For Quick Alerts
ALLOW NOTIFICATIONS  
For Daily Alerts

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವ್ವಳ ಲಾಭ 7% ಇಳಿಕೆ

|

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಗುರುವಾರ ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದ್ದು, ಕಳೆದ ವರ್ಷದ ಇದೇ ಅವಧಿಗಿಂತ 6.9% ಕಡಿಮೆ ನಿವ್ವಳ ಲಾಭವನ್ನು ದಾಖಲಿಸಿದೆ. 2020ರ ಡಿಸೆಂಬರ್ ತ್ರೈಮಾಸಿಕ ಅಂತ್ಯಕ್ಕೆ ಬ್ಯಾಂಕ್ ರು. 5,196.22 ಕೋಟಿ ದಾಖಲಿಸಿದೆ. ಪ್ರಾವಿಷನ್ ಗಳಿಗೆ ಹೆಚ್ಚಿನ ಮೊತ್ತ ಇಟ್ಟಿರುವುದು ಹಾಗೂ ನಿವ್ವಳ ಬಡ್ಡಿ ಆದಾಯ (NII) ಬೆಳವಣಿಗೆಯಲ್ಲಿನ ಮಂದಗತಿ ಹೊಡೆತ ಕೊಟ್ಟಿದೆ.

 

ಅಂದ ಹಾಗೆ, ನಿವ್ವಳ ಬಡ್ಡಿ ಆದಾಯ ಅಂದರೇನು ಗೊತ್ತಾ? ಬ್ಯಾಂಕ್ ಬಡ್ಡಿಯ ಮೂಲಕ ಗಳಿಸುವ ಆದಾಯದಿಂದ ಬಡ್ಡಿಯನ್ನು ನೀಡುವುದಕ್ಕೆ ಮಾಡುವ ವೆಚ್ಚವನ್ನು ಕಳೆದರೆ ಉಳಿಯುವ ಬಾಬ್ತು ನಿವ್ವಳ ಬಡ್ಡಿ ಆದಾಯ. ಕಳೆದ ವರ್ಷದ ಇದೇ ಅವಧಿಗಿಂತ 3.7% ಬೆಳವಣಿಗೆ ಕಂಡು ರು. 28,819.94 ಕೋಟಿ ಇದೆ.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲದ ಮೇಲೆ ಮತ್ತಷ್ಟು ರಿಯಾಯಿತಿಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲದ ಮೇಲೆ ಮತ್ತಷ್ಟು ರಿಯಾಯಿತಿ

ಸಾಲದ ಬೆಳವಣಿಗೆ ದರ 6.73% ಇದೆ. ಒಟ್ಟಾರೆ ಠೇವಣಿ 13.64% ಬೆಳವಣಿಗೆ ಕಂಡಿದೆ. ಅದರಲ್ಲಿ ಚಾಲ್ತಿ ಖಾತೆ ಠೇವಣಿ 11.33% ಬೆಳವಣಿಗೆ ಕಂಡಿದೆ. ತಜ್ಞರ ಅಭಿಮತದ ಪ್ರಕಾರ, 5,332.1 ಕೋಟಿ ಲಾಭ ಹಾಗೂ ನಿವ್ವಳ ಬಡ್ಡಿ ಆದಾಯ ರು. 28,750.3 ಕೋಟಿ ನಿರೀಕ್ಷೆ ಮಾಡಲಾಗಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವ್ವಳ ಲಾಭ 7% ಇಳಿಕೆ

ಪ್ರಾವಿಷನ್ ಗಳು ಮತ್ತು ಅನಿರೀಕ್ಷಿತ ಸನ್ನಿವೇಶಗಳಿಗಾಗಿ ಮೀಸಲಿಡುವ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕಿಂತ 42.6% ಹೆಚ್ಚಳ ಮಾಡಿದ್ದು, ರು. 10,342.39 ಕೋಟಿಯನ್ನು ತಲುಪಿದೆ.

English summary

State Bank Of India FY21 Q3 Net Profit Down By 7 Percent

India's leading bank State Bank Of India's FY21 Q3 net profit down by 7%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X