For Quick Alerts
ALLOW NOTIFICATIONS  
For Daily Alerts

ದಿನದ ಗರಿಷ್ಠ ಮಟ್ಟದಿಂದ 700ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ಭಾರೀ ಇಳಿಕೆ ದಾಖಲಿಸಿದವು. ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್ ನಂಥ ಷೇರುಗಳು ಸೂಚ್ಯಂಕದ ಇಳಿಕೆಗೆ ಕಾರಣವಾದವು. ಸೆನ್ಸೆಕ್ಸ್ 416 ಅಂಶಗಳಷ್ಟು ಕುಸಿತ ಕಂಡಿತು. 42,500 ಪಾಯಿಂಟ್ ದಾಟಿದ್ದ ಸೆನ್ಸೆಕ್ಸ್, ಒಟ್ಟು 700ಕ್ಕೂ ಹೆಚ್ಚು ಅಂಶಗಳು ಕುಸಿದವು.

 

ಸಾರ್ವಜನಿಕ ವಲಯದ ಇಂಡಿಯನ್ ಆಯಿಲ್ ಮತ್ತು ಪವರ್ ಫೈನಾನ್ಸ್ ಭಾರೀ ಕುಸಿತಕ್ಕೆ ಒಳಗಾಯಿತು. ಎನ್ ಎಸ್ ಇಯಿಂದ ನಿಫ್ಟಿ ಸಿಪಿಎಸ್ ಸಿ (ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಎಂಟರ್ ಪ್ರೈಸಸ್) ಸೂಚ್ಯಂಕವನ್ನು ಬದಲಿಸುವುದಾಗಿ ಘೋಷಿಸಿದ ಮೇಲೆ ಈ ಬೆಳವಣಿಗೆ ಆಗಿದೆ. ಈ ಷೇರುಗಳನ್ನು ಸೂಚ್ಯಂಕದಿಂದ ಕೈ ಬಿಡಲಾಗಿದೆ.

 

ಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ ಆರು ವರ್ಷದಲ್ಲಿ ಕೋಟಿ ರುಪಾಯಿಈ ಷೇರಿನ ಮೇಲೆ ರು. 5.93 ಲಕ್ಷ ಹೂಡಿದ್ದರೆ ಆರು ವರ್ಷದಲ್ಲಿ ಕೋಟಿ ರುಪಾಯಿ

ಇಂದಿನ ವಹಿವಾಟಿನಲ್ಲಿ ಏರಿಕೆ ಕಂಡ ಸಾರ್ವಜನಿಕ ವಲಯದ ಪ್ರಮುಖ ಷೇರು ಗೇಲ್. ದೇಶೀಯ ಮ್ಯೂಚುವಲ್ ಫಂಡ್ ಗಳಿಂದ ನಿರಂತರ ಖರೀದಿ ಕಂಡಿದ್ದರಿಂದ ಏರಿಕೆ ಆಗಿದೆ. ಆಯಿಲ್ ಇಂಡಿಯಾ ಷೇರು ನಾಲ್ಕು ಪರ್ಸೆಂಟ್ ಕುಸಿದರೆ, ಕೊಟಕ್ ಮಹೀಂದ್ರಾ ಬ್ಯಾಂಕ್ ನಾಲ್ಕೂವರೆ ಪರ್ಸೆಂಟ್ ಗೂ ಹೆಚ್ಚು ಇಳಿಕೆ ಕಂಡಿದೆ.

ದಿನದ ಗರಿಷ್ಠ ಮಟ್ಟದಿಂದ 700ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್

ಉತ್ತಮ ತ್ರೈಮಾಸಿಕ ಫಲಿತಾಂಶ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಫೆಡರಲ್ ಬ್ಯಾಂಕ್ ಎರಡು ಪರ್ಸೆಂಟ್ ಏರಿತು. ಅಂದ ಹಾಗೆ ಫೆಬ್ರವರಿ ಒಂದನೇ ತಾರೀಕಿನಂದು ಕೇಂದ್ರ ಬಜೆಟ್ ಇರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಭಾರೀ ಏರಿಳಿತವನ್ನು ನಿರೀಕ್ಷಿಸಲಾಗಿದೆ.

English summary

Sensex Shed More Than 700 Points From Days High

Indian stock market index Sensex shed more than 700 points from days high on Monday, January 20th.
Story first published: Monday, January 20, 2020, 17:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X