For Quick Alerts
ALLOW NOTIFICATIONS  
For Daily Alerts

ಎಲ್‌ಐಸಿಯಲ್ಲಿ ಹೀಗೊಂದು ಪ್ರಕರಣ; ಟೈಪೊ ಎರರ್ ಎಡವಟ್ಟು, ಕೇಸ್ ಹೈಕೋರ್ಟ್‌ಗೆ

|

ಚೆನ್ನೈ, ಜೂನ್ 3: ಇದೊಂದು ವಿಚಿತ್ರ ಪ್ರಕರಣ. ವ್ಯಕ್ತಿಯೊಬ್ಬರು ಎಲ್‌ಐಸಿ ವಿಮಾ ಪಾಲಿಸಿ ಮಾಡಲು ಹೋಗಿ ಹಾಗೂ ಈ ವ್ಯಕ್ತಿಗೆ ಪಾಲಿಸಿ ನೀಡಿದ ಎಲ್‌ಐಸಿ ಕೈ ಸುಟ್ಟುಕೊಂಡ ಪ್ರಕರಣವಿದು.

ಚೆನ್ನೈನ ರಾಯಪೆಟ್ಟಾದ ನಿವಾಸಿ ಪಿ ಸುಬ್ರಮಣಿಯನ್ ಎನ್ನುವರು ಕಳೆದ 2010 ರಲ್ಲಿ ಚೆನ್ನೈನ ರಾಯಪೆಟ್ಟಾದ ಶಾಖೆಯಲ್ಲಿ ಮೆಚುರಿಟಿ ಮೊತ್ತ 62.50 ಲಕ್ಷ ರೂ ಬರುವ ಎಲ್‌ಐಸಿ ಪಾಲಿಸಿ ಖರೀದಿಸಿದ್ದರು.

LIC ಪಾಲಿಸಿದಾರರಿಗೆ 5 ಪ್ರಮುಖ ಘೋಷಣೆಗಳುLIC ಪಾಲಿಸಿದಾರರಿಗೆ 5 ಪ್ರಮುಖ ಘೋಷಣೆಗಳು

2018 ರಲ್ಲಿ ಎಲ್‌ಐಸಿ ಕಚೇರಿಗೆ ಹೋಗಿದ್ದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಎಲ್‌ಐಸಿ ಅಧಿಕಾರಿಗಳು ಪಿ ಸುಬ್ರಮಣಿಯನ್ ಮೆಚುರಿಟಿ ಮೊತ್ತ 31.77 ಲಕ್ಷ ರೂ ಎಂದಿದ್ದರು. ಇದರಿಂದ ಕಂಗಾಲಾದ ಪಿ ಸುಬ್ರಮಣಿಯನ್, ಚೆನ್ನೈ ಹೈಕೋರ್ಟ್ ಮೊರೆ ಹೋಗಿದ್ದರು.

ನಿಜವೆಂದು ನಂಬಿದ್ದ ಸುಬ್ರಮಣಿಯನ್

ನಿಜವೆಂದು ನಂಬಿದ್ದ ಸುಬ್ರಮಣಿಯನ್

ಮೆಚುರಿಟಿ ಮೊತ್ತ ರೂ. 62.50 ಲಕ್ಷ ನಿಜವೆಂದು ನಂಬಿದ್ದ ಸುಬ್ರಮಣಿಯನ್ ಎಂಟು ವರ್ಷ, ಮಾಸಿಕ 31,153 ರೂ ಪ್ರಿಮೀಯಂ ಕಟ್ಟುತ್ತಾ ಬಂದಿದ್ದರು. ಆದರೆ ಮೆಚುರಿಟಿ ಅವಧಿ ಬಂದಾಗ ಎಲ್‌ಐಸಿಯ ಸುಬ್ರಮಣಿಯನ್ ಅವರಿಗೆ 31.77 ಲಕ್ಷವನ್ನು ಪಾವತಿಸಲು ಮುಂದಾಯಿತು.

