For Quick Alerts
ALLOW NOTIFICATIONS  
For Daily Alerts

ಸೈರಸ್ ಮಿಸ್ತ್ರಿ ಮುಂದುವರಿಕೆಗೆ ಸುಪ್ರೀಂ ತಡೆ

|

ಟಾಟಾ ಗ್ರೂಪ್‌ನ ಕಾರ್ಯ ನಿರ್ವಾಹಕ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿಯನ್ನು ಮರುನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿ(ಎನ್‌ಸಿಎಲ್ಎಟಿ) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿ ಸೈರಸ್ ಮಿಸ್ತ್ರಿಯವರನ್ನು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡುವಂತೆ ಆದೇಶ ನೀಡಿತ್ತು. ಮೂರು ವರ್ಷಗಳ ಹಿಂದೆ 2016ರಲ್ಲಿ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿ ಸೈರಸ್ ಮಿಸ್ತ್ರಿಯನ್ನು ಟಾಟಾ ಗ್ರೂಪ್‌ನ ಆಡಳಿತ ಮಂಡಳಿಯಿಂದ ಹೊರ ಹಾಕಲಾಗಿತ್ತು. ನಂತರ ರತನ್ ಟಾಟಾ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆ ಬಳಿಕ ಮಿಸ್ತ್ರಿ ಕಂಪನಿಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿ ನ್ಯಾಯಮಂಡಳಿ ಮೊರೆ ಹೋಗಿದ್ದರು.

ಸೈರಸ್ ಮಿಸ್ತ್ರಿ ಮುಂದುವರಿಕೆಗೆ ಸುಪ್ರೀಂ ತಡೆ

ಸೈರಸ್ ಮಿಸ್ತ್ರಿ ಅವರನ್ನು ಮರುನೇಮಕ ಮಾಡಬೇಕೆಂಬ ಎನ್‌ಸಿಎಲ್ಎಟಿ ಆದೇಶ ರದ್ದುಪಡಿಸಬೇಕೆಂದು ಟಾಟಾ ಸನ್ಸ್‌ ಅರ್ಜಿ ಸಲ್ಲಿಸಿತ್ತು. ಶುಕ್ರವಾರ ಇದರ ವಿಚಾರ ನಡೆಸಿದ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಈ ತೀರ್ಪು ಕನಿಷ್ಠ ಸಾಮಾನ್ಯ ದೋಷದಿಂದ ಕೂಡಿದೆ. ನಾವು ಈ ಬಗ್ಗೆ ವಿವರಗಳನ್ನು ತಿಳಿಯಬೇಕಾಗಿದೆ ಎಂದು ತಿಳಿಸಿದೆ. ಜತೆಗೆ ಮಿಸ್ತ್ರಿ ಮತ್ತಿತರರಿಗೆ ನೋಟಿಸ್‌ ನೀಡಿದೆ.

NCLATಯಿಂದ ಸೈರಸ್ ಮಿಸ್ತ್ರಿ ಮರುನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆNCLATಯಿಂದ ಸೈರಸ್ ಮಿಸ್ತ್ರಿ ಮರುನೇಮಕ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೊರೆ

ಇನ್ನು ಇತ್ತೀಚೆಗಷ್ಟೇ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ತಾವು ಮತ್ತೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಥವಾ ಯಾವುದೇ ಹುದ್ದೆಯ ಸ್ವರೂಪದಲ್ಲಿರಲು ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

English summary

Supreme Court Stays NCLAT Order Favouring Mistry

The Supreme Court on Friday stayed last month’s NCLAT order reinstating Cyrus Mistry as the executive chairman of Tata Sons
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X