For Quick Alerts
ALLOW NOTIFICATIONS  
For Daily Alerts

Swiggy Layoffs : ಸ್ವಿಗ್ಗಿ ನಷ್ಟ ದುಪ್ಪಟ್ಟು: ಇನ್ನಷ್ಟು ಉದ್ಯೋಗ ಕಡಿತವಾಗುತ್ತಾ?

|

ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿಯ ನಷ್ಟವು ಈ ವರ್ಷ ದುಪ್ಪಟ್ಟಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಸ್ವಿಗ್ಗಿಯು ಸುಮಾರು 1,617 ಕೋಟಿ ರೂಪಾಯಿಯ ನಷ್ಟವನ್ನು ಕಂಡಿತ್ತು. ಆದರೆ ಈ ಹಣಕಾಸು ವರ್ಷದಲ್ಲಿ ಸ್ವಿಗ್ಗಿಯ ಆದಾಯ ನಷ್ಟ ದುಪ್ಪಟ್ಟಾಗಿ, 3,629 ಕೋಟಿ ರೂಪಾಯಿಗೆ ತಲುಪಿದೆ.

ಹಣಕಾಸು ವರ್ಷ 2022ರಲ್ಲಿ ಒಟ್ಟು ವೆಚ್ಚವು ಶೇಕಡ 131ರಷ್ಟು ಏರಿಕೆಯಾಗಿ 9,574.5 ಕೋಟಿ ರೂಪಾಯಿ ಆಗಿದೆ. ಕಳೆದ ತ್ರೈಮಾಸಿಕದಲ್ಲಿ ಸಂಸ್ಥೆಯು ನೀಡಿದ ವಾರ್ಷಿಕ ಹಣಕಾಸು ಹೇಳಿಕೆ ಪ್ರಕಾರ ಸ್ವಿಗ್ಗಿ ಪ್ರಸ್ತುತ ಡೆಕಾಕಾರ್ನ್ ಆಗಿದೆ. ಅಂದರೆ 10 ಬಿಲಿಯನ್ ಡಾಲರ್‌ಗಿಂತ ಅಧಿಕ ಮೌಲ್ಯವನ್ನು ಹೊಂದಿರುವ ಸಂಸ್ಥೆಯಾಗಿದೆ.

ಅಮೆರಿಕಾದ ಇನ್ವೆಸ್ಕೋ ಸಂಸ್ಥೆ ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಲು ರೆಡಿ !ಅಮೆರಿಕಾದ ಇನ್ವೆಸ್ಕೋ ಸಂಸ್ಥೆ ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಲು ರೆಡಿ !

ಈ ನಡುವೆ ಹಣಕಾಸು ವರ್ಷ 2022ರಲ್ಲಿ ಸ್ವಿಗ್ಗಿ ಆದಾಯ ಶೇಕಡ 2.2ರಷ್ಟು ಏರಿಕೆಯಾಗಿ 5,705 ಕೋಟಿ ರೂಪಾಯಿಗೆ ತಲುಪಿದೆ. ಆದರೆ ಹಣಕಾಸು ವರ್ಷ 2021ರಲ್ಲಿ ಸ್ವಿಗ್ಗಿ ಆದಾಯವು 2,547 ಕೋಟಿ ರೂಪಾಯಿ ಆಗಿತ್ತು. ವೆಚ್ಚವು ಶೇಕಡ 24.5ರಷ್ಟಿದೆ.

 ವೆಚ್ಚ ಎಷ್ಟು ಹೆಚ್ಚಳವಾಗಿದೆ?

ವೆಚ್ಚ ಎಷ್ಟು ಹೆಚ್ಚಳವಾಗಿದೆ?

ಹಣಕಾಸು ವರ್ಷ 2022ರಲ್ಲಿ ವೆಚ್ಚವು 2.3 ಪಟ್ಟು ಅಧಿಕವಾಗಿ, 2,350 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2021ರಲ್ಲಿ ವೆಚ್ಚವು 1,031 ಕೋಟಿ ರೂಪಾಯಿ ಆಗಿತ್ತು. ಹಾಗೆಯೇ ಹಣಕಾಸು ವರ್ಷ 2022ರಲ್ಲಿ ಜಾಹೀರಾತು ಹಾಗೂ ಪ್ರೋಮೋಷನಲ್ ವೆಚ್ಚವು 4 ಪಟ್ಟು ಏರಿಕೆಯಾಗಿ 1,848.7 ಕೋಟಿ ರೂಪಾಯಿಗೆ ತಲುಪಿದೆ.

