For Quick Alerts
ALLOW NOTIFICATIONS  
For Daily Alerts

ಆರ್ಥಿಕ ಕುಸಿತದ ದಾರಿಯಲ್ಲಿ ಸಾಗುತ್ತಿದೆ ಭಾರತ: ನೊಬೆಲ್ ಪುರಸ್ಕೃತ ಅಭಿಜಿತ್

|

ಭಾರತವು ಆರ್ಥಿಕ ಕುಸಿತದ ದಾರಿಯಲ್ಲಿ ಸಾಗುತ್ತಿದೆ. ದತ್ತಾಂಶಗಳು ಅದು ಬಿಟ್ಟು ಬೇರೆ ಏನನ್ನೂ ಸೂಚಿಸುತ್ತಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸೋಮವಾರ ಕೋಲ್ಕತ್ತಾ ಸಾಹಿತ್ಯ ಸಮಾವೇಶದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ನಾವು ಆರ್ಥಿಕ ಕುಸಿತದಲ್ಲಿ ಇದ್ದೇವೆ. ಆದರೆ ಯಾವ ಪ್ರಮಾಣದಲ್ಲಿ ಎಂಬುದು ನನಗೆ ಗೊತ್ತಿಲ್ಲ. ನಾವು ಆರ್ಥಿಕ ಹಿಂಜರಿತ ಅನುಭವಿಸುತ್ತಿಲ್ಲ ಎಂದು ತಿಳಿಸುವುದಕ್ಕೆ ಯಾವುದೇ ದತ್ತಾಂಶ ಇಲ್ಲ ಎಂದು ಅಭಿಜಿತ್ ಹೇಳಿದ್ದಾರೆ.

ಭಾರತದಲ್ಲಿ ಈಗ ಆರ್ಥಿಕ ಕುಸಿತದಂಥ ಸ್ಥಿತಿಯೇ: ಸುಭಾಷ್ ಗರ್ಗ್ಭಾರತದಲ್ಲಿ ಈಗ ಆರ್ಥಿಕ ಕುಸಿತದಂಥ ಸ್ಥಿತಿಯೇ: ಸುಭಾಷ್ ಗರ್ಗ್

ಸಂಪತ್ತಿನ ಮೇಲೆ ತೆರಿಗೆ ಹಾಕುವ ವಿಚಾರದ ಪರವಾಗಿ ಮಾತನಾಡಿದ ಅವರು, ಸಂಪತ್ತಿನ ಮೇಲಿನ ತೆರಿಗೆ ಹಾಕುವುದು ಸರಿಯಾಗಿದೆ. ಅಂಥ ವೇಳೆಯಲ್ಲಿ ಅದರ ಪುನರ್ ವಿತರಣೆ ಮುಖ್ಯವಾಗುತ್ತದೆ. ಇದು ಈ ತಕ್ಷಣಕ್ಕೆ ಆಗಬಹುದು ಎಂದು ನನಗೆ ಅನಿಸುವುದಿಲ್ಲ ಎಂದಿದ್ದಾರೆ.

ಆರ್ಥಿಕ ಕುಸಿತದ ದಾರಿಯಲ್ಲಿ ಭಾರತ: ನೊಬೆಲ್ ಪುರಸ್ಕೃತ ಅಭಿಜಿತ್

ಬ್ಯಾಂಕಿಂಗ್ ಮತ್ತು ಮೂಲಸೌಕರ್ಯ ವಲಯಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ಬೇಕಿದೆ. ಇನ್ನು ಅಸಂಘಟಿತ ವಲಯಗಳ ಸ್ಥಿತಿಯನ್ನು ತಿಳಿದುಕೊಳ್ಳುವುದಕ್ಕೆ ನಮ್ಮ ಬಳಿ ಅಗತ್ಯ ದತ್ತಾಂಶಗಳಿಲ್ಲ ಎಂದು ಅಭಿಜಿತ್ ಅಭಿಪ್ರಾಯ ಪಟ್ಟಿದ್ದಾರೆ.

ಏರ್ ಇಂಡಿಯಾವನ್ನು ಮಾರುವ ಸರ್ಕಾರದ ನಿರ್ಧಾರದ ಪರವಾಗಿ ಮಾತನಾಡಿದ ಅವರು, ಈಚೆಗೆ ಕಾರ್ಪೊರೇಟ್ ತೆರಿಗೆ ದರ ಕಡಿತ ಮಾಡಿದ ಮೇಲೆ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹ ಆಗಿದೆ ಎಂದಿದ್ದಾರೆ.

English summary

"Statistical Data Clearly Shows India Could Be Passing Through A Phase Of Recession"

Nobel awardee, economist Abhijit Banerjee said, statistical data clearly shows India could passing through recession.
Story first published: Tuesday, January 28, 2020, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X