For Quick Alerts
ALLOW NOTIFICATIONS  
For Daily Alerts

ಭಾರತದಿಂದ ಗ್ರೀನ್ ಎನರ್ಜಿ ಪಡೆಯಲಿರುವ ಮೊದಲ ದೇಶ ಸಿಂಗಾಪುರ

|

ನವದೆಹಲಿ, ಅ. 26: ಪಳೆಯುಳಿಕೆ ಇಂಧನದಿಂದ ಹೊರಬರುವ ಹಾದಿಯಲ್ಲಿರುವ ಭಾರತ ಇದೀಗ ಹಸಿರು ಇಂಧನಕ್ಕೆ ಹೆಚ್ಚು ಒತ್ತುಕೊಡುತ್ತಿದೆ. ಹಸಿರು ಇಂಧನವನ್ನು ರಫ್ತು ಮಾಡುವ ಮಟ್ಟಕ್ಕೆ ಭಾರತ ಈ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸುತ್ತಿದೆ. 2025ರಿಂದ ಭಾರತ ಮೊದಲ ಬಾರಿಗೆ ಹಸಿರು ಇಂಧನವನ್ನು ಮೊದಲ ಬಾರಿಗೆ ರಫ್ತು ಆರಂಭಿಸುತ್ತಿದೆ. ಭಾರತ ಮತ್ತು ಸಿಂಗಾಪುರದ ಕಂಪನಿಗಳ ಮಧ್ಯೆ ಈ ನಿಟ್ಟಿನಲ್ಲಿ ಒಪ್ಪಂದ ಆಗಿದೆ.

ಭಾರತದ ಗ್ರೀನ್‌ಕೋ ಗ್ರೂಪ್ ಮತ್ತು ಸಿಂಗಾಪುರದ ಕೆಪೆಲ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆ ಮಧ್ಯೆ ಎಂಒಯು ಆಗಿರುವುದು ತಿಳಿದುಬಂದಿದೆ. ಈ ಒಪ್ಪಂದದ ಪ್ರಕಾರ, ಸಿಂಗಾಪುರದಲ್ಲಿರುವ ಕೆಪೆಲ್‌ನ 600 ಮೆಗಾವ್ಯಾಟ್ ವಿದ್ಯುತ್ ಘಟಕಕ್ಕೆ ಗ್ರೀನ್‌ಕೋ ಕಂಪನಿ ವರ್ಷಕ್ಕೆ 2.5 ಲಕ್ಷ ಟನ್ ಅಮೋನಿಯಾ ಇಂಧನದ ಸರಬರಾಜು ಮಾಡಲಿದೆ.

ಡಿವಿಡೆಂಡ್‌ನಿಂದಲೇ ಈ ವರ್ಷ 125 ಕೋಟಿ ಹಣ ಗಳಿಸಿರುವ ಅಕ್ಷತಾ ಮೂರ್ತಿಯ ಒಟ್ಟು ಆಸ್ತಿ ಎಷ್ಟು?ಡಿವಿಡೆಂಡ್‌ನಿಂದಲೇ ಈ ವರ್ಷ 125 ಕೋಟಿ ಹಣ ಗಳಿಸಿರುವ ಅಕ್ಷತಾ ಮೂರ್ತಿಯ ಒಟ್ಟು ಆಸ್ತಿ ಎಷ್ಟು?

ಏನಿದು ಗ್ರೀನ್ ಎನರ್ಜಿ?

ಹಸಿರು ಇಂಧನ ಎಂದರೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಪಡೆಯಲಾಗುವ ಶಕ್ತಿ. ಕಲ್ಲಿದ್ದಲು, ಪೆಟ್ರೋಲಿಯಂಗಳು ಭೂಮಿಯ ಸೀಮಿತ ಸಂಪನ್ಮೂಲಗಳಾಗದ್ದು ಅವುಗಳಿಂದ ತಯಾರಾಗುವ ಇಂಧವನ್ನು ಫಾಸಿಲ್ ಫುಯಲ್ ಅಥವಾ ಪಳೆಯುಳಿಕೆ ಇಂಧನ ಎನ್ನುತ್ತಾರೆ.