 ಸ್ವಿಗ್ಗಿಯಲ್ಲಿ ಮತ್ತಷ್ಟು ಉದ್ಯೋಗ ಕಡಿತ ಸಾಧ್ಯತೆ

ಸ್ವಿಗ್ಗಿಯಲ್ಲಿ ಮತ್ತಷ್ಟು ಉದ್ಯೋಗ ಕಡಿತ ಸಾಧ್ಯತೆ

ಸ್ವಿಗ್ಗಿಯಲ್ಲಿ ಉದ್ಯೋಗ ಕಡಿತವು ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯಾಗುವ ಸಾಧ್ಯತೆಯಿದೆ. ಕಳೆದ ತಿಂಗಳಲ್ಲಿ ಸ್ವಿಗ್ಗಿಯಲ್ಲಿ 250ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಂದರೆ ಜನವರಿಯಲ್ಲಿ ತನ್ನ ವರ್ಕ್ ಫೋರ್ಸ್‌ನ ಶೇಕಡ 5ರಷ್ಟು ಉದ್ಯೋಗ ಕಡಿತ ಮಾಡಿದೆ. "ಸ್ವಿಗ್ಗಿಯಲ್ಲಿ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ. ನಾವು ಅಕ್ಟೋಬರ್‌ನಲ್ಲಿ ಪ್ರಕ್ರಿಯೆ ಅಂತ್ಯ ಮಾಡಿದ್ದೇವೆ. ರೇಟಿಂಗ್ಸ್, ಪ್ರೋಮೋಷನ್ ಅನ್ನು ಘೋಷಿಸಿದ್ದೇವೆ," ಎಂದು ಸ್ವಿಗ್ಗಿಯ ವಕ್ತಾರರು ತಿಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸ್ವಿಗ್ಗಿಯಲ್ಲಿ ಮತ್ತಷ್ಟು ಉದ್ಯೋಗ ಕಡಿತವಾಗುವ ಸಾಧ್ಯತೆಯಿದೆ.

 ಸ್ವಿಗ್ಗಿ ನಿವ್ವಳ ಮೌಲ್ಯ ಎಷ್ಟಿದೆ?
 

ಸ್ವಿಗ್ಗಿ ನಿವ್ವಳ ಮೌಲ್ಯ ಎಷ್ಟಿದೆ?

ಜೆಫ್ಫೆರೀಸ್ ಸಂಸ್ಥೆಯ ಪ್ರಕಾರ, "ಸ್ವಿಗ್ಗಿಯೂ ಅತೀ ವೇಗವಾಗಿ ಷೇರು ಮಾರುಕಟ್ಟೆಯಲ್ಲಿ ನಷ್ಟವನ್ನು ಕಾಣುತ್ತಿರುವ ಸಂಸ್ಥೆಯಾಗಿದೆ. ಜನವರಿ ಜೂನ್ ಅವಧಿಯಲ್ಲಿ ಸ್ವಿಗ್ಗಿಯ ನಿವ್ವಳ ಮೌಲ್ಯವು 1.3 ಬಿಲಿಯನ್ ಡಾಲರ್ ಆಗಿದೆ," ಎಂದು ಉಲ್ಲೇಖಿಸಲಾಗಿದೆ. ಇನ್ನು ಜೊಮ್ಯಾಟೊ ಮೌಲ್ಯ 1.6 ಬಿಲಿಯನ್ ಡಾಲರ್ ಆಗಿದೆ. ಈ ವರ್ಷದ ಆರಂಭದಲ್ಲಿ ಸ್ವಿಗ್ಗಿಯು 700 ಮಿಲಿಯನ್ ಡಾಲರ್ ಫಂಡ್ ರೈಸ್ ಮಾಡಿದೆ. ಅಮೆರಿಕಾದ ಇನ್ವೆಸ್ಕೋ ಸಂಸ್ಥೆಯು ಹೂಡಿಕೆ ಮಾಡಿದೆ.

English summary

Swiggy's Losses Jumps to Rs 3,629 Crore in FY22, More Layoffs Expected, Details in Kannada

Online food delivery platform Swiggy's losses doubled to Rs 3,629 crore in FY22 compared to Rs 1,617 crore in the last fiscal year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X