ಆರ್ ಬಿಐ ಹಣಕಾಸು ನೀತಿ ನಿರೀಕ್ಷೆಯಲ್ಲಿ ಮೇಲೇರಿದ ಷೇರು ಮಾರ್ಕೆಟ್

ನಾಸ್ಡಾಕ್ ನಲ್ಲಿ ಗುರುವಾರ ರಾತ್ರಿ ಕಂಡ ಗಳಿಕೆ ಮತ್ತು ಸಕಾರಾತ್ಮಕವಾದ SGX ನಿಫ್ಟ್ರಿಯು ಭಾರತ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಶುಕ್ರವಾರದಂದು (ಡಿಸೆಂಬರ್ 4, 2020) ಏರಿಕೆ ಕಾಣಲು ಕಾರಣ ಆಯಿತು. 0.32% ಏರಿಕೆ ಕಂಡು, ನಿಫ್ಟಿ 13167 ಪಾಯಿಂಟ್ ನೊಂದಿಗೆ ವಹಿವಾಟು ನಡೆಸಿತು. ಇನ್ನು ಸೆನ್ಸೆಕ್ಸ್ 150 ಪಾಯಿಂಟ್ ಗೂ ಹೆಚ್ಚು ಮೇಲೇರಿತು.

ಈ ದಿನ ಆರ್ ಬಿಐ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ ಮಾಡಲಿರುವ ಹಿನ್ನೆಲೆಯಲ್ಲಿ ಬ್ಯಾಂಕ್, ಹೌಸಿಂಗ್, ವಾಹನ ಷೇರುಗಳ ಮೇಲೆ ಗಮನ ಇರಲಿದೆ. ರಾಕೇಶ್ ಜುಂಜುನ್ ವಾಲಾ ತಮ್ಮ ಹೂಡಿಕೆ ಪ್ರಮಾಣವನ್ನು ಏರಿಕೆ ಮಾಡಿದ ಮೇಲೆ ಎನ್ ಸಿಸಿ ಷೇರು ಗಳಿಕೆ ಕಂಡಿದೆ. ಇನ್ನು ಕೆನರಾ ಬ್ಯಾಂಕ್ ನಿಂದ ಕನಿಷ್ಠ ಎರಡು ವರ್ಷದ ಅವಧಿ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರವನ್ನು ಹೆಚ್ಚಿಸಲಾಗಿದೆ.

ಆರ್ ಬಿಐ ಹಣಕಾಸು ನೀತಿ ನಿರೀಕ್ಷೆಯಲ್ಲಿ ಮೇಲೇರಿದ ಷೇರು ಮಾರ್ಕೆಟ್

ಟೆಲಿಕಾಂ ಮತ್ತು ಏರ್ ಲೈನ್ ಕ್ಷೇತ್ರದ ಷೇರುಗಳು ಸಹ ಗ್ರಾಹಕರ ಸಂಖ್ಯೆಯ ಮೂಲಕ ಗಮನ ಸೆಳೆಯುತ್ತಿವೆ. ಕೊರೊನಾಗೆ ಮುಂಚಿನ ಸ್ಥಿತಿಯ ಶೇಕಡಾ ಎಂಬತ್ತರಷ್ಟು ಸಾಮರ್ಥ್ಯದೊಂದಿಗೆ ವಿಮಾನಯಾನ ಸಂಸ್ಥೆಗಳು ಕಾರ್ಯ ನಿರ್ವಹಿಸಬಹುದು ಎಂದು ಸರ್ಕಾರವು ಘೋಷಣೆ ಮಾಡಿರುವುದು ಸಹ ಸಕಾರಾತ್ಮಕವಾದ ಬೆಳವಣಿಗೆ ಆಗಿದೆ.

ಈ ವರದಿ ಮಾಡುವ ಹೊತ್ತಿಗೆ ಏಷ್ಯನ್ ಮಾರ್ಕೆಟ್ ದುರ್ಬಲವಾಗಿ ವಹಿವಾಟು ನಡೆಸುತ್ತಿದ್ದವು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+