For Quick Alerts
ALLOW NOTIFICATIONS  
For Daily Alerts

ರೆಪೋ ದರ ಏರಿಕೆ ಬೆನ್ನಲ್ಲೇ ಷೇರುಪೇಟೆ ಹೇಗಿದೆ?

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದೆ. ಈ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್, ನಿಫ್ಟಿ ಏರಿಕೆಯಾಗಿದೆ. ಆದರೆ ಬಳಿಕ ಕೊಂಚ ಇಳಿಕೆಯಾಗುವ ಸಾಧ್ಯತೆ ಇದೆ.

ಆರ್‌ಬಿಐ ರೆಪೋ ದರವನ್ನು ಏರಿಕೆ ಘೋಷಣೆ ಮಾಡಿದ ಬಳಿಕ ಸುಮಾರು 11 ಗಂಟೆಗೆ 30 ಷೇರುಗಳ ಬಿಎಸ್‌ಇ ಸೂಚ್ಯಂಕ 485.35 ಅಂಕ ಅಥವಾ ಶೇಕಡ 0.86ರಷ್ಟು ಏರಿಕೆಯಾಗಿ 56,895.31ಕ್ಕೆ ತಲುಪಿದೆ. ಇನ್ನು ನಿಫ್ಟಿ 133.10 ಅಂಕ ಅಥವಾ ಶೇಕಡ 0.79ರಷ್ಟು ಹೆಚ್ಚಳವಾಗಿ 16,951.20ಕ್ಕೆ ಏರಿದೆ.

RBI Monetary Policy : ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐRBI Monetary Policy : ರೆಪೋ ದರ ಮತ್ತೆ 50 ಮೂಲಾಂಕ ಏರಿಸಿದ ಆರ್‌ಬಿಐ

ಇನ್ನು 1696 ಷೇರುಗಳು ಏರಿಕೆಯಾಗಿದ್ದರೆ, 1238 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 122 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇನ್ನು ಮಾರುತಿ, ಎಂಆರ್‌ಎಫ್, ಬಜಾಜ್ ಆಟೋ, ಈಚರ್ ಮೋಟರ್ಸ್ ಸ್ಟಾಕ್ ಏರಿಕೆಯಾಗಿದ್ದು, ಎಂ&ಎಂ, ಹಿರೋ ಮೋಟೋಕೋ, ಟಿವಿಎಸ್‌ ಮೋಟರ್ಸ್, ಟಾಟಾ ಮೋಟರ್ಸ್ ಸ್ಟಾಕ್ ಇಳಿಕೆಯಾಗಿದೆ.

ರೆಪೋ ದರ ಏರಿಕೆ ಬೆನ್ನಲ್ಲೇ ಷೇರುಪೇಟೆ ಹೇಗಿದೆ?

ತಜ್ಞರುಗಳು ಹೇಳುವುದು ಏನು?

ಇನ್ನು ಈ ಬಗ್ಗೆ ಮಾತನಾಡಿದ ಐಸಿಐಸಿಐ ಸೆಕ್ಯೂರಿಟೀಸ್ ಮುಖ್ಯ ಆರ್ಥಿಕ ತಜ್ಞ ಪ್ರಸೆಂಜಿತ್ ಬಸು, "ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಿರುವುದು ನಿರೀಕ್ಷಿತ. ಇನ್ನು ಡಿಸೆಂಬರ್‌ನಲ್ಲಿ ಎಂಪಿಸಿ ಸಭೆಯ ಬಳಿಕ 25 ಬಿಪಿಎಸ್ ಹೆಚ್ಚಳವಾಗುವ ಸಾಧ್ಯತೆ ಇದೆ. ಹಣದುಬ್ಬರವು ಕೂಡಾ ಹೆಚ್ಚಳವಾಗುವ ಸಾಧ್ಯತೆ ಇದೆ," ಎಂದು ತಿಳಿಸಿದ್ದಾರೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹಣದುಬ್ಬರದ ಬಗ್ಗೆ ಮಾಹಿತಿ ನೀಡುತ್ತಿರುವ ಸಂದರ್ಭದಲ್ಲಿಯೂ ರೆಪೋ ದರ ಹೆಚ್ಚಳವಾಗಿದೆ. ಸೆನ್ಸೆಕ್ಸ್ ಸುಮಾರು 250 ಅಂಕ ಏರಿಕೆಯಾಗಿದೆ.

Market Close: ಯಾವೆಲ್ಲ ಸ್ಟಾಕ್ಸ್ ಏರಿಕೆ, ಇಳಿಕೆ?Market Close: ಯಾವೆಲ್ಲ ಸ್ಟಾಕ್ಸ್ ಏರಿಕೆ, ಇಳಿಕೆ?

ಆರಂಭಿಕ ವಹಿವಾಟು ಹೇಗಿತ್ತು?

ಇಂದು ಆರ್‌ಬಿಐ ರೆಪೋ ದರ ಏರಿಕೆ ಮಾಡುವ ನಿರೀಕ್ಷೆ ಇದ್ದು, ಈ ನಡುವೆ ಆರಂಭಿಕವಾಗಿ ಷೇರು ಮಾರುಕಟ್ಟೆಯು ಕುಸಿತ ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 145.67 ಅಂಕ ಅಥವಾ ಶೇಕಡ 0.26ರಷ್ಟು ಇಳಿಕೆಯಾಗಿ 56264.29ಕ್ಕೆ ತಲುಪಿತ್ತು. ಇನ್ನು ನಿಫ್ಟಿ 36.10 ಅಂಕ ಅಥವಾ ಶೇಕಡ 0.21ರಷ್ಟು ಇಳಿಕೆಯಾಗಿ 16782ಕ್ಕೆ ಕುಸಿದಿತ್ತು. 1020 ಷೇರುಗಳು ಏರಿಕೆಯಾಗಿದ್ದರೆ, 831 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 831 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಪ್ರಮುಖವಾಗಿ ಟಾಟಾ ಮೋಟರ್ಸ್, ಟೆಕ್ ಮಹೀಂದ್ರಾ, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್ ಭಾರೀ ಇಳಿಕೆಯಾಗಿದ್ದರೆ, ನಿಫ್ಟಿ ಹಿಂಡಾಲ್ಕೊ ಇಂಡಸ್ಟ್ರೀಸ್, ಸನ್ ಫಾರ್ಮಾ, ಶ್ರೀ ಸಿಮೆಂಟ ಸ್ಟಾಕ್ ಏರಿಕೆಯಾಗಿದೆ.

English summary

Sensex and Nifty is Up After RBI Repo Rate Hike Announcement

Sensex Rises Over 400 Points, Nifty Trades Above 16,900 After RBI Repo Rate Hike Announcement.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X