ಕಂಗಾಲಾದ ಸುಬ್ರಮಣಿಯನ್

ಕಂಗಾಲಾದ ಸುಬ್ರಮಣಿಯನ್

ಇದರಿಂದ ಕಂಗಾಲಾದ ಸುಬ್ರಮಣಿಯನ್, ತಮಗೆ ರೂ. 62.50 ಲಕ್ಷ ಮೆಚುರಿಟಿ ಬರಬೇಕು ಎಂದು ವಾದ ಮಾಡಿದರು. ಇದನ್ನು ತಳ್ಳಿ ಹಾಕಿದ ಎಲ್‌ಐಸಿ ಅಧಿಕಾರಿಗಳು ನಿಮಗೆ 31.77 ಲಕ್ಷ ರುಪಾಯಿ ಮಾತ್ರ ಮೆಚುರಿಟಿ ಮೊತ್ತ ಸಿಗುತ್ತದೆ ಎಂದು ವಾದ ಮಾಡಿದರು.

ಹೈಕೋರ್ಟ್ ಗೆ ಪ್ರಕರಣ
 

ಹೈಕೋರ್ಟ್ ಗೆ ಪ್ರಕರಣ

ಆಗ ಸುಬ್ರಮಣಿಯನ್ ಅವರು ತಮ್ಮ ವಕೀಲ ಸುಂದರ್ ಮೋಹನ್ ಎನ್ನವರ ಮೂಲಕ ಪ್ರಕರಣವನ್ನು ಹೈಕೋರ್ಟ್ ಗೆ ತೆಗೆದುಕೊಂಡು ಹೋದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದಿಕೇಶವಲು, ಪ್ರಕರಣವನ್ನು ಬಗೆಹರಿಸಿದರು. ವಿಚಾರಣೆಯಲ್ಲಿ ಬೆಳಕಿಗೆ ಬಂದ ಸಂಗತಿ ಏನೆಂದರೆ, ಸುಬ್ರಮಣಿಯನ್ ಅವರ ಎಲ್‌ಐಸಿ ಡಾಕ್ಯುಮೆಂಟ್‌ನಲ್ಲಿ ಮೆಚ್ಯುರಿಟಿ ಮೊತ್ತವನ್ನು ಉಲ್ಲೇಖಿಸುವಾಗ ತಪ್ಪಾಗಿ ನಮೂದಿಸಲಾಗಿತ್ತು.

ಬಡ್ಡಿಯನ್ನಷ್ಟೇ ಪಾವತಿಸಿದ ಎಲ್‌ಐಸಿ

ಬಡ್ಡಿಯನ್ನಷ್ಟೇ ಪಾವತಿಸಿದ ಎಲ್‌ಐಸಿ

ಮೆಚುರಿಟಿ ಮೊತ್ತಕ್ಕೆ ಸತತ ಎಂಟು ತಿಂಗಳು ತಪ್ಪದೇ ಸುಬ್ರಮಣಿಯನ್ ಅವರು ಪ್ರತಿ ತಿಂಗಳು 31.77 ರುಪಾಯಿ ಪ್ರಿಮೀಯಂ ಕಟ್ಟಿದ್ದರು. ನ್ಯಾಯಾಲಯದ ಆದೇಶದಲ್ಲಿ ಎಲ್‌ಐಸಿ ಹಾಗೂ ಸುಬ್ರಮಣಿಯನ್ ಹಿತ ಎರಡನ್ನೂ ಕಾಪಾಡಲಾಯಿತು. ಸುಬ್ರಮಣಿಯನ್ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಿಮೀಯಂ ಕಟ್ಟಿದ್ದಕ್ಕಾಗಿ ಎಲ್‌ಐಸಿಯ ಹೆಚ್ಚಿನ ಪ್ರಿಮೀಯಂ ಹಣಕ್ಕೆ ಎಂಟು ವರ್ಷದ ಬಡ್ಡಿಯನ್ನು ಶೇ ೭.೫ ರಂತೆ ನೀಡಿತು. ಇದರಿಂದ ಎಲ್‌ಐಸಿಗೆ ಕೆಲವು ಲಕ್ಷ ರುಪಾಯಿ ಹಾನಿಯಾಯಿತು ಎಂದು ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.

English summary

Strange Case In LIC: A Document Creates A Big Issue

Strange Case In LIC: A Document Creates A Big Issue At Madras Highcourt.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X