ಸೆನ್ಸೆಕ್ಸ್ 44 ಸಾವಿರ ಪಾಯಿಂಟ್ ಮೇಲೆ ವಹಿವಾಟು ಮುಕ್ತಾಯ
ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ನವೆಂಬರ್ 23, 2020) ಏರಿಕೆ ಕಂಡಿವೆ. ಸೆನ್ಸೆಕ್ಸ್ ಸೂಚ್ಯಂಕವು 44 ಸಾವಿರ ಪಾಯಿಂಟ್ ಗಳ ಮೇಲೆ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ 194.90 ಪಾಯಿಂಟ್ ಗಳ ಏರಿಕೆ ಕಂಡು, 44,077.15 ಪಾಯಿಂಟ್ ಗಳೊಂದಿಗೆ ವ್ಯವಹಾರ ಚುಕ್ತಾಗೊಳಿಸಿತು. ಇನ್ನು ನಿಫ್ಟಿ 67.50 ಪಾಯಿಂಟ್ ಮೇಲೇರಿ, 12,926.50 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಮುಗಿಸಿತು.
ಪೆಟ್ರೋಲ್- ಡೀಸೆಲ್ ದರದಲ್ಲಿ ಸತತ ನಾಲ್ಕನೇ ದಿನ ಏರಿಕೆ
ಎನ್ ಬಿಎಫ್ ಸಿ ಹಾಗೂ ಸಣ್ಣ ಹಣಕಾಸು ಬ್ಯಾಂಕ್ ಗಳ ಷೇರುಗಳಲ್ಲಿ ಭಾರೀ ಏರಿಳಿತ ಕಂಡುಬಂತು. ತಂತ್ರಜ್ಞಾನ ಷೇರುಗಳು, ಲೋಹ ಮತ್ತು ತೈಲ ಹಾಗೂ ಅನಿಲ ಕಂಪೆನಿಯ ಷೇರುಗಳು 'ಗೂಳಿ ಓಟ'ಕ್ಕೆ ಬೆಂಬಲ ನೀಡಿದವು. ಇನ್ನು ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಕಾಂಟ್ರ್ಯಾಕ್ಟ್ ಮುಗಿಯುತ್ತಾ ಬರುತ್ತಿದ್ದು, ಜಾಗತಿಕ ಪ್ರಭಾವ ಮತ್ತು ಕೊರೊನಾ ಪರಿಣಾಮ ಷೇರು ಮಾರುಕಟ್ಟೆ ಮೇಲೆ ಇದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಒಎನ್ ಜಿಸಿ
ಇಂಡಸ್ ಇಂಡ್ ಬ್ಯಾಂಕ್
ಗೇಲ್
ಡಾ. ರೆಡ್ಡೀಸ್ ಲ್ಯಾಬ್ಸ್
ಟೆಕ್ ಮಹೀಂದ್ರಾ
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಎಚ್ ಡಿಎಫ್ ಸಿ
ಐಸಿಐಸಿಐ ಬ್ಯಾಂಕ್
ಆಕ್ಸಿಸ್ ಬ್ಯಾಂಕ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಸ್ ಬಿಐ ಲೈಫ್ ಇನ್ಷೂರೆನ್ಸ್