For Quick Alerts
ALLOW NOTIFICATIONS  
For Daily Alerts

Sharekhan Suggestions: ಟಾಟಾ ಗ್ರೂಪ್‌ನ ಈ ಸ್ಟಾಕ್ ಖರೀದಿಸಲು ಶೇರ್‌ಖಾನ್ ಸಲಹೆ

|

ಪ್ರಸ್ತುತ ಷೇರು ಮಾರುಕಟ್ಟೆಯು ಏರಿಳಿತವನ್ನು ಕಾಣುತ್ತಿದೆ. ಪ್ರಮುಖವಾಗಿ ಅದಾನಿ ಗ್ರೂಪ್‌ನ ಸ್ಟಾಕ್‌ಗಳು ಭಾರೀ ಇಳಿಕೆಯಾಗುತ್ತಿದೆ. ಅದಾನಿ ಎಂಟರ್‌ಪ್ರೈಸಸ್ ಭಾರೀ ನಷ್ಟವನ್ನು ಕಂಡಿದೆ. ಈ ನಡುವೆ ಶೇರ್‌ಖಾನ್ ಬ್ರೋಕರೇಜ್ ಸಂಸ್ಥೆಯು ಕೆಲವು ಸ್ಟಾಕ್‌ಗಳನ್ನು ಖರೀದಿ ಮಾಡಲು ಸಲಹೆ ನೀಡಿದ್ದಾರೆ.

ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 909.64 ಅಂಕ ಅಥವಾ ಶೇಕಡ 1.52ರಷ್ಟು ಏರಿಕೆಯಾಗಿ, 60,841.88ಕ್ಕೆ ತಲುಪಿದೆ. ನಿಫ್ಟಿ 243.60 ಅಂಕ ಅಥವಾ ಶೇಕಡ 1.38ರಷ್ಟು ಹೆಚ್ಚಾಗಿ 17,854ಕ್ಕೆ ತಲುಪಲಿದೆ. 1304 ಷೇರುಗಳು ಏರಿಕೆಯಾದರೆ, 2128 ಷೇರುಗಳು ಇಳಿಕೆಯಾಗಿದೆ, 127 ಷೇರುಗಳು ಸ್ಥಿರವಾಗಿದೆ. ಶೇರ್‌ಖಾನ್ ಸಲಹೆಯ ಬಗ್ಗೆ ನಾವಿಲ್ಲಿ ತಿಳಿಯೋಣ.

Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!Multibagger stock: 1 ವರ್ಷದಲ್ಲೇ ಶೇ.1000 ರಿಟರ್ನ್ ಪಡೆಯಿರಿ!

ಹೌದು, ಬ್ರೋಕರೇಜ್ ಸಂಸ್ಥೆ ಶೇರ್‌ಖಾನ್ ಟಾಟಾ ಗ್ರೂಪ್‌ನ ಈ ಸ್ಟಾಕ್‌ ಅನ್ನು ಖರೀದಿ ಮಾಡಲು ಸಲಹೆ ನೀಡಿದ್ದಾರೆ. ಟಾಟಾ ಗ್ರೂಪ್‌ನ ಇಂಡಿಯನ್ ಹೊಟೇಲ್ಸ್ ಸ್ಟಾಕ್‌ ಅನ್ನು ಖರೀದಿ ಮಾಡಲು ಶೇರ್‌ಖಾನ್ ಸಲಹೆ ನೀಡಿದೆ. ಈ ಸ್ಟಾಕ್‌ನಿಂದಾಗಿ ನಿಮಗೆ ಭಾರೀ ಲಾಭ ಲಭ್ಯವಾಗಲಿದೆ ಎಂದು ಶೇರ್‌ಖಾನ್ ಹೇಳಿದೆ. ಹಾಗಾದರೆ ಈ ಸ್ಟಾಕ್‌ನಿಂದ ಲಭ್ಯವಾಗಬಹುದಾದ ಲಾಭ, ಸ್ಟಾಕ್ ಎಷ್ಟು ಲಾಭ ಪಡೆದಿದೆ, ಸ್ಟಾಕ್‌ನ ಬೆಲೆ ಎಷ್ಟಿದೆ ಎಂದು ತಿಳಿಯೋಣ ಮುಂದೆ ಓದಿ....

