For Quick Alerts
ALLOW NOTIFICATIONS  
For Daily Alerts

8 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಿಂದ ಆಲ್-ಇನ್-ಒನ್ ಆಪ್ ಅಭಿವೃದ್ಧಿ

By ಅನಿಲ್ ಆಚಾರ್
|

ಜ್ಯುವೆಲ್ಲರಿಯಿಂದ ಉಪ್ಪಿನ ತನಕ 11,100 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಸಾಮ್ರಾಜ್ಯ ಇದೆ ಟಾಟಾ ಸಮೂಹದ್ದು. ಆಗಸ್ಟ್ 26ನೇ ತಾರೀಕಿಗೆ ಒಂದು ಅಮೆರಿಕನ್ ಡಾಲರ್ ಗೆ ಭಾರತದ ರುಪಾಯಿ ಮೌಲ್ಯ 74.234 ಇದೆ. ಅಂದರೆ 8,23,997.4 ಕೋಟಿ ರುಪಾಯಿಯ ಸಾಮ್ರಾಜ್ಯ ಟಾಟಾ ಸಮೂಹದ್ದು. ಇದೀಗ ದೊಡ್ಡ ಡಿಜಿಟಲ್ ಬದಲಾವಣೆಯ ಹೆಜ್ಜೆ ಇಡುವುದರಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಟಾಟಾದಿಂದ ಎಲ್ಲ ಗ್ರಾಹಕ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಂದು ಕಡೆಗೆ ದೊರಕುವಂತೆ ಮಾಡಲು ಇ ಕಾಮರ್ಸ್ ಅಪ್ಲಿಕೇಷನ್ ರೂಪಿಸುತ್ತಿದೆ ಎಂದು ಈ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ. ಗ್ರಾಹಕರಿಗಾಗಿ ಈಗ ಇರುವ ಎಲ್ಲ ಆನ್ ಲೈನ್ ಆಸ್ತಿಗಳನ್ನು ಒಗ್ಗೂಡಿಸಿಕೊಂಡು ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭಕ್ಕೆ ಆರಂಭಿಸುವ ನಿರೀಕ್ಷೆ ಇದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.

ಟಾಟಾ ಸ್ಟೀಲ್ ಜೂನ್ ತ್ರೈಮಾಸಿಕ ನಷ್ಟ 4,648 ಕೋಟಿ ರುಪಾಯಿಟಾಟಾ ಸ್ಟೀಲ್ ಜೂನ್ ತ್ರೈಮಾಸಿಕ ನಷ್ಟ 4,648 ಕೋಟಿ ರುಪಾಯಿ

2023ರ ಹೊತ್ತಿಗೆ ಇಂಟರ್ ನೆಟ್ ಅನ್ನು ಬಳಸುವವರ ಸಂಖ್ಯೆ 90 ಕೋಟಿ ತಲುಪುತ್ತದೆ ಎಂಬ ಅಂದಾಜು ಮಾಡಿದೆ ಸಿಸ್ಕೋ ಸಿಸ್ಟಮ್ಸ್ ಕಂಪೆನಿ. ಇನ್ನು ಇಂಟರ್ ನೆಟ್ ಬಳಸುವವರ ಪೈಕಿ ಎಲ್ಲರೂ ಸ್ಮಾರ್ಟ್ ಫೋನ್ ಬಳಸಿ ಖರೀದಿ ಹಾಗೂ ಪಾವತಿ, ಮಾಹಿತಿಯನ್ನು ನೋಡುವುದಕ್ಕೆ ಬಳಸುವವರು ಎನ್ನಲಾಗಿದೆ. ಆದ್ದರಿಂದ ಮುಂಬೈ ಮೂಲದ ಟಾಟಾ ಸಮೂಹವು ಆನ್ ಲೈನ್ ನಲ್ಲಿ ತನ್ನ ಇರುವಿಕೆ ಪ್ರಮುಖವಾಗಿ ಇರಬೇಕು ಎಂಬ ಪ್ರಯತ್ನ ಶುರು ಮಾಡಿದೆ.

8 ಲಕ್ಷ ಕೋಟಿ ಮೌಲ್ಯದ ಟಾಟಾ ಸಮೂಹದಿಂದ ಆಲ್-ಇನ್-ಒನ್ ಆಪ್ ಅಭಿವೃದ್ಧಿ

ಅಮೆಜಾನ್, ಫ್ಲಿಪ್ ಕಾರ್ಟ್, ಇನ್ನೇನು ಈ ವ್ಯವಹಾರಕ್ಕೆ ಹೊಸದಾಗಿ ಕಾಲಿರಿಸಿರುವ ರಿಲಯನ್ಸ್ ಜತೆಗೆ ಸೆಣೆಸಲು ಸಿದ್ಧತೆ ನಡೆಸುತ್ತಿದೆ. ಟಾಟಾ ಡಿಜಿಟಲ್ ಸಿಇಒ ಪ್ರತೀಕ್ ಪಾಲ್ ಅವರು ಅಪ್ಲಿಕೇಷನ್ ರೂಪಿಸುವ ಹೊಣೆ ಹೊತ್ತಿದ್ದಾರೆ. ಅವರಿಗೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಮೂರು ದಶಕದ ಅನುಭವ ಇದೆ. ಡಿಜಿಟಲ್ ಗೆ ಬದಲಾದ ವಿಶ್ವದ ಅತಿದೊಡ್ಡ ಕಂಪೆನಿಗಳಿಗೆ ಸಹಾಯ ಮಾಡಿದ ಕೀರ್ತಿ ಅವರದು. ಅದರಲ್ಲಿ ವಾಲ್ ಮಾರ್ಟ್, ಟಾರ್ಗೆಟ್, ಬೆಸ್ಟ್ ಬೈ ಸೇರಿದಂತೆ ಇತರ ಕಂಪೆನಿಗಳೂ ಇವೆ.

ಆದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಟಾಟಾ ಸಮೂಹ ನಿರಾಕರಿಸಿದೆ. ಟಾಟಾ ಸಮೂಹದಿಂದ ವಿಲಾಸಿ ಹೋಟೆಲ್ ಗಳು, ಏರ್ ಲೈನ್ಸ್, ಇನ್ಷೂರೆನ್ಸ್, ಡಿಪಾರ್ಟ್ ಮೆಂಟಲ್ ಸ್ಟೋರ್ಸ್ ಹೀಗೆ ನಾನಾ ಬಗೆಯ ವ್ಯವಹಾರಗಳಲ್ಲಿ ತೊಡಗಿಕೊಳ್ಳಲಾಗಿದೆ.

English summary

Tata Group Aims To Develop All In One E Commerce App To Take On Amazon, Reliance: Report

Tata group all set to launch all in one online e commerce app, according to media report. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X