For Quick Alerts
ALLOW NOTIFICATIONS  
For Daily Alerts

ಒಂದೇ ಬಾರಿಗೆ ಲಕ್ಷಾಂತರ ಜನರಿಂದ ಬಳಕೆ: ತಾಂತ್ರಿಕ ತೊಂದರೆ ಎದುರಿಸಿದ 'ಸಿಗ್ನಲ್'

|

ವಾಟ್ಸಾಪ್ ತನ್ನ ಹೊಸ ಗೌಪ್ಯತೆ ಮತ್ತು ಸೇವಾ ನಿಯಮಗಳನ್ನು ನವೀಕರಿಸಿದ ಬಳಿಕ ಅದ್ರಿಂದ ಲಾಭ ಪಡೆದ ಮೆಸೇಜಿಂಗ್ ಅಪ್ಲಿಕೇಶನ್ ಸಿಗ್ನಲ್ ಶುಕ್ರವಾರ ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದೆ. ಇದಕ್ಕೆ ಕಾರಣ ಲಕ್ಷಾಂತರ ವಾಟ್ಸಾಪ್ ಬಳಕೆದಾರರು ತಕ್ಷಣವೇ ಸಿಗ್ನಲ್ ಕಡೆಗೆ ಆಸಕ್ತಿ ತೋರಿರುವುದು.

ಹೌದು, ಸಿಗ್ನಲ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರು ಜಾಗತಿಕವಾಗಿ ಭಾರೀ ತೊಂದರೆ ಅನುಭವಿಸಿದರು. ಮೊಬೈಲ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲಿ ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ.

ಇದ್ದಕ್ಕಿದ್ದಂತೆ ಭಾರೀ ಪ್ರಮಾಣದಲ್ಲಿ ಸಿಗ್ನಲ್ ಬಳಕೆದಾರರ ಹೆಚ್ಚಳವು ಆ್ಯಪ್‌ ನಿಲುಗಡೆಗೆ ಕಾರಣವಾಯಿತು. ಹೀಗಾಗಿ 'ಸಾಧ್ಯವಾದಷ್ಟು ಬೇಗ ಸೇವೆಗಳನ್ನು ಪುನಃಸ್ಥಾಪಿಸಲು ಶ್ರಮಿಸುತ್ತಿದೆ' ಎಂದು ಕಂಪನಿ ಹೇಳಿಕೊಂಡಿದೆ.

ಲಕ್ಷಾಂತರ ಜನರಿಂದ ಬಳಕೆ: ತಾಂತ್ರಿಕ ತೊಂದರೆ ಎದುರಿಸಿದ 'ಸಿಗ್ನಲ್'

ವಾಟ್ಸಾಪ್‌ ಬದಲಿಗೆ ಸಿಗ್ನಲ್‌ ಆ್ಯಪ್ ಬಳಸಿ ಎಂಬ ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಸ್ಪೇಸ್‌ ಎಕ್ಸ್‌, ಟೆಸ್ಲಾ ಸಿಇಒ ಎಲೋನ್‌ ಮಸ್ಕ್‌ ಟ್ವೀಟ್‌ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇದರ ಜೊತೆಗೆ ವಾಟ್ಸಾಪ್ ಕೂಡ ತನ್ನ ಗೌಪ್ಯತೆ ನೀತಿಗಳನ್ನು ನವೀಕರಿಸಿದ ಮೇಲಂತೂ, ಜನರು ಸಿಗ್ನಲ್ ಆ್ಯಪ್‌ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ.

ಸದ್ಯ ವಾಟ್ಸಾಪ್‌ ನ ಸೇವಾ ನಿಯಮವನ್ನು ವಿರೋಧಿಸುತ್ತಿರುವ ಹೆಚ್ಚಿನ ಮಂದಿ ಹಾಗೂ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಬೇಕೆಂದಿರುವ ಟೆಲಿಗ್ರಾಮ್‌ ಆ್ಯಪ್‌ಗೂ ಗುಡ್‌ಬೈ ಹೇಳಲು ಜನರು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ಸಿಗ್ನಲ್ ಆ್ಯಪ್‌ಗೆ ಬೇಡಿಕೆ ಹೆಚ್ಚಿದೆ.

English summary

Signal App Faces Global Outage On Friday After Adding Millions Of Users

Cross-platform messaging app Signal that garnered millions of new users within days of WhatsApp's new policy faced a global outage on Friday.
Story first published: Saturday, January 16, 2021, 17:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X