ಭಾರತದಿಂದ ಗ್ರೀನ್ ಎನರ್ಜಿ ಪಡೆಯಲಿರುವ ಮೊದಲ ದೇಶ ಸಿಂಗಾಪುರ

ಸೌರಶಕ್ತಿ, ಜಲವಿದ್ಯುತ್, ಹೈಡ್ರೋಜನ್, ನ್ಯೂಕ್ಲಿಯಾರ್ ಇತ್ಯಾದಿ ಮೂಲಗಳಿಂದ ತಯಾರಾರಾಗುವ ಇಂಧನವನ್ನು ಗ್ರೀನ್ ಎನರ್ಜಿ ಎಂದು ಪರಿಗಣಿಸಲಾಗುತ್ತದೆ. ಗ್ರೀನ್ ಅಮೋನಿಯಾ ಕೂಡ ಇಂಥ ಒಂದು ಪ್ರಮುಖ ಹಸಿರು ಇಂಧನ ಎನಿಸಿದೆ. ಇದು ಬಹಳ ಕಡಿಮೆ ಬೆಲೆಗೆ ಸಿಗುವ ಉತ್ಕೃಷ್ಟ ಹಸಿರು ಇಂಧನವಾಗಿದ್ದು, ಮುಂದಿನ ದಿನಗಳಲ್ಲಿ ವಿಶ್ವಾದ್ಯಂತ ಭಾರೀ ಬೇಡಿಕೆ ಪಡೆಯುವ ಸಾಧ್ಯತೆ ಇದೆ.

ಭಾರತದ ಗ್ರೀನ್‌ಕೋ ಕಂಪನಿ ಗ್ರೀನ್ ಅಮೋನಿಯಾ ತಯಾರಿಸುತ್ತಿದೆ. ಸಿಂಗಾಪುರದ ಕೆಪೆಲ್ ಕಂಪನಿ ಜೊತೆ ಮಾತ್ರವಲ್ಲ ಸೌತ್ ಕೊರಿಯಾದ ಉಕ್ಕು ತಯಾರಕ ಪೋಕ್ಸೋ ಸಂಸ್ಥೆಗೂ ಗ್ರೀನ್ ಅಮೋನಿಯಾ ಸರಬರಾಜಿಗೆ ಕಳೆದ ತಿಂಗಳು ಒಪ್ಪಂದ ಮಾಡಿಕೊಂಡಿದೆ.

2025ರಿಂದ ಸಿಂಗಾಪುರದ ಕೆಪೆಲ್ ವಿದ್ಯುತ್ ಘಟಕಕ್ಕೆ ಗ್ರೀನ್ ಅಮೋನಿಯಾ ಸರಬರಾಜು ಆರಂಭ ಆಗಲಿದೆ. ಅದಾದ ಬಳಿಕ ಅದೇ ವರ್ಷ ಕೊರಿಯನ್ ಸಂಸ್ಥೆಗೆ ಗ್ರೀನ್ ಅಮೋನಿಯಾ ಮತ್ತು ಯೂರಿಯಾವನ್ನು ರಫ್ತು ಮಾಡಲಿದೆ ಗ್ರೀನ್‌ಕೋ.

ಭಾರತದಿಂದ ಗ್ರೀನ್ ಎನರ್ಜಿ ಪಡೆಯಲಿರುವ ಮೊದಲ ದೇಶ ಸಿಂಗಾಪುರ

ಗ್ರೀನ್‌ಕೋ ಕಂಪನಿ ಬಗ್ಗೆ

ಗ್ರೀನ್‌ಕೋ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತೊಡಗಿರುವ ಭಾರತದ ಅತಿದೊಡ್ಡ ಕಂಪನಿ ಎನಿಸಿದೆ. ಭಾರತದಾದ್ಯಂತ ಹಲವು ಸೌರ ವಿದ್ಯುತ್, ವಾಯು ವಿದ್ಉತ್, ಜಲವಿದ್ಯುತ್ ತಯಾರಕಾ ಘಟಕಗಳನ್ನು ಹೊಂದಿದೆ. ಗ್ರೀನ್ ಅಮೋನಿಯಾದ ತಯಾರಿಕೆಯಲ್ಲೂ ಕಂಪನಿ ತೊಡಗಿಸಿಕೊಂಡಿದೆ.

ಗ್ರೀನ್‌ಕೋ ಕಂಪನಿ ಪ್ರತೀ ವರ್ಷ ಒಟ್ಟು 30 ಲಕ್ಷ ಟನ್‌ಗಳಷ್ಟು ಗ್ರೀನ್ ಅಮೋನಿಯಾದ ಉತ್ಪಾದನೆಗೆ ಯೋಜಿಸಿದೆ. ಭಾರತದೊಳಗಿನ ಬೇಡಿಕೆಯನ್ನೂ ಪೂರೈಸಲು ಇದು ನೆರವಾಗುತ್ತದೆ. ಭಾರತ ಪ್ರತೀ ವರ್ಷ 60 ಲಕ್ಷ ಟನ್ ಅಮೋನಿಯಾ ಮತ್ತು ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತದೆ. ಈಗ ಗ್ರೀನ್‌ಕೋ ಕಂಪನಿಯೇ ಗ್ರೀನ್ ಅಮೋನಿಯಾ ಉತ್ಪಾದಿಸುವುದರಿಂದ ಭಾರತಕ್ಕೆ ಆಮದಿನ ಮೇಲೆ ಹಣ ಹಾಕುವುದು ಕಡಿಮೆ ಆಗುತ್ತದೆ.

