For Quick Alerts
ALLOW NOTIFICATIONS  
For Daily Alerts

'ಸೆಕ್ಸ್ ಗುರು'ವಿನ ರೋಲ್ಸ್ ರಾಯ್ಸ್ ವ್ಯಸನ: ಇದು ತುಂಬಿದ ತಿಜೋರಿಯ ಕತೆ!

|

ಇದು ಜಗತ್ತಿನ ಅತ್ಯಂತ ವಿವಾದಾತ್ಮಕ 'ಗುರು'ವಿನ ಬಗ್ಗೆ ಲೇಖನ. ಆತನ ಸುತ್ತ ಸೆಲೆಬ್ರಿಟಿಗಳಿದ್ದರು, ಪ್ರಕಾಂಡ ಬುದ್ಧಿವಂತರಿದ್ದರು, ಆತನ ಒಂದು ಮಾತಿಗೆ ಹಣ ಎಂಬುದನ್ನು ನೀರಿನಂತೆ ತಂದು ಸುರಿಯಲು ಸಿದ್ಧರಿರುತ್ತಿದ್ದರು. ಆದರೆ ಆ ಗುರುವಿಗೆ ರೋಲ್ಸ್ ರಾಯ್ಸ್ ಕಾರುಗಳೆಂದರೆ ವಿಪರೀತ ವ್ಯಾಮೋಹ. ಆ ಗುರುವಿನ ರೋಲ್ಸ್ ರಾಯ್ಸ್ ವ್ಯಾಮೋಹವೇ ಆಸಕ್ತಿಕರವಾದ ಸಂಗತಿ.

 

1970ರ ದಶಕದಲ್ಲಿ ಭಾರತದಲ್ಲಿ 'ಸೆಕ್ಸ್ ಗುರು' ಅಂತ ಅವರನ್ನು ಕರೆಯಲಾಗುತ್ತಿತ್ತು. 1980ರ ದಶಕದಲ್ಲಿ ಯು.ಎಸ್.ಗೆ ತೆರಳಿದ ಮೇಲೆ ಅವರನ್ನು "ರೋಲ್ಸ್ ರಾಯ್ಸ್ ಗುರು" ಎನ್ನಲಾಗುತ್ತಿತ್ತು. ಆ ಗುರುವಿನ ಬಳಿ 93 ವಿಲಾಸಿ ಕಾರುಗಳಿದ್ದವು. ತಮ್ಮ ಅನುಯಾಯಿಗಳ ಮಧ್ಯೆ ರಜನೀಶ್ ಚರಿಷ್ಮಾ ಅದ್ಯಾವ ಮಟ್ಟಿಗಿತ್ತು ಅಂದರೆ, ರಜನೀಶ್ ರನ್ನು ಎರಡನೇ ಬುದ್ಧ ಎಂದು ನಂಬಲಾಗಿತ್ತು. ಆತನ ಮಾತು ಕೇಳಲು 20 ಸಾವಿರ ಮಂದಿ ಕೂರಬಹುದಾದ ಸ್ಟೇಡಿಯಂ ಸುಲಭವಾಗಿ ತುಂಬುತ್ತಿತ್ತು.

ತಿಂಗಳಿಗೆ ಎರಡು ರೋಲ್ಸ್ ರಾಯ್ಸ್ ಕಾರು ಖರೀದಿಸಬಹುದಿತ್ತು

ತಿಂಗಳಿಗೆ ಎರಡು ರೋಲ್ಸ್ ರಾಯ್ಸ್ ಕಾರು ಖರೀದಿಸಬಹುದಿತ್ತು

ಭಾರತದಲ್ಲಿ ಡಿಸೆಂಬರ್ 11, 1931ರಲ್ಲಿ ಹುಟ್ಟಿದ ಆತನ ಮೂಲ ಹೆಸರು ಚಂದ್ರಮೋಹನ್ ಜೈನ್. ಜಗತ್ತಿನಾದ್ಯಂತ ಹತ್ತಾರು ಸಾವಿರ ಮಂದಿ ರಜನೀಶ್ ಅನುಯಾಯಿಗಳಿದ್ದರು. ರಜನೀಶ್ ಬಳಿ ಎಷ್ಟು ಹಣ ಇತ್ತು ಅಂದರೆ, ತುಂಬ ಸುಲಭವಾಗಿ ತಿಂಗಳಿಗೆ ಎರಡು ರೋಲ್ಸ್ ರಾಯ್ಸ್ ಕಾರು ಖರೀದಿಸಬಹುದಿತ್ತು. ಅಷ್ಟೇ ಅಲ್ಲ, ಪರಮ ದುಬಾರಿ ಕೈಗಡಿಯಾರಗಳು, ಖಾಸಗಿ ವಿಮಾನ, ಇವೆಲ್ಲದರ ಜತೆಗೆ ಮಿಲಿಯನ್ ಗಟ್ಟಲೆ ಡಾಲರ್ ಹಣದಿಂದ ರಜನೀಶ್ ತಿಜೋರಿ ತುಂಬಿಸಲು ಶ್ರೀಮಂತ ಅನುಯಾಯಿಗಳಿದ್ದರು. ಬದಲಿಗೆ ಅನುಯಾಯಿಗಳಿಗೆ ಸಿಗುತ್ತಿದ್ದುದು ಗುರುವಿನ ಫೋಟೋ, ಜತೆಗೆ ನೆಕ್ ಲೆಸ್ ಮತ್ತು ಹಣೆಯ ಮೇಲೆ ರಜನೀಶರ ಹೆಬ್ಬೆರಳನ್ನು ಒತ್ತಿದ ಗುರುತು. ಪ್ರತಿ ದಿನ ಮಧ್ಯಾಹ್ನ ಯು.ಎಸ್. ಒರೆಗಾನ್ ಬೆಟ್ಟದಲ್ಲಿ ಆತನ ಅನುಯಾಯಿಗಳು ಸಾಲುಗಟ್ಟಿ ನಿಂತು, ರಜನೀಶ್ ರ ಲಕ್ಷುರಿ ಕಾರುಗಳು ಸಾಗಿಹೋಗುವುದನ್ನು ಬೆರಗಿನಿಂದ ನಿಂತು ನೋಡುತ್ತಿದ್ದರು.

