For Quick Alerts
ALLOW NOTIFICATIONS  
For Daily Alerts

ಟಾಪ್ 10 ಕಂಪನಿಗಳ ಮೌಲ್ಯ: 6 ಕಂಪನಿ ಕೆಳಕ್ಕೆ, 4 ಕಂಪನಿ ಮೇಲಕ್ಕೆ

|

ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಕಳೆದ ವಾರ (ಜುಲೈ 17 ತನಕ) ಆರು ಕಂಪನಿಗಳ ಮೌಲ್ಯ ಕುಸಿತವಾಗಿದೆ, ನಾಲ್ಕು ಕಂಪನಿ ಷೇರುಗಳು ಚೇತರಿಕೆಯಾಗಿದೆ. ಒಟ್ಟಾರೆ ಮಾರುಕಟ್ಟೆ ಚೇತರಿಕೆ ಕಂಡಿದೆ.

ಕಳೆದ ವಾರ ಎಲ್ಲಾ ಟಾಪ್ 10 ಕಂಪನಿಗಳ 8 ಕಂಪನಿಗಳಿಂದ ಒಟ್ಟಾರೆ 1,68,260.37 ಕೋಟಿ ರು ಮೌಲ್ಯ ಹೆಚ್ಚಳವಾಗಿದೆ. ದೇಶದ ಅತಿ ಮೌಲ್ಯಯುತ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಷ್ಟ ಅನುಭವಿಸಿವೆ. ಹಿಂದೂಸ್ತಾನ್ ಯೂನಿಲಿವರ್ ಹೆಚ್ಚು ಲಾಭ ಮಾಡಿದೆ.

ರಷ್ಯಾ- ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆ ಏರಿಳಿತ ಕಾಣುತ್ತಿದ್ದು, ಜಾಗತಿಕವಾಗಿ ಅನೇಕ ದೇಶಗಳಲ್ಲಿನ ಆರ್ಥಿಕ ಪರಿಸ್ಥಿತಿ ಕುರಿತ, ಆಮದು -ರಫ್ತು ನಿರ್ಬಂಧ, ಜಿಎಸ್ಟಿ ಸಭೆ, ಸಮ್ಮೇಳನ ನಂತರ ಮುಂತಾದ ವಿದ್ಯಮಾನ ಎಲ್ಲದರ ಪರಿಣಾಮ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ವ್ಯತ್ಯಾಸ ಕಂಡಿವೆ. ಕಳೆದ ಎರಡು ವಾರಗಳಿಂದ ರಿಲಯನ್ಸ್ ಸಂಸ್ಥೆ ಭಾರಿ ನಷ್ಟ ಮುಂದುವರೆದಿದೆ.

ಕಳೆದ ವಾರ, ಬೆಂಚ್‌ಮಾರ್ಕ್ 30 ಷೇರು ಬಿಎಸ್‌ಇ ಸೆನ್ಸೆಕ್ಸ್ 721.06ಪಾಯಿಂಟ್‌ಗಳು ಅಥವಾ ಶೇಕಡಾ 1.32 ಏರಿಕೆ ಕಂಡಿತ್ತು. ಕಳೆದ ವಾರದಲ್ಲಿ ಹೂಡಿಕೆದಾರರು ಸುರಕ್ಷೆಯ ವಿಧಾನ ಅನುಸರಿಸಿ, ಹೆಚ್ಚಿನ ಹೂಡಿಕೆಗೆ ಮುಂದಾದರು. ಯಾವ ಕಂಪನಿ ಮೌಲ್ಯ ಎಷ್ಟಾಗಿದೆ ಎಂಬ ವಿವರ ಮುಂದೆ ಓದಿ..

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್

ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ 99,270.07 ಕೋಟಿ ರು ಇಳಿಕೆ ಕಂಡು 10,95,355.32 ಕೋಟಿ ರು ಮೌಲ್ಯಕ್ಕಿಳಿದಿದೆ. ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಟಿಸಿಎಸ್ ಹೆಚ್ಚುವರಿ ಲಾಭ ಗಳಿಸಿಲ್ಲ, ಹೀಗಾಗಿ ಮೌಲ್ಯ ಕುಸಿತ ಕಂಡಿದೆ. ದೇಶದ ಎರಡನೇ ಅತಿ ದೊಡ್ಡ ಸಂಸ್ಥೆ ಇನ್ಫೋಸಿಸ್ ಸಂಸ್ಥೆ 35,133.64 ಕೋಟಿ ರು ಇಳಿಕೆ ಕಂಡು 6,01,900.14 ಕೋಟಿ ರು ಮೌಲ್ಯ ತಲುಪಿದೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ

ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ

ಎಚ್ ಡಿ ಎಫ್ ಸಿ ಬ್ಯಾಂಕ್ ಮೌಲ್ಯ 18,172.43 ಕೋಟಿ ರು ಕುಗ್ಗಿ 7,57,659.72 ಕೋಟಿ ರು ಆಗಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 8,433.76 ಕೋಟಿ ರು ವ್ಯತ್ಯಾಸ ಕಂಡು 4,27,488.90 ಕೋಟಿ ರು ಗೇರಿದೆ.

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಖಾಸಗಿ ವಲಯದ ಪ್ರಮುಖ ಹಣಕಾಸು ಸಂಸ್ಥೆ ಎಚ್ ಡಿ ಎಫ್ ಸಿ 4,091.62 ಕೋಟಿ ರು ಇಳಿಕೆ ಕಂಡು 4,02,121.99 ಕೋಟಿ ರು ತಲುಪಿದೆ. ಐಸಿಐಸಿಐ ಬ್ಯಾಂಕ್ ಮೌಲ್ಯ 3,158.85 ಕೋಟಿ ರು ಕುಗ್ಗಿ 5,22,498.11 ಕೋಟಿ ರು ಆಗಿದೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ

ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆ ಮೌಲ್ಯ 17,128.52 ಕೋಟಿ ರು ಹೆಚ್ಚಳ ಕಂಡು 6,03,551.26 ಕೋಟಿ ರು ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಮೌಲ್ಯ 6,801.72 ಕೋಟಿ ರು ಏರಿಕೆ ಕಂಡು 16,24,681.08 ಕೋಟಿ ರು ತಲುಪಿದೆ.

ಐಟಿಸಿ ಮಾರುಕಟ್ಟೆ ಮೌಲ್ಯ 1,318.81 ಕೋಟಿ ರು ಹೆಚ್ಚಳ ಕಂಡು 3,62,327.81 ಕೋಟಿ ರು ಗೇರಿದೆ. ಇದೇ ವೇಳೆ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ದ ಮೌಲ್ಯ 316.25 ಕೋಟಿ ರು ಏರಿಕೆಯಾಗಿ 4,48,157.71 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು

ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಮ್ಮೆ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿಕೊಂಡಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್,ಐಸಿಐಸಿಐ ಬ್ಯಾಂಕ್, ಭಾರತೀಯ ಜೀವವಿಮಾ ನಿಗಮ ನಿಯಮ,ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಟಿಸಿ.

English summary

Six of top-10 firms lose Rs 1.68 trillion in m-cap; TCS biggest laggard

Six of the 10 most valued firms suffered a combined erosion of Rs 1,68,260.37 crore from their market valuation last week, mainly dragged down by IT major TCS amid an overall weak trend in the equity market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X