 ಉತ್ತಮ ಅಭಿವೃದ್ಧಿ ಕಂಡ ಸ್ಟಾಕ್

ಉತ್ತಮ ಅಭಿವೃದ್ಧಿ ಕಂಡ ಸ್ಟಾಕ್

ಶೇರ್‌ಖಾನ್ ಪ್ರಕಾರ ಇಂಡಿಯನ್ ಹೊಟೇಲ್ಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಉತ್ತಮ ಆದಾಯವನ್ನು ಗಳಿಸುತ್ತಿದೆ, ಸಂಸ್ಥೆಯ ತ್ರೈಮಾಸಿಕ ಆದಾಯವು ಉತ್ತಮವಾಗಿದೆ. ಹಣಕಾಸು ವರ್ಷ 2020ರಲ್ಲಿ ಸಂಸ್ಥೆಯ ನಿವ್ವಳ ಆದಾಯವು 300 ಕೋಟಿ ರೂಪಾಯಿಯನ್ನು ದಾಟಿದೆ. ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 52ರಷ್ಟು ಏರಿಕೆಯಾಗಿ 1685.8 ಕೋಟಿ ರೂಪಾಯಿಗೆ ತಲುಪಿದೆ. ಹೊಟೇಲ್ ರೂಮ್‌ನ ಆದಾಯವು ಶೇಕಡ 26ರಷ್ಟು ಹೆಚ್ಚಳವಾಗಿ 818 ಕೋಟಿ ರೂಪಾಯಿ ಆಗಿದೆ. ಆಹಾರ ಮತ್ತು ಪಾನೀಯ ಆದಾಯವು ಶೇಕಡ 17ರಷ್ಟು ಹೆಚ್ಚಳವಾಗಿ, 634 ಕೋಟಿ ರೂಪಾಯಿ ಆಗಿದೆ. ನಿರ್ವಹಣಾ ವೆಚ್ಚದಿಂದ ವರ್ಷದಿಂದ ವರ್ಷಕ್ಕೆ ಆದಾಯವು ಶೇಕಡ 87ರಷ್ಟು ಏರಿಕೆಯಾಗಿ, 119 ಕೋಟಿ ರೂಪಾಯಿ ಆಗಿದೆ.

Happy New Year 2023: ಹೊಸ ವರ್ಷದಲ್ಲಿ ಷೇರುಪೇಟೆ ಹೂಡಿಕೆ ಮುನ್ನ ಓದಿHappy New Year 2023: ಹೊಸ ವರ್ಷದಲ್ಲಿ ಷೇರುಪೇಟೆ ಹೂಡಿಕೆ ಮುನ್ನ ಓದಿ

 ಇಬಿಐಡಿಟಿಎ ಮಾರ್ಜಿನ್ ವಿಸ್ತರಣೆ

ಇಬಿಐಡಿಟಿಎ ಮಾರ್ಜಿನ್ ವಿಸ್ತರಣೆ

ಎಂಟರ್‌ಪ್ರೈಸ್ ಮಟ್ಟದಲ್ಲಿನ ಆಕ್ಯುಪೆನ್‌ಸಿಗಳು ಶೇಕಡ 68.0ರಟ್ಟಿದೆ. ಸ್ಟಾಂಡ್‌ಅಲೋನ್ ಆಕ್ಯುಪೆನ್ಸಿ ದರ ಶೇಕಡ 72.1ರಷ್ಟಾಗಿದೆ. ಆದರೆ ಸರಾಸರಿ ರೂಮ್ ಬಾಡಿಗೆಗಳು ಶೇಕಡ 29ರಷ್ಟು ಏರಿಕೆಯಾಗಿ 10,565 ಕೋಟಿ ರೂಪಾಯಿ ಆಗಿದೆ. ಇಬಿಐಡಿಟಿಎ ಮಾರ್ಜಿನ್ ವರ್ಷದಿಂದ ವರ್ಷಕ್ಕೆ 647 ಬಿಪಿಎಸ್‌ ಶೇಕಡ 35.4ರಷ್ಟು ಏರಿಕೆಯಾಗಿದೆ. ಸ್ಟಾಂಡ್‌ಅಲೋನ್ ಇಬಿಐಡಿಟಿಎ ಮಾರ್ಜಿನ್‌ಗಳು 615 ಬಿಪಿಎಸ್‌, ಶೇಕಡ 41ರಷ್ಟು ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ವ್ಯಾಪಾರ ಇಬಿಐಡಿಟಿಎ ಮಾರ್ಜಿನ್ ಶೇಕಡ 22ರಷ್ಟು ವಿಸ್ತರಣೆ ಕಂಡಿದೆ. ಸಂಸ್ಥೆಯ 3ನೇ ತ್ರೈಮಾಸಿಕ ಆದಾಯವು 387 ಕೋಟಿ ರೂಪಾಯಿಗಳಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.