100 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನಗರ
 

100 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನಗರ

ರಜನೀಶ್ ಯಾವಾಗಲೂ ಬಳಸುತ್ತಿದ್ದುದು ರೋಲ್ಸ್ ರಾಯ್ಸ್ ಕಾರನ್ನೇ. ಆದರೆ ಪ್ರತಿ ದಿನವೂ ಬೇರೆ ಬೇರೆ ರೋಲ್ಸ್ ರಾಯ್ಸ್ ಕಾರುಗಳಿರುತ್ತಿದ್ದವು. ಅನುಯಾಯಿಗಳು ಬಾಗಿ, ಕಾರಿನ ಬಾನೆಟ್ ಮೇಲೆ ರೋಜಾ ಹೂವು ತೂರುತ್ತಿದ್ದರು. ಅಂದ ಹಾಗೆ ರಜನೀಶ್ ರ ಉಪನ್ಯಾಸದಲ್ಲಿ ಪಾಪ್ ಸೈಕಾಲಜಿ, ಭಾರತೀಯ ಪ್ರಾಚೀನ ಜ್ಞಾನ, ಕ್ಯಾಪಿಟಲಿಸಂನಿಂದ ಪೋಲಿ ಜೋಕ್ ಗಳ ತನಕ ಎಲ್ಲವೂ ಇರುತ್ತಿದ್ದವು. ಲೈಂಗಿಕ ಶಕ್ತಿಯನ್ನು ಅದುವಿಡುವುದರಿಂದ ಮಾನಸಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ ಎಂದವರು ರಜನೀಶ್. ಅಂದ ಹಾಗೆ ಓಶೋ ಅಂತಲೂ ಕರೆಸಿಕೊಳ್ಳುತ್ತಿದ್ದ ಈ ಗುರುವಿನ ಗುಂಪು 100 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ನಗರವೊಂದನ್ನು ಒರೆಗಾನ್ ನಲ್ಲಿ ನಿರ್ಮಿಸಲು ಯತ್ನಿಸಿತು.

21 ದೇಶಗಳಲ್ಲಿ ಆತನ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ

21 ದೇಶಗಳಲ್ಲಿ ಆತನ ಪ್ರವೇಶಕ್ಕೆ ಅನುಮತಿ ಸಿಗಲಿಲ್ಲ

ಆದರೆ, 1980ರ ದಶಕದಲ್ಲಿ ಇದೇ ಒಂದು ದೊಡ್ಡ ಹಗರಣ ಆಯಿತು. ಕೊಲೆ ಯತ್ನ, ಚುನಾವಣೆ ರಿಗ್ಗಿಂಗ್, ಶಸ್ತ್ರಾಸ್ತ್ರ ಕಳ್ಳಸಾಗಣೆ, ಸಾಮೂಹಿಕ ವಿಷಪ್ರಾಶನ ಹೀಗೆ ಯು.ಎಸ್. ಇತಿಹಾಸದಲ್ಲೇ ಅತಿ ದೊಡ್ಡ ಜೈವಿಕ ಭಯೋತ್ಪಾದನೆ ಎಂದು ದಾಖಲಾಗಿದೆ. ರಜನೀಶ್ ರನ್ನು ಯುನೈಟೆಡ್ ಸ್ಟೇಟ್ಸ್ ನಿಂದ ಗಡೀಪಾರು ಮಾಡಿದ ಮೇಲೆ 21 ದೇಶಗಳಲ್ಲಿ ಆತನ ಪ್ರವೇಶವನ್ನು ನಿರಾಕರಿಸಲಾಯಿತು. ಭಾರತಕ್ಕೆ ಮರಳಿದ ಓಶೋ ಮತ್ತೆ ತಮ್ಮ ಧಾರ್ಮಿಕ ಚಟುವಟಿಕೆ ಮುಂದುವರಿಸಿದರು. 1990ರಲ್ಲಿ ತೀರಿಹೋದರು. ಅಂದಹಾಗೆ, ಯು.ಎಸ್.ನಿಂದ ಗಡೀಪಾರಾದ ಮೇಲೆ ರಜನೀಶ್ ತಾವು 8 ರೋಲ್ಸ್ ರಾಯ್ಸ್ ಇಟ್ಟುಕೊಂಡರೆ, ಬಾಕಿ 85 ಕಾರುಗಳನ್ನು ಆತನ ಅನುಯಾಯಿಗಳು ಇಟ್ಟುಕೊಂಡರು. 85ರ ಪೈಕಿ 25 ರೋಲ್ಸ್ ರಾಯ್ಸ್ ಗಳನ್ನು ಲೀಸ್ ಗೆ ಬಿಡಲಾಯಿತು. ಅದರಿಂದ ರಜನೀಶ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಷನ್ ಗೆ ಹಣ ಸಂಗ್ರಹಿಸಲಾಯಿತು.

