For Quick Alerts
ALLOW NOTIFICATIONS  
For Daily Alerts

ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಳ: ಯಾವ ಕಾರಿಗೆ ಎಷ್ಟು ಬೆಲೆ ಏರಿಕೆ?

|

ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕ ಕಾರುಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಮೇ 8ರಿಂದ ಅನ್ವಯವಾಗುವಂತೆ ಕಂಪನಿಯು ತನ್ನ ಎಲ್ಲಾ ಪ್ರಯಾಣಿಕ ಕಾರುಗಳ ಬೆಲೆಯನ್ನು ಶೇಕಡಾ 1.8ರಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದೆ.

ಆದರೆ ಈಗಾಗಲೇ ಟಾಟಾ ಕಾರು ಬುಕ್ ಮಾಡಿದವರಿಗೆ ಗುಡ್‌ನ್ಯೂಸ್ ಇಲ್ಲಿದೆ. ಏಕೆಂದರೆ ಮೇ 7 ರಂದು ಅಥವಾ ಅದಕ್ಕೂ ಮೊದಲು ಕಾಯ್ದಿರಿಸಿದ ಕಾರುಗಳ ಬೆಲೆಯನ್ನು ಹೆಚ್ಚಿಸಲಾಗುವುದಿಲ್ಲ ಎಂದು ಟಾಟಾ ಮೋಟಾರ್ಸ್ ಗ್ರಾಹಕರಿಗೆ ಭರವಸೆ ನೀಡಿದೆ.

ಕಚ್ಚಾ ವಸ್ತುಗಳ ಬೆಲೆ ಏರಿಕೆ

ಕಚ್ಚಾ ವಸ್ತುಗಳ ಬೆಲೆ ಏರಿಕೆ

ಕಾರು ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳವಾಗಿರುವ ಪರಿಣಾಮ ಟಾಟಾ ಮೋಟಾರ್ಸ್‌ ಕಾರು ಉತ್ಪಾದನೆಗೆ ವೆಚ್ಚ ಹೆಚ್ಚಿಸಿದೆ. ಪರಿಣಾಮ ಕಂಪನಿಯು ಎಲ್ಲಾ ಕಾರುಗಳ ಬೆಲೆ ಹೆಚ್ಚಿಸಲು ನಿರ್ಧರಿಸಿದೆ ಎಂದು ಟಾಟಾ ಮೋಟಾರ್ಸ್‌ ಪ್ರಯಾಣಿಕ ವಾಹನ ವ್ಯವಹಾರದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.

ಯಾವೆಲ್ಲಾ ವಸ್ತುಗಳ ಬೆಲೆ ಹೆಚ್ಚಳಗೊಂಡಿದೆ?

ಯಾವೆಲ್ಲಾ ವಸ್ತುಗಳ ಬೆಲೆ ಹೆಚ್ಚಳಗೊಂಡಿದೆ?

ಕಾರು ಉತ್ಪಾದನೆಯಲ್ಲಿ ಬಳಸುವ ಉಕ್ಕು, ಪ್ಲಾಸ್ಟಿಕ್, ಫೈಬರ್ ಮತ್ತು ರಬ್ಬರ್ ಬೆಲೆಗಳು ಈಗ ದುಬಾರಿಯಾಗಿದೆ ಎಂದು ಟಾಟಾ ಮೋಟಾರ್ಸ್ ಕಾರುಗಳ ಬೆಲೆ ಹೆಚ್ಚಿಸಲು ತೀರ್ಮಾನಿಸಿದೆ.

ಯಾವೆಲ್ಲಾ ಕಾರುಗಳ ಬೆಲೆ ಹೆಚ್ಚಳ?

ಯಾವೆಲ್ಲಾ ಕಾರುಗಳ ಬೆಲೆ ಹೆಚ್ಚಳ?

ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಮೇ 7 ರಂದು ಅಥವಾ ಅದಕ್ಕೂ ಮೊದಲು ಬುಕ್‌ ಮಾಡಿದ ಕಾರುಗಳ ಬೆಲೆ ಹೆಚ್ಚಿಸದಿರಲು ತೀರ್ಮಾನಿಸಿದೆ. ಪ್ರಸ್ತುತ, ಟಾಟಾ ಮೋಟಾರ್ಸ್ ತನ್ನ ಪ್ರಯಾಣಿಕರ ವಾಹನ ವಿಭಾಗದಲ್ಲಿ 6 ಕಾರುಗಳನ್ನು ಮಾರಾಟ ಮಾಡುತ್ತಿದೆ, ಇದರಲ್ಲಿ ಟಿಯಾಗೊ, ಟೈಗರ್, ನೆಕ್ಸಾನ್, ಅಲ್ಟ್ರೋಸ್, ಹ್ಯಾರಿಯರ್ ಮತ್ತು ಸಫಾರಿ ಸೇರಿವೆ.

ದೇಶದ 3ನೇ ಅತಿದೊಡ್ಡ ಕಾರು ತಯಾರಕ ಟಾಟಾ

ದೇಶದ 3ನೇ ಅತಿದೊಡ್ಡ ಕಾರು ತಯಾರಕ ಟಾಟಾ

ಮಾರುತಿ ಸುಜುಕಿ ಮತ್ತು ಹ್ಯುಂಡೈ ನಂತರ ಟಾಟಾ ಮೋಟಾರ್ಸ್ ದೇಶದ ಮೂರನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಕಂಪನಿಯು ಕಳೆದ ಏಪ್ರಿಲ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 39,530 ಯುನಿಟ್ ಕಾರುಗಳನ್ನು ಮಾರಾಟ ಮಾಡಿತು. ಮಾರಾಟದ ಅಂಕಿಅಂಶಗಳ ಪ್ರಕಾರ, ನೆಕ್ಸಾನ್, ಟಿಯಾಗೊ ಮತ್ತು ಅಲ್ಟ್ರೋಸ್ ಕಂಪನಿಯ ಹೆಚ್ಚು ಮಾರಾಟವಾದ ಕಾರುಗಳಾಗಿವೆ.

ಟಾಟಾ ಮೋಟಾರ್ಸ್ ಲಿಮಿಟೆಡ್ ಏಪ್ರಿಲ್‌ನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಟ್ಟು ಮಾರಾಟ 41,858 ಯುನಿಟ್ ಆಗಿತ್ತು. ಪ್ರಸ್ತುತ, ಟಾಟಾ ಮೋಟಾರ್ಸ್ ತನ್ನ ಭವಿಷ್ಯದ ಕಾರು ಟಾಟಾ ಎಚ್‌ಬಿಎಕ್ಸ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದು ಮಿನಿ ಎಸ್ಯುವಿಯಾಗಿದ್ದು ಅದು ಮಹೀಂದ್ರಾ ಕೆಯುವಿ 100, ಕಿಯಾ ಸೊನೆಟ್ ಮತ್ತು ಹ್ಯುಂಡೈಗೆ ಸ್ಪರ್ಧೆ ನೀಡಲಿದೆ.

 

English summary

Tata Motors to hike prices of passenger vehicles from May 8

Tata Motors has increased its passenger vehicle Prices from May 8. The company on Friday announced that effective 8th May
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X