For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್ ಚಿಕಿತ್ಸೆಗೆ ಸ್ಟಾರ್ ಹೆಲ್ತ್ ಇನ್ಷುರೆನ್ಸ್ ಶುರು: 459, 918 ರುಪಾಯಿ ಪ್ರೀಮಿಯಂ

|

ದೇಶದ ಹಲವೆಡೆ ವ್ಯಾಪಿಸಿರುವ ಕೊರೊನಾವೈರಸ್‌ ನಿಂದಾಗಿ ಜನರು ಭಯಭೀತರಾಗಿದ್ದಾರೆ. ಆದಾಯದ ಕೊರತೆ ನಡುವೆ ಸೋಂಕು ತಗುಲಿದರೆ ಏನು ಗತಿ ಎಂಬ ಆತಂಕವೂ ಇದೆ. ಕೊರೊನಾವೈರಸ್ ಚಿಕಿತ್ಸೆಗೆಂದೇ ಸ್ಟಾರ್‌ ಹೆಲ್ತ್ ಆರೋಗ್ಯ ವಿಮಾ ಯೋಜನೆ ಆರಂಭಿಸಿದೆ.

ಕೊರೊನಾವೈರಸ್ ಚಿಕಿತ್ಸೆಗೆ ನಿಮ್ಮ ಹೆಲ್ತ್ ಇನ್ಷುರೆನ್ಸ್‌ ಕವರ್ ಆಗುತ್ತಾ?ಕೊರೊನಾವೈರಸ್ ಚಿಕಿತ್ಸೆಗೆ ನಿಮ್ಮ ಹೆಲ್ತ್ ಇನ್ಷುರೆನ್ಸ್‌ ಕವರ್ ಆಗುತ್ತಾ?

ಕೋವಿಡ್-19 ಪಾಸಿಟಿವ್ ವರದಿ ಪಡೆದವರು ಮತ್ತು ಆಸ್ಪತ್ರೆಗೆ ದಾಖಲಾಗುವವರ ಅನುಕೂಲಕ್ಕಾಗಿ ಸ್ಟಾರ್ ಹೆಲ್ತ್‌ ಆ್ಯಂಡ್ ಅಲೈಡ್ ಇನ್ಷುರೆನ್ಸ್ ವಿಮೆ ಪಾಲಿಸಿ ಆರಂಭಿಸಿದೆ.

ಕೊರೊನಾವೈರಸ್ ಚಿಕಿತ್ಸೆಗೆ ಸ್ಟಾರ್ ಹೆಲ್ತ್ ಇನ್ಷುರೆನ್ಸ್ ಶುರು

ಈ ಕೊರೊನಾವೈರಸ್ ಆರೋಗ್ಯ ವಿಮಾ ಪಾಲಿಸಿಯು 18 ರಿಂದ 65 ವರ್ಷದ ಒಳಗಿನವರೆಗೆ 21,000 ರುಪಾಯಿ ಮತ್ತು 42,000 ರುಪಾಯಿ ಮೊತ್ತದ ವಿಮೆ ಪರಿಹಾರದ ಎರಡು ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಿದೆ. ಇವುಗಳ ಪ್ರೀಮಿಯಂ ಮೊತ್ತಮ ಕ್ರಮವಾಗಿ 459 ರುಪಾಯಿ ಮತ್ತು 918 ಇರಲಿದೆ. ಎರಡೂ ಪಾಲಿಸಿಗಳಿಗೆ ಜಿಎಸ್‌ಟಿ ಪ್ರತ್ಯೇಕವಾಗಿರಲಿದೆ.

65 ವರ್ಷದೊಳಗಿನ ಯಾವುದೇ ವ್ಯಕ್ತಿಯು ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ. ಯಾವುದೇ ತಪಾಸಣೆಗೆ ಒಳಗಾಗುವ ಮೊದಲು ಕಂಪನಿಯ ಏಜೆಂಟರ ಮೂಲಕ ಇಲ್ಲವೆ ಅಥವಾ www.starhealth.in ವೆಬ್‌ಸೈಟ್‌ಗೆ ವಿಸಿಟ್ ಪಾಲಿಸಿಯನ್ನು ಖರೀದಿಸಿರಬೇಕು.

ಈ ಹಿಂದಿನ ಸ್ಟಾರ್ ಹೆಲ್ತ್ ಎಲ್ಲಾ ನಿಯಮಿತ ಆರೋಗ್ಯ ವಿಮಾ ಯೋಜನೆಗಳು ಕೋವಿಡ್-19 ವಿರುದ್ಧದ ಚಿಕಿತ್ಸೆಯನ್ನು ಒಳಗೊಂಡಿದೆ ಎಂದು ಕಂಪನಿಯು ದೃಢಪಡಿಸಿದೆ.

English summary

Star Health Launches Coronavirus Insurance Plan

Star Health and Allied Insurance has launched ‘Star Novel Coronavirus Insurance Policy’, a benefit policy to cover all those who test positive COVID-19
Story first published: Saturday, March 21, 2020, 10:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X