For Quick Alerts
ALLOW NOTIFICATIONS  
For Daily Alerts

ಏರಿಕೆ ಹಾದಿ ಮುಂದುವರಿಸಿದ ಷೇರು ಪೇಟೆ: ಇಂಡಸ್ ಇಂಡ್ ಬ್ಯಾಂಕ್ 7% ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಹಾದಿಯನ್ನು ಬುಧವಾರ (ಫೆಬ್ರವರಿ 3, 2021) ಕೂಡ ಮುಂದುವರಿಸಿದೆ. ಸೆನ್ಸೆಕ್ಸ್ 458.03 ಪಾಯಿಂಟ್ ಗಳಷ್ಟು ಏರಿಕೆ ಕಂಡು, 50,255.75 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಕೊನೆಗೊಳಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 142.1 ಪಾಯಿಂಟ್ ಹೆಚ್ಚಳವಾಗಿ 14,789.95 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾ ಆಗಿದೆ.

ಎಲ್ಲ ವಲಯಗಳಲ್ಲಿ ಕಂಡುಬಂದ ಖರೀದಿ, ಜಾಗತಿಕ ಸಕಾರಾತ್ಮಕ ಪ್ರಭಾವ ಬೆಂಚ್ ಮಾರ್ಕ್ ಸೂಚ್ಯಂಕಗಳ ಮೇಲೆ ಆಗಿದೆ. ಈ ದಿನದ ವಹಿವಾಟಿನಲ್ಲಿ 1752 ಕಂಪೆನಿ ಷೇರುಗಳು ಏರಿಕೆ ಕಂಡರೆ, 1189 ಕಂಪೆನಿ ಷೇರುಗಳು ಇಳಿಕೆ ಕಂಡಿವೆ. ಇನ್ನು 149 ಕಂಪೆನಿಯ ಷೇರುಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು

ಎಫ್ ಎಂಸಿಜಿ ಹೊರತುಪಡಿಸಿ ಉಳಿದ ಇತರ ವಲಯದ ಸೂಚ್ಯಂಕಗಳು ಏರಿಕೆಯನ್ನು ದಾಖಲಿಸಿವೆ. ಫಾರ್ಮಾಸ್ಯುಟಿಕಲ್ ಹಾಗೂ ಪಿಎಸ್ ಯು ಬ್ಯಾಂಕ್ ಸೂಚ್ಯಂಕಗಳು ತಲಾ ಎರಡು ಪರ್ಸೆಂಟ್ ಏರಿಕೆ ಕಂಡವು. ವಾಹನ, ಲೋಹ ಮತ್ತು ಎನರ್ಜಿ ಸೂಚ್ಯಂಕಗಳು ತಲಾ 1 ಪರ್ಸೆಂಟ್ ಏರಿಕೆ ಕಂಡಿವೆ.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಇಂಡಸ್ ಇಂಡ್ ಬ್ಯಾಂಕ್ 7.47%

ಪವರ್ ಗ್ರಿಡ್ ಕಾರ್ಪೊರೇಷನ್ 6.33%

ಸನ್ ಫಾರ್ಮಾ 4.57%

ಡಾ. ರೆಡ್ಡೀಸ್ ಲ್ಯಾಬ್ಸ್ 3.73%

ಡಿವೀಸ್ ಲ್ಯಾಬ್ಸ್ 3.71%

ಏರಿಕೆ ಹಾದಿ ಮುಂದುವರಿಸಿದ ಷೇರುಪೇಟೆ: ಇಂಡಸ್ ಇಂಡ್ ಬ್ಯಾಂಕ್ 7% ಗಳಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಶ್ರೀ ಸಿಮೆಂಟ್ಸ್ -1.66%

ಯುಪಿಎಲ್ -1.42%

ಮಾರುತಿ ಸುಜುಕಿ -0.86%

ಅಲ್ಟ್ರಾಟೆಕ್ ಸಿಮೆಂಟ್ -0.80%

ಐಟಿಸಿ -0.66%

English summary

Stock Market News: Sensex Surge More Than 450 Points And IndusInd Bank Gain 7 Percent

Stock market index sensex, nifty surge on February 2, 2021. IndusInd Bank gain more than 7%. Here is the nifty top gainers and losers.
Story first published: Wednesday, February 3, 2021, 16:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X