ಗ್ರೀನ್ ಅಮೋನಿಯಾ ವಿಶೇಷತೆ ಏನು?

ಗ್ರೀನ್ ಹೈಡ್ರೋಜನ್‌ನಿಂದ ಅಮೋನಿಯಾವನ್ನು ತಯಾರಿಸಲಾಗುತ್ತದೆ. ಹೀಗಾಗಿ, ಅದಕ್ಕೆ ಗ್ರೀನ್ ಅಮೋನಿಯಾ ಎಂದು ಹೆಸರು. ಹಸಿರು ಅಮೋನಿಯಾದಲ್ಲಿ ಕಾರ್ಬನ್ ಅಂಶ ಬಹಳ ಕಡಿಮೆ. ರಸಗೊಬ್ಬರವಾಗಿ ಅದನ್ನು ಬಳಸಲಾಗುತ್ತದೆ. ವಿದ್ಯುತ್ ಘಟಕದಲ್ಲಿ ಇದೇ ಅಮೋನಿಯಾವನ್ನು ವಿದ್ಯುತ್ ಆಗಿ ಪರಿವರ್ತಿಸಬಹುದು. ಫುಯೆಲ್ ಸೆಲ್ ಮೂಲಕವೂ ಗ್ರೀನ್ ಅಮೋನಿಯಾವನ್ನು ವಿದ್ಯುತ್ ಆಗಿ ಪರಿವರ್ತಿಸಬಹುದು.

ಕೃಷಿ ಕ್ಷೇತ್ರಕ್ಕೆ ಬಹಳ ಸಹಾಯಕವಾಗಬಲ್ಲ ರಸಗೊಬ್ಬರದ ತಯಾರಿಕೆ ಮತ್ತು ಕಾರ್ಬನ್‌ಮುಕ್ತ ವಿದ್ಯುತ್ ಉತ್ಪಾದನೆಗೆ ಬೇಕಾಗುವ ಅಮೋನಿಯಾಗೆ ದಿನೇ ದಿನೇ ಬೇಡಿಕೆ ಹೆಚ್ಚಾಗುತ್ತಿದೆ. ಇಡೀ ವಿಶ್ವಕ್ಕೆ ಭಾರತದ ಕಂಪನಿಗಳು ಔಷಧ ಸರಬರಾಜು ಮಾಡುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಭಾರತೀಯ ಕಂಪನಿಗಳು ಗ್ರೀನ್ ಅಮೋನಿಯಾದಂಥ ಹಸಿರು ಇಂದನಗಳನ್ನು ತಯಾರಿಸಿ ಈ ಭೂಮಿಯ ರಕ್ಷಣೆಗೆ ಸಹಾಯಕವಾಗಬಹುದು.

ಜ್ಯಾಕ್ಸನ್ ಗ್ರೀನ್

ಗ್ರೀನ್‌ಕೋ ಮಾತ್ರವಲ್ಲ ಜ್ಯಾಕ್‌ಸನ್ ಗ್ರೂಪ್‌ನ ಜ್ಯಾಕ್‌ಸನ್ ಗ್ರೀನ್ ಕಂಪನಿಯು ರಾಜಸ್ಥಾನದಲ್ಲಿ ಗ್ರೀನ್ ಹೈಡ್ರೋಜನ್ ಮತ್ತು ಗ್ರೀನ್ ಅಮೋನಿಯಾ ಯೋಜನೆಗಳಲ್ಲಿ 22,400 ಕೋಟಿ ರೂ ಹೂಡಿಕೆ ಮಾಡುವುದಾಗಿ ರಾಜಸ್ಥಾನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ರಾಜಸ್ಥಾನದ ಕೋಟಾದಲ್ಲಿ ವರ್ಷಕ್ಕೆ 3.65 ಲಕ್ಷ ಟನ್ ಗ್ರೀನ್ ಎನರ್ಜಿ ಉತ್ಪಾದಿಸುವ ಸಾಮರ್ಥ್ಯದ ಘಟಕವನ್ನು ಸ್ಥಾಪಿಸುತ್ತಿದೆ.

English summary

Singapore The First Country To Receive Green Ammonia From India; GreenKo-Keppel Sign MoU

India will for the first-time export green energy from 2025 to a Singapore power plant under an MoU signed by Indian company GreenKo.
Story first published: Wednesday, October 26, 2022, 12:22 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X