62,000 ಪಾಯಿಂಟ್ಸ್ ಗಡಿದಾಟಿದ ಸೆನ್ಸೆಕ್ಸ್: ನಿಫ್ಟಿ ಕೂಡ ಸಾರ್ವಕಾಲಿಕ ದಾಖಲೆ
ಭಾರತದ ಷೇರುಪೇಟೆ ಹೊಸ ದಾಖಲೆಯನ್ನೇ ಬರೆದಿದ್ದು ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಹೊಸ ದಾಖಲೆಯ ಹಂತ ತಲುಪಿದೆ. ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್ 62,000 ಪಾಯಿಂಟ್ಸ್ ಗಡಿದಾಟಿದ್ರೆ, ನಿಫ್ಟಿ 18,600 ಪಾಯಿಂಟ್ಸ್ ಮುಟ್ಟಿತು.
ಬೆಳಿಗ್ಗೆ 9.16ಕ್ಕೆ ಸೆನ್ಸೆಕ್ಸ್ 264.79 ಪಾಯಿಂಟ್‌ಗಳು ಅಥವಾ ಶೇಕಡಾ 0.43ರಷ್ಟು ಏರಿಕೆಗೊಂಡು 62030.38 ಕ್ಕೆ ಏರಿತು. ನಿಫ್ಟಿ 76.50 ಪಾಯಿಂಟ್‌ಗಳು ಅಥವಾ ಶೇಕಡಾ 0.41ರಷ್ಟು ಹೆಚ್ಚಾಗಿ 18553.50 ಪಾಯಿಂಟ್ಸ್ ತಲುಪಿದೆ.
ದಿನದ ವಹಿವಾಟು ಆರಂಭದಲ್ಲಿ ಸುಮಾರು 1178 ಷೇರುಗಳು ಏರಿಕೆಗೊಂಡರೆ, 327 ಷೇರುಗಳು ಕುಸಿದಿವೆ ಮತ್ತು 81 ಷೇರುಗಳು ಬದಲಾಗದೆ ಇವೆ.

ಏರಿಕೆಗೊಂಡ ಪ್ರಮುಖ ಷೇರುಗಳು:
ಲಾರ್ಸೆನ್‌ನ ಷೇರುಗಳು 840.00 ರೂ. ತಲುಪಿದ್ದು 52 ರೂಪಾಯಿಗಳ ಲಾಭದೊಂದಿಗೆ ಪ್ರಾರಂಭವಾಯಿತು. ವಿಪ್ರೋ ಷೇರು 13 ರೂ. ಗಳಿಕೆಯೊಂದಿಗೆ ರೂ. 722.50 ರಲ್ಲಿ ಆರಂಭವಾಯಿತು. ಎಚ್‌ಸಿಎಲ್ ಟೆಕ್‌ನ ಷೇರುಗಳು ರೂ .1238.10 ರಲ್ಲಿ 17 ರೂ. ಗಳಿಕೆಯೊಂದಿಗೆ ಪ್ರಾರಂಭವಾಯಿತು. ಟೆಕ್ ಮಹೀಂದ್ರಾ ಷೇರುಗಳು ರೂ .1498.40 ಕ್ಕೆ ಪ್ರಾರಂಭವಾದವು, ರೂ .19 ರಷ್ಟು ಹೆಚ್ಚಾಗಿದೆ. ಭಾರ್ತಿ ಏರ್‌ಟೆಲ್‌ನ ಷೇರುಗಳು ರೂ. 688.00 ಕ್ಕೆ ಆರಂಭವಾಗಿದ್ದು, ರೂ. 7 ರಷ್ಟು ಏರಿಕೆಯಾಗಿದೆ.

