For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್ ಆಯ್ತು ಇದೀಗ ಮತ್ತೊಂದು ಕಂಪನಿ ಜಿಯೋದಲ್ಲಿ ಹಣ ಹೂಡಿಕೆ

|

ಕೊರೊನಾ ಲಾಕ್‌ಡೌನ್‌ ನಡುವೆ ದೇಶದ ಎಲ್ಲಾ ಕಂಪನಿಗಳು, ಉದ್ಯಮಗಳು ಪರದಾಡುತಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ ಒಳ್ಳೆ ಲಾಭಗಳನ್ನು ಪಡೆಯುತ್ತಲೇ ಸಾಗಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಂದರ್ಭದಲ್ಲೂ ಭರ್ಜರಿ ವ್ಯಾಪಾರ ಮಾಡ್ತಿರೋ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಲೆಡ್ ಮಾಲೀಕ ಮುಕೇಶ್ ಅಂಬಾನಿ ಒಂದರ ಹಿಂದೆ ಮತ್ತೊಂದು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಫೇಸ್‌ಬುಕ್ ಬಳಿಕ ಅಮೆರಿಕಾದ ಮತ್ತೊಂದು ಕಂಪನಿ ಹಣ ಹೂಡಿಕೆ

ಫೇಸ್‌ಬುಕ್ ಬಳಿಕ ಅಮೆರಿಕಾದ ಮತ್ತೊಂದು ಕಂಪನಿ ಹಣ ಹೂಡಿಕೆ

ಆರ್ಐಎಲ್‌ ಸಮೂಹದ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಜಿಯೋದಲ್ಲಿ ಭಾರೀ ಪ್ರಮಾಣದಲ್ಲಿ ವಿದೇಶಿ ಹೂಡಿಕೆಯಾಗುತ್ತಿದೆ. ಫೇಸ್‌ಬುಕ್ ಬಳಿಕ ಇದೀಗ ಅಮೆರಿಕ ಮೂಲದ ಸಿಲ್ವರ್ ಲೇಕ್ ಕಂಪನಿ ಜಿಯೋದಲ್ಲಿ ಹಣ ಹೂಡಿಕೆ ಮಾಡಲು ಮುಂದಾಗಿದೆ.

ಲಾಕ್‌ಡೌನ್ ಸಮಯದಲ್ಲೂ ಜಬರ್ದಸ್ತ್ ವ್ಯಾಪಾರ ಮಾಡುತ್ತಿರುವ ಮುಕೇಶ್ ಅಂಬಾನಿ ತನ್ನ ವ್ಯಾಪಾರ ಒಪ್ಪಂದಗಳ ಮೂಲಕ ಇಡೀ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

 

ಸಿಲ್ವರ್ ಲೇಕ್ ಕಂಪನಿಯಿಂದ  5,656 ಕೋಟಿ ರುಪಾಯಿ ಹೂಡಿಕೆ

ಸಿಲ್ವರ್ ಲೇಕ್ ಕಂಪನಿಯಿಂದ 5,656 ಕೋಟಿ ರುಪಾಯಿ ಹೂಡಿಕೆ

ಫೇಸ್‌ಬುಕ್‌ ಸಾವಿರಾರು ಕೋಟಿ ರುಪಾಯಿ ಹೂಡಿಕೆ ಬಳಿಕ ಅಮೆರಿಕ ಮೂಲದ ಸಿಲ್ವರ್ ಲೇಕ್ ಕಂಪನಿ ಜಿಯೋದಲ್ಲಿ ಒಟ್ಟು 5,656 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದೆ. ಅಲ್ಲದೇ ಇದರ ಷೇರು ಬೆಲೆ ಬರೋಬ್ಬರಿ 4.90 ಲಕ್ಷ ಕೋಟಿ ರುಪಾಯಿ ಆಗಲಿದೆ.

ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ

ಮುಕೇಶ್ ಅಂಬಾನಿಗೆ ಮತ್ತಷ್ಟು ಖುಷಿ

ಫೇಸ್‌ಬುಕ್ ಬಳಿಕ ಇದೀಗ ಮತ್ತೊಂದು ಅಮೆರಿಕಾ ಕಂಪನಿ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದಕ್ಕೆ ಮುಕೇಶ್ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಖುದ್ದು ಮಾಹಿತಿ ನೀಡಿರುವ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ, ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಗೆ ನಮ್ಮ ಸಹಭಾಗಿಯಾಗಿ ಸಿಲ್ವರ್ ಲೇಕ್ ಕಂಪನಿ ಕೈಜೋಡಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

 

 

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ

ಹಣಕಾಸು ಮತ್ತು ತಂತ್ರಜ್ಞಾನದ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲ್ವರ್ ಲೇಕ್ ಕಂಪನಿ, ತನ್ನ ತಾಂತ್ರಿಕ ಜ್ಞಾನವನ್ನು ರಿಲಯನ್ಸ್ ಜಿಯೋಗೆ ನೀಡಲಿದೆ. ಇದರಿಂದ ಭಾರತದ ಡಿಜಿಟಲ್ ಲೋಕ ಸಂಪೂರ್ಣವಾಗಿ ರೂಪಾಂತಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಸಿಲ್ವರ್ ಲೇಕ್ ಸಿಇಒ ಎಗೊನ್ ದುರ್ಬನ್, ರಿಲಯನ್ಸ್ ಜಿಯೋ ಜಾಗತಿಕ ಮಟ್ಟದ ಡಿಜಿಟಲ್ ಸಂಸ್ಥೆಯಾಗಿದ್ದು, ಈ ಕಂಪನಿಯಲ್ಲಿ ಹೂಡಿಕೆ ಮಾಡುವುದು ಗೌರವದ ಸಂಗತಿ ಎಂದು ಹೇಳಿದ್ದಾರೆ. ಕಡಿಮೆ ವೆಚ್ಚದ ಡಿಜಿಟಲ್ ಸೇವೆಗಳನ್ನು ಜನಸಾಮಾನ್ಯರಿಗೆ ದೊರಕಿಸಿ ಕೊಡುವಲ್ಲಿ ಜಿಯೋ ಮಹತ್ತರವಾದ ಪಾತ್ರ ನಿರ್ವಹಿಸುತ್ತಿದ್ದು, ಇದೀಗ ಜಿಯೋದ ಮಾರುಕಟ್ಟೆ ವಿಸ್ತಾರಕ್ಕೆ ಕೊಡುಗೆ ನೀಡುವುದಾಗಿ ಎಗೊನ್ ದುರ್ಬನ್ ಸ್ಪಷ್ಟಪಡಿಸಿದ್ದಾರೆ.

 

English summary

Silver Lake Company Invest 5665 Crore In Reliance Jio

US private equity firm Silver Lake will invest Rs 5,655.75 crore in Jio Platforms
Story first published: Monday, May 4, 2020, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X