧಿಕಾರಿ ಬಿ.ಜೆ. ದಿಲೀಪ್ ಈ ಬಗ್ಗೆ ಆದೇಶ ಹೊರಡಿಸಿದ್ದು, ಈ ಸಂಸ್ಥೆ ಹಾಗೂ ವ್ಯಕ್ತಿಗಳು PFUTP ನಿಯಮಾವಳಿಗಳನ್ನು ಮೀರಿದ್ದಾರೆ ಎಂದು ತಿಳಿಸಿದ್ದಾರೆ. ಸೋಮವಾರದಂದು ಹೊರಡಿಸಿದ ಮತ್ತೊಂದು ಆದೇಶದ ಪ್ರಕಾರ, ಪ್ರತೀಕ್ ಎಸ್ ಪಟೇಲ್ ಗೆ ಐದು ಲಕ್ಷ ರುಪಾಯಿ ದಂಡ ಹಾಕಲಾಗಿದೆ.

ಸ್ಟೀಲ್ ಎಕ್ಸ್ ಚೇಂಜ್ ಇಂಡಿಯಾ ಲಿಮಿಟೆಡ್ ವಿಚಾರದಲ್ಲಿ ಹೊರಡಿಸಿದ್ದ ಸಮನ್ಸ್ ಗೆ ಬದ್ಧವಾಗಿಲ್ಲ ಎಂದು ಈ ದಂಡ ಹಾಕಲಾಗಿದೆ.

English summary

SEBI Slapped Rs 2.38 Crore Penalty To 23 Entities Related To SEIL Share Fraudulent Trading

Securities and Exchange Board Of India slapped Rs 2.38 crore to 23 entities and individuals for fraudulent trading in SEIL shares.
Story first published: Tuesday, February 2, 2021, 9:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X