For Quick Alerts
ALLOW NOTIFICATIONS  
For Daily Alerts

ಅಡುಗೆ ಅನಿಲ ಸೇರಿ ಇತರ ಅನಿಲ ಉತ್ಪನ್ನಗಳ ದರ ಇಳಿಕೆ ನಿರೀಕ್ಷಿಸಿ

|

ಗ್ರಾಹಕರ ಪಾಲಿಗೊಂದು ಸಂತಸದ ಸುದ್ದಿ ಇದೆ. ಪಿಎನ್ ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್), ಎಲ್ ಪಿಜಿ (ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್) ಅಥವಾ ಅಡುಗೆ ಅನಿಲ ಹಾಗೂ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಬೆಲೆಯಲ್ಲಿ ಗಮನಾರ್ಹ ಇಳಿಕೆ ಆಗಬಹುದು ಎನ್ನಲಾಗುತ್ತಿದೆ. ನೈಸರ್ಗಿಕ ಅನಿಲ ಬೆಲೆಯಲ್ಲಿ ದೊಡ್ಡ ಮೊತ್ತದ ಕಡಿತಕ್ಕೆ ಸಿದ್ಧತೆ ನಡೆದಿರುವುದರಿಂದ ಹೀಗೊಂದು ನಿರೀಕ್ಷೆ ಇದೆ.

ನೈಸರ್ಗಿಕ ಅನಿಲ ಬೆಲೆ ಆರು ತಿಂಗಳಿಗೊಮ್ಮೆ ಪರಿಷ್ಕರಣೆ ಆಗುತ್ತದೆ. ಅದು ಏಪ್ರಿಲ್ ಹಾಗೂ ಅಕ್ಟೋಬರ್ ನಲ್ಲಿ. ಮುಂದಿನ ದರ ಪರಿಷ್ಕರಣೆ ಅಕ್ಟೋಬರ್ ನಲ್ಲಿದೆ. ದರವನ್ನು $ 1.90- $ 1.94/MMBtu ನಿಗದಿ ಮಾಡಲಾಗಿದೆ. ಆ ಮೂಲಕ ನೈಸರ್ಗಿಕ ಅನಿಲ ದರವು ದಶಕಗಳಲ್ಲೇ ಕನಿಷ್ಠ ಮಟ್ಟದಲ್ಲಿದೆ.

ಅಕ್ಟೋಬರ್ 1, 2020ಕ್ಕೆ ನೈಸರ್ಗಿಕ ಅನಿಲ ದರದ ಪರಿಷ್ಕರಣೆ ಆಗಲಿದೆ. $ 1.94/MMBtu ದರ ತಲುಪಲಿದೆ. ಅದು ಜಾರಿಯಾದಲ್ಲಿ ಒಂದು ವರ್ಷದಲ್ಲಿ ಆಗಲಿರುವ ಮೂರನೇ ದರ ಕಡಿತ ಇದು. ಈ ವರ್ಷದ ಏಪ್ರಿಲ್ ನಲ್ಲಿ $ 2.39/MMBtu ತಲುಪಿತ್ತು.

ಅಡುಗೆ ಅನಿಲ ಸೇರಿ ಇತರ ಅನಿಲ ಉತ್ಪನ್ನಗಳ ದರ ಇಳಿಕೆ ನಿರೀಕ್ಷಿಸಿ

ಈ ಹಿಂದೆ ಒಎನ್ ಜಿಸಿ, ಆಯಿಲ್ ಇಂಡಿಯಾದಂಥವುಕ್ಕೆ ಯೂನಿಟ್ ಗೆ $ 3.818 ಹಾಗೂ ಅದರ ಜತೆಗೆ 10% ರಾಯಧನ ಸೇರಿ ಗ್ರಾಹಕರಿಗೆ $ 4.20 ಬರುತ್ತಿತ್ತು. ಈ ಸೂತ್ರಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತ್ತು. ಆದರೆ ಎನ್ ಡಿಎ ಸರ್ಕಾರ ಆ ಜಾರಿಯನ್ನು ರದ್ದು ಮಾಡಿ, ಹೊಸ ಸೂತ್ರ ಪರಿಚಯಿಸಿತು. ಮೊದಲ ಪರಿಷ್ಕರಣೆ ವೇಳೆಗೆ ಅನಿಲ ಬೆಲೆ ಯೂನಿಟ್ ಗೆ $ 5.05 ಇತ್ತು. ಆ ನಂತರದ ಪರಿಷ್ಕರಣೆಗಳಲ್ಲಿ ಇಳಿಯುತ್ತಾ ಬಂದಿತ್ತು.

English summary

Soon Consumers Can Expect Cooking Gas, CNG, PNG Prices To Become Cheaper

Consumers can expect price slash in all gas products including cooking gas. CNG, PNG price may also get cheaper.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X