For Quick Alerts
ALLOW NOTIFICATIONS  
For Daily Alerts

ಸ್ಟ್ಯಾಂಡರ್ಡ್ ಚಾರ್ಟರ್ಡ್ ಗೆ 100 ಕೋಟಿ ರು. ದಂಡ ಹಾಕಿದ ಇ.ಡಿ.

By ಅನಿಲ್ ಆಚಾರ್
|

ಸ್ಥಳೀಯ ಬ್ಯಾಂಕ್ ನ ಖರೀದಿ ವ್ಯವಹಾರದ ವೇಳೆ ವಿದೇಶಿ ವಿನಿಮಯ ನಿಯಮಗಳನ್ನು ಮುರಿದಿದೆ ಎಂಬ ಆರೋಪದ ಅಡಿಯಲ್ಲಿ ಸ್ಟಾಂಡರ್ಡ್ ಚಾರ್ಟರ್ಡ್ ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ನೂರು ಕೋಟಿ ರುಪಾಯಿ ದಂಡ ವಿಧಿಸಲಾಗಿದೆ. ವಿದೇಶಿ ಸಂಸ್ಥೆಯೊಂದರ ಮೇಲೆ ಭಾರತದಲ್ಲಿ ವಿಧಿಸಿದ ಅತಿ ದೊಡ್ಡ ಪ್ರಮಾಣದ ದಂಡದಲ್ಲಿ ಇದೂ ಒಂದು ಎನಿಸಿದೆ.

ತಮಿಳುನಾಡು ಮರ್ಕಂಟೇಲ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಹೂಡಿಕೆದಾರರ ಗುಂಪು ಷೇರು ಖರೀದಿ ಮಾಡುವ ವೇಳೆ, 2007ನೇ ಇಸವಿಯಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಲಾಗಿದೆ ಎಂದು ಎಂಟು ವರ್ಷಗಳ ಕಾಲ ನಡೆದ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಆಗಸ್ಟ್ ನಲ್ಲಿ ಹೊರಡಿಸಿದ ಆದೇಶದ ಪ್ರತಿಯ ಆಧಾರದ ಮೇಲೆ ಬ್ಲೂಬರ್ಗ್ ವರದಿ ಮಾಡಿದೆ.

ಈ ಆದೇಶದ ಪ್ರತಿ ತಲುಪಿರುವುದಾಗಿ ಬ್ರಿಟಿಷ್ ಮೂಲದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಖಾತ್ರಿ ಪಡಿಸಿದೆ. ಭಾರತದಲ್ಲಿ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ವಿದೇಶೀ ಬ್ಯಾಂಕ್ ಇದು. 160 ವರ್ಷಕ್ಕೂ ಹೆಚ್ಚು ವರ್ಷದಿಂದ ಇದು ಕಾರ್ಯ ನಿರ್ವಹಿಸುತ್ತಿದ್ದು, 100 ಔಟ್ ಲೆಟ್ ಗಳನ್ನು ಹೊಂದಿದೆ. ಈ ಬ್ಯಾಂಕ್ ಆ ಷೇರುಗಳ ಕಸ್ಟೋಡಿಯನ್ ಆಗಿಯೂ ಕಾರ್ಯ ನಿರ್ವಹಿಸಿತ್ತು. ಇದೇ ಆರೋಪದ ಮೇಲೆ ತಮಿಳುನಾಡು ಮರ್ಕಂಟೇಲ್ ಗೆ ಹತ್ತಿರ ಹತ್ತಿರ 17 ಕೋಟಿ ದಂಡ ವಿಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಸ್ಟ್ಯಾಂಡರ್ಡ್ ಚಾರ್ಟರ್ಡ್ ಗೆ 100 ಕೋಟಿ ರು. ದಂಡ ಹಾಕಿದ ಇ.ಡಿ.

ಇದು ಹದಿಮೂರು ವರ್ಷ ಹಳೇ ಪ್ರಕರಣ. ತಮಿಳುನಾಡು ಮರ್ಕಂಟೇಲ್ ನಿಂದ ವಿದೇಶಿ ಹೂಡಿಕೆದಾರರಿಗೆ 46,862 ಷೇರುಗಳನ್ನು ವರ್ಗಾಯಿಸಿತ್ತು. ಅದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಪಡೆಯದೆ ವರ್ಗಾಯಿಸಿತ್ತು ಎಂದು ಇ.ಡಿ. ಆದೇಶದಲ್ಲಿ ತಿಳಿಸಲಾಗಿದೆ.

ಆ ನಂತರ ಷೇರುಗಳು 2008ರ ಏಪ್ರಿಲ್ ನಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಅಡಿಯಲ್ಲಿ ನೋಂದಣಿ ಆಗಿರುವ ಸಬ್ ಕಾಂಟಿನೆಂಟಲ್ ಈಕ್ವಿಟೀಸ್ ಲಿಮಿಟೆಡ್ ಗೆ ವರ್ಗಾವಣೆ ಆಗಿತ್ತು. ಅದು ಕೂಡ ಆರ್ ಬಿಐ ಅನುಮತಿ ಇಲ್ಲದೆ ಎಂದು ಆದೇಶದಲ್ಲಿ ಹೇಳಲಾಗಿದೆ.

English summary

Standard Chartered Fined 100 Crore By ED For Violating FEMA Norms

Foreign lender Standard Chartered fined 100 crore by enforcement directorate for violating FEMA rules. Here is the case details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X