ಇಳಿಕೆಗೊಂಡ ಪ್ರಮುಖ ಷೇರುಗಳು:
ಐಟಿಸಿಯ ಷೇರು 256.20 ರೂ.ನಲ್ಲಿ ಆರಂಭವಾಯಿತು, ಸುಮಾರು 6 ರೂ. ಇಳಿಕೆಗೊಂಡಿದೆ. ಐಷರ್ ಮೋಟಾರ್ಸ್ ನ ಷೇರುಗಳು ರೂ .78 ರಷ್ಟು ಇಳಿಕೆಯಾಗಿ ರೂ .2,788.75 ಕ್ಕೆ ಆರಂಭವಾಯಿತು. ಅಲ್ಟ್ರಾ ಟೆಕ್ ಸಿಮೆಂಟ್ ನ ಷೇರು 69 ರೂ ಇಳಿಕೆಯಾಗಿ 7,330.25 ಕ್ಕೆ ಆರಂಭವಾಯಿತು. ಟೈಟಾನ್ ಕಂಪನಿಯ ಷೇರುಗಳು ರೂ .2,565.50 ರಲ್ಲಿ ಪ್ರಾರಂಭವಾಗಿದೆ. ಇದು ಸುಮಾರು 23 ರೂಪಾಯಿಗಳಷ್ಟು ಕಡಿಮೆಯಾಗಿದೆ. ಐಒಸಿಯ ಷೇರು 135.50 ರೂ.ನಲ್ಲಿ ಪ್ರಾರಂಭವಾಯಿತು, ಸುಮಾರು 1 ರೂ. ಕುಸಿದಿದೆ.

ಷೇರಿನಲ್ಲಿ ಹೂಡಿಕೆ ಮಾಡುವುದು ಹೇಗೆ?
ಒಂದು ವೇಳೆ ಷೇರು ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

ಕಚ್ಚಾ ತೈಲ ಬೆಲೆ ಇಳಿಕೆ
ಚೀನಾದ ಜಿಡಿಪಿ ಬೆಳವಣಿಗೆ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ತೋರಿಸಿದ ನಂತರ ಮಂಗಳವಾರದಂದು ತೈಲ ಬೆಲೆಗಳು ಕುಸಿದವು. ಬ್ರೆಂಟ್ ಕಚ್ಚಾ ತೈಲ ಎರಡನೇ ದಿನವೂ ಕೆಳಗಿಳಿಯಿತು. ಕೊರೊಮಾವೈರಸ್ ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಿಕೆಯ ನಡುವೆ ಕಾರ್ಖಾನೆಯ ಉತ್ಪಾದನೆಯು ಸೆಪ್ಟೆಂಬರ್‌ನಲ್ಲಿ ಕಡಿಮೆಯಾಗಿದ್ದು, ಬೇಡಿಕೆಯ ಬಗ್ಗೆ ಹೊಸ ಕಳವಳವನ್ನು ಮೂಡಿಸಿತು.
ಬ್ರೆಂಟ್ ಕಚ್ಚಾ ತೈಲವು 43 ಸೆಂಟ್‌ಗಳಷ್ಟು ಕಡಿಮೆಯಾಗಿದೆ ಅಥವಾ ಶೇಕಡಾ 0.5ರಷ್ಟು ಕಡಿಮೆಯಾಗಿ ಬ್ಯಾರೆಲ್‌ಗೆ $ 83.90 ತಲುಪಿದೆ. ಯು.ಎಸ್. ತೈಲವು 33 ಸೆಂಟ್ಸ್ ಅಥವಾ 0.4% ನಷ್ಟು ಇಳಿಕೆಗೊಂಡು ಬ್ಯಾರೆಲ್‌ಗೆ $ 82.11 ಕ್ಕೆ ತಲುಪಿದೆ. ಕಳೆದ ವಹಿವಾಟಿನಲ್ಲಿ 0.2% ಮತ್ತು ಈ ತಿಂಗಳು ಸುಮಾರು 10% ರಷ್ಟು ಏರಿಕೆಯಾಗಿದೆ.

ದೇಶೀಯ ಹೂಡಿಕೆದಾರರ ಷೇರು ಮಾರಾಟ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ನಿವ್ವಳ 512.44 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಗಳು) ಭಾರತೀಯ ಷೇರು ಮಾರುಕಟ್ಟೆಯಲ್ಲಿ 1,703.87 ಕೋಟಿ ಮೌಲ್ಯದ ಷೇರುಗಳನ್ನು ಅಕ್ಟೋಬರ್ 18 ರಂದು ಮಾರಾಟ ಮಾಡಿದ್ದಾರೆ (ಎನ್ಎಸ್ಇಯಲ್ಲಿ ಲಭ್ಯವಿರುವ ತಾತ್ಕಾಲಿಕ ದತ್ತಾಂಶಗಳ ಪ್ರಕಾರ)