For Quick Alerts
ALLOW NOTIFICATIONS  
For Daily Alerts

SC Verdict on Demonetisation: ಅಪನಗದೀಕರಣ: ಜ.2ರಂದು ಸುಪ್ರೀಂನಿಂದ ತೀರ್ಪು

|

ನೋಟು ಅಪನಗದೀಕರಣ ನಡೆದು ಸುಮಾರು 6 ವರ್ಷಗಳು ಕಳೆದಿದೆ. 2016ರಲ್ಲಿ ಕೇಂದ್ರ ಸರ್ಕಾರವು ದಿಡೀರ್ ಆಗಿ 1000 ರೂಪಾಯಿ ಹಾಗೂ 500 ರೂಪಾಯಿಯ ನೋಟನ್ನು ಬ್ಯಾನ್ ಮಾಡಿದೆ. ಈ ಅಪನಗದೀಕರಣ ಸಂಬಂಧಿಸಿದ ಎರಡು ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಜನವರಿ 2, 2023ರಂದು ನೀಡಲಿದೆ.

 

ಕೇಂದ್ರ ಸರ್ಕಾರವು ನೋಟನ್ನು ಅಪನಗದೀಕರಣ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು ತೀರ್ಪನ್ನು ನ್ಯಾಯಾಂಗದ ಚಳಿಗಾಲದ ರಜೆ ಅವಧಿ ಮುಗಿದ ಮೊದಲ ದಿನವೇ ಪ್ರಕಟ ಮಾಡಲಿದೆ.

 

ನೋಟ್ ಬ್ಯಾನ್ ಯಾಕಾಯ್ತು? ಕೊನೆಗೂ ಬಂತು ಅಧಿಕೃತ ಉತ್ತರ; ಸರ್ಕಾರ ಹೇಳಿದ್ದೇನು?ನೋಟ್ ಬ್ಯಾನ್ ಯಾಕಾಯ್ತು? ಕೊನೆಗೂ ಬಂತು ಅಧಿಕೃತ ಉತ್ತರ; ಸರ್ಕಾರ ಹೇಳಿದ್ದೇನು?

ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿಆರ್ ಗವಾಯ್, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ತೀರ್ಪು ಪ್ರಕಟ ಮಾಡಲಿದ್ದಾರೆ. ಇನ್ನು ಈ ನೋಟು ಅಪನಗದೀಕರಣದ ವಿರುದ್ಧವಾಗಿ ಸುಮಾರು 58 ಅರ್ಜಿಗಳು ಸಲ್ಲಿಸಲಾಗಿದೆ. ಈ ಅರ್ಜಿಗಳಲ್ಲಿ ಹೆಚ್ಚಿನವುಗಳು ಅಪನಗದೀಕರಣದ ಸಿಂಧುತ್ವವನ್ನು ಪ್ರಶ್ನೆ ಮಾಡಿರುವ ಅರ್ಜಿಗಳಾಗಿದೆ.

 Demonetisation: ಅಪನಗದೀಕರಣ: ಜ.2ರಂದು ಸುಪ್ರೀಂನಿಂದ ತೀರ್ಪು

ಎರಡು ಅರ್ಜಿಗಳ ತೀರ್ಪು

ಸುಪ್ರೀಂ ಕೋರ್ಟ್‌ ಇಂದು ಎರಡು ಪ್ರಮುಖ ವಿಚಾರಗಳ ಬಗ್ಗೆ ತೀರ್ಪನ್ನು ಇಂದು ನೀಡಲಿದೆ. ಈ ತೀರ್ಪನ್ನು ನ್ಯಾಯಮೂರ್ತಿ ಬಿಆರ್ ಗವಾಯ್ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಪ್ರಕಟಿಸಲಿದ್ದಾರೆ. ಇನ್ನು ಈ ಹಿಂದೆ ನೋಟು ರದ್ದತಿ ತೀರ್ಮಾನದ ಬಗ್ಗೆ ದಾಖಲೆಗಳನ್ನು ನೀಡಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಡಿ. 7ರಂದು ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು.

ಎಲ್ಲಿದೆ 2000 ರೂಪಾಯಿ ನೋಟು, ಕೊನೆಯ ಬಾರಿ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ!ಎಲ್ಲಿದೆ 2000 ರೂಪಾಯಿ ನೋಟು, ಕೊನೆಯ ಬಾರಿ ನೋಡಿದ್ದು ಯಾವಾಗ ನೆನಪಿಸಿಕೊಳ್ಳಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8, 2016ರಂದು ದೇಶದ ಜನರನ್ನು ಉದ್ದೇಶಿಸಿ ಮಾಧ್ಯಮದಲ್ಲಿ ಮಾತನಾಡುತ್ತಾ, ಕೂಡಲೇ ಜಾರಿಗೆ ಬರುವಂತೆ 500 ರೂಪಾಯಿ ಹಾಗೂ 1000 ರೂಪಾಯಿ ನೋಟಿನ ಅಪನಗದೀಕರಣ ಮಾಡಿದ್ದಾರೆ. ಈ ಅಪನಗದೀಕರಣ ನಡೆದು ಆರು ವರ್ಷಗಳು ಆಗಿದೆ.

ಪ್ರಮುಖವಾಗಿ ಕಪ್ಪು ಹಣದ ವಿರುದ್ಧ ಇದು ನಮ್ಮ ಹೋರಾಟ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ. ಅಂದರೆ ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ನೋಟ್ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ಆ ಸಂದರ್ಭದಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಈ ದಿಡೀರ್ ನಿರ್ಧಾರವನ್ನು ಬಿಜೆಪಿಯು ಉತ್ತಮ ನಿರ್ಧಾರ ಎಂದು ಹಾಡಿಹೊಗಳಿದರೆ, ವಿರೋಧ ಪಕ್ಷವು ಟೀಕೆ ಮಾಡಿದೆ. ಯಾವುದೇ ತಯಾರಿ ನಡೆಸದೆಯೇ ಏಕಾಏಕಿ ಘೋಷಣೆ ಮಾಡಿ, ಬಡ ಜನರನ್ನು ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ವಿರೋಧ ಪಕ್ಷಗಳು ದೂರಿದೆ.

English summary

Supreme Court to pronounce two separate verdicts on demonetisation On January 2, 2023

The Supreme Court is scheduled to pronounce its judgment on January 2, 2023 on a batch of pleas challenging the government's 2016 decision to demonetise currency notes of ₹1,000 and ₹500 denominations.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X