 ಇಂಡಿಯನ್ ಹೊಟೇಲ್ಸ್ ಟಾರ್ಗೆಟ್ ಮೊತ್ತ ಎಷ್ಟಿದೆ?

ಇಂಡಿಯನ್ ಹೊಟೇಲ್ಸ್ ಟಾರ್ಗೆಟ್ ಮೊತ್ತ ಎಷ್ಟಿದೆ?

ಶೇರ್‌ಖಾನ್ ಪ್ರಕಾರ ಸಂಸ್ಥೆಯು ಹಣಕಾಸು ವರ್ಷ 2025-26ರ ವೇಳೆಗೆ ಉತ್ತಮ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಇಬಿಐಡಿಟಿಎ ಮಾರ್ಜಿನ್ಸ್ ಮುಂದಿನ ವರ್ಷಗಳಲ್ಲಿ ಬೆಳವಣಿಗೆ ಕಾಣಲಿದೆ. ಆದರಿಂದಾಗಿ ಈ ಸ್ಟಾಕ್‌ ಅನ್ನು ಖರೀದಿ ಮಾಡುವುದು ಉತ್ತಮ. ಸ್ಟಾಕ್ ಇತ್ತೀಚೆಗೆ ಶೇಕಡ 14ರಷ್ಟು ಏರಿಕೆಯನ್ನು ಕಂಡಿದೆ. 24.7x/17.8x/14.7x ರಲ್ಲಿ ಟ್ರೇಡಿಂಗ್ ನಡೆಸುತ್ತಿದೆ. ಈ ಸ್ಟಾಕ್ ಅನ್ನು ನಾವು 380 ರೂಪಾಯಿಗೆ ಖರೀದಿ ಮಾಡಲು ಸಲಹೆ ನೀಡುತ್ತೇವೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ. ಇಂಡಿಯನ್ ಹೊಟೇಲ್ಸ್ ಸ್ಟಾಕ್ ಕಳೆದ ಬಾರಿ 318 ರೂಪಾಯಿಯಲ್ಲಿ ಟ್ರೇಡಿಂಗ್ ಆಗಿದೆ.

 ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ಈ ಮೇಲಿನ ಲೇಖನವನ್ನು ತಜ್ಞರ ಅಭಿಪ್ರಾಯದ ಮೇಲೆ ಬರೆಯಲಾಗಿದೆ. ಯಾವುದೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅರಿತುಕೊಂಡು ಹೂಡಿಕೆ ಮಾಡುವುದು ಉತ್ತಮ. ಈ ಲೇಖನದ ಆಧಾರದಲ್ಲಿ ಹೂಡಿಕೆ ಮಾಡಿದ ಬಳಿಕ ಉಂಟಾದ ಯಾವುದೇ ನಷ್ಟಕ್ಕೆ ಗ್ರೇನಿಯಂ ಸಂಸ್ಥೆ ಅಥವಾ ಲೇಖಕರು ಜವಾಬ್ದಾರರಲ್ಲ.

English summary

Sharekhan Suggests A Buy On This Tata Group Stock, Details Here

Brokerage firm Sharekhan has suggested a buy on Tata Group stock Indian Hotels, as the brokerage sees good upside potential.
Story first published: Saturday, February 4, 2023, 11:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X