For Quick Alerts
ALLOW NOTIFICATIONS  
For Daily Alerts

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶುರು; ಇನ್ನೊಂದು ವರ್ಷದಲ್ಲಿ ಮುಕ್ತಾಯ

|

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ಮಾಡಿದರು. ಬೆಂಗಳೂರಿನಿಂದ ಆ‌ಚೆಗೂ ಹೂಡಿಕೆಯನ್ನು ಸೆಳೆಯುವ ಕಾರಣಕ್ಕೆ ಹಾಗೂ ಪ್ರಾದೇಶಿಕ ಅಸಮಾನತೆ ನಿವಾರಿಸುವ ಉದ್ದೇಶದಿಂದ, ಬೆಂಗಳೂರಿನಿಂದ 300ಕ್ಕೂ ಹೆಚ್ಚು ಕಿ.ಮೀ. ದೂರ ಇರುವ ಶಿವಮೊಗ್ಗದಲ್ಲಿ 220 ಕೋಟಿ ವೆಚ್ಚದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಯಡಿಯೂರಪ್ಪ ಮಾತನಾಡಿ, ಎರಡು ಹಂತದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ನಡೆಯಲಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದಿದ್ದಾರೆ. ಈ ವಿಮಾನ ನಿಲ್ದಾಣದಿಂದ ಅಕ್ಕಪಕ್ಕದ ಜಿಲ್ಲೆಯವರಿಗೂ ಅನುಕೂಲ ಆಗಲಿದೆ. ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗೆ ಉತ್ತೇಜನ ದೊರೆಯಲಿದೆ ಎಂದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಶುರು; ವರ್ಷದಲ್ಲಿ ಮುಕ್ತಾಯ

ಪ್ರಸ್ತಾವಿತ ವಿಮಾನ ನಿಲ್ದಾಣ ಸ್ಥಳವು ಶಿವಮೊಗ್ಗ ನಗರದಿಂದ 12 ಕಿ.ಮೀ. ದೂರದ ಸೊಗ್ನೆ ಹಳ್ಳಿಯಲ್ಲಿದೆ. 662.38 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ತಲೆ ಎತ್ತಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕಲಬುರ್ಗಿ ಹಾಗೂ ಬೀದರ್ ನಲ್ಲಿ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭವಾದ ಏಳು ತಿಂಗಳ ನಂತರ ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಶುರುವಾಗಿದೆ.

English summary

Shivamogga Airport Construction Foundation Laid By BS Yediyurappa

Karnataka CM BS Yediyurappa laid down foundation for airport construction in Shimoga on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X