ರಜನೀಶ್ ವಿಭಿನ್ನ, ವಿಶಿಷ್ಟ, ವಿಕ್ಷಿಪ್ತ

ರಜನೀಶ್ ವಿಭಿನ್ನ, ವಿಶಿಷ್ಟ, ವಿಕ್ಷಿಪ್ತ

ಅಂತಿಮವಾಗಿ 85 ರೋಲ್ಸ್ ರಾಯ್ಸ್ ಕಾರುಗಳನ್ನು ಕಾರ್ಲಟನ್ ಕಾರು ಕಂಪೆನಿಯ ಅಧ್ಯಕ್ಷ ಬಾಬ್ ರೋಯಿಥ್ಲಸ್ ಬರ್ಗರ್ ಗೆ $7 ಮಿಲಿಯನ್ ಗೆ ಮಾರಾಟ ಮಾಡಲಾಯಿತು. ಜಗತ್ತಿನ ಅತ್ಯಂತ ದುಬಾರಿ ಕಾರಾದ ರೋಲ್ಸ್ ರಾಯ್ಸ್ ಅನ್ನು ಎಂಥ ಶ್ರೀಮಂತರಾದರೂ ಇವತ್ತಿಗೆ ಒಂದು ಖರೀದಿ ಮಾಡುವುದೂ ಕಷ್ಟ. ಆದರೆ ಮೂವತ್ತು ವರ್ಷಗಳ ಹಿಂದೆ 93 ಕಾರುಗಳನ್ನು ಖರೀದಿಸಿದ್ದ ರಜನೀಶ್ ಆದಾಯ ಎಷ್ಟಿದ್ದಿರಬಹುದು ನೀವೇ ಊಹಿಸಿ. ಅಧ್ಯಾತ್ಮ ಅಂದರೆ ವೈರಾಗ್ಯ ಅಂದುಕೊಳ್ಳುವವರೇ ಹೆಚ್ಚು. ಆದರೆ ಆ ಅರ್ಥವನ್ನು ಬದಲಿಸಿದವರು ರಜನೀಶ್. ವಿಲಾಸಿ ಕಾರುಗಳು, ವಸ್ತುಗಳು, ಕೈಗಡಿಯಾರ, ಹೆಸರು, ಪ್ರಭಾವ... ಏನಿರಲಿಲ್ಲ ಆತನ ಬಳಿ? ಇವತ್ತಿಗೆ ಅಧ್ಯಾತ್ಮದ ತಳಹದಿಯಲ್ಲಿ ಕಟ್ಟಿದ ಎಷ್ಟೋ ಸಾಮ್ರಾಜ್ಯಗಳು ಕಾಣಲು ಸಿಗುತ್ತವೆ. ಆದರೆ ಬಹಳ ಹಿಂದೆಯೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ದೊಡ್ಡ ಅಧ್ಯಾತ್ಮ ಸಾಮ್ರಾಜ್ಯ ಕಟ್ಟಿ ತೋರಿಸಿದ್ದು ರಜನೀಶ್. ಭಾರತ ಎಷ್ಟೋ ಮಂದಿ ದೇವಮಾನವರನ್ನು ಕಂಡಿದೆ. ಅವರು ತಲುಪಿದ ಎತ್ತರ, ಕಂಡ ಪಾತಾಳವೂ ನಮ್ಮೆದುರು ಇದೆ. ಆದರೆ ರಜನೀಶ್ ವಿಭಿನ್ನ, ವಿಶಿಷ್ಟ, ವಿಕ್ಷಿಪ್ತ.

English summary

Spiritual Guru Rajaneesh And His Rolls Royce Love

Here is the interesting details about spiritual guru Rajneesh and his love towards Rolls Royce cars.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X