For Quick Alerts
ALLOW NOTIFICATIONS  
For Daily Alerts

ಕೊರೊನಾ ವಿರುದ್ಧದ ಹೋರಾಟಕ್ಕೆ 500 ಕೋಟಿ ರುಪಾಯಿ ಘೋಷಿಸಿದ ಟಾಟಾ ಟ್ರಸ್ಟ್

|

ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಟಾಟಾ ಟ್ರಸ್ಟ್ 500 ಕೋಟಿ ರುಪಾಯಿ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಕೊರೊನಾ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡಲು ಮುಂದಾದ ಯಾವುದೇ ಖಾಸಗಿ ವಲಯದ ಘಟಕಕ್ಕಿಂತ ಈವರೆಗಿನ ಅತಿದೊಡ್ಡ ಕೊಡುಗೆಯಾಗಿದೆ.

"ಈ ಅಸಾಧಾರಣ ಕಷ್ಟಕರ ಅವಧಿಯಲ್ಲಿ, ಕೋವಿಡ್ -19 ಬಿಕ್ಕಟ್ಟಿನ ವಿರುದ್ಧ ಹೋರಾಡುವ ಅಗತ್ಯತೆಗಳನ್ನು ನಿಭಾಯಿಸಲು ತುರ್ತು ಸಂಪನ್ಮೂಲಗಳನ್ನು ನಿಯೋಜಿಸಬೇಕಾಗಿದೆ ಎಂದು ನಾನು ನಂಬುತ್ತೇನೆ, ಇದು ಮಾನವ ಜನಾಂಗವು ಎದುರಿಸಬೇಕಾದ ಕಠಿಣ ಸವಾಲುಗಳಲ್ಲಿ ಒಂದಾಗಿದೆ" ಎಂದು ಟಾಟಾ ಟ್ರಸ್ಟ್ ಪತ್ರಿಕಾ ಪ್ರಕಟಣೆ ಉಲ್ಲೇಖಿಸಿದೆ.

ಕೊರೊನಾ ವಿರುದ್ಧದ ಹೋರಾಟಕ್ಕೆ 500 ಕೋಟಿ ರು. ಘೋಷಿಸಿದ ಟಾಟಾ ಟ್ರಸ್ಟ್

ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಲು, ಹೆಚ್ಚುತ್ತಿರುವ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಉಸಿರಾಟದ ವ್ಯವಸ್ಥೆಗಳು, ತಲಾ ಪರೀಕ್ಷೆಯನ್ನು ಹೆಚ್ಚಿಸಲು ಕಿಟ್‌ಗಳನ್ನು ಹೆಚ್ಚಿಸಲು, ಸೋಂಕಿತ ರೋಗಿಗಳಿಗೆ ಮಾಡ್ಯುಲರ್ ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸುವುದು ಮತ್ತು ಜ್ಞಾನ ನಿರ್ವಹಣೆ ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ತರಬೇತಿಗಾಗಿ ಈ ಹಣವನ್ನು ನೀಡಲಿದೆ.

ಇಲ್ಲಿಯವರೆಗೆ, ಕೋವಿಡ್ -19 ಪರಿಣಾಮ ತಗ್ಗಿಸಲು ಕಾರ್ಪೊರೇಟ್ ಸಂಸ್ಥೆಗಳಾದ ಹಿಂದೂಸ್ತಾನ್ ಯೂನಿಲಿವರ್, ವೇದಾಂತ ಗ್ರೂಪ್, ಪಾರ್ಲೆ, ಹೀರೋ ಸೈಕಲ್ಸ್, ಟಿವಿಎಸ್ ಗ್ರೂಪ್, ಬಜಾಜ್ ಗ್ರೂಪ್ ಹಣ ಸಹಾಯದ ಭರವಸೆ ನೀಡಿವೆ. ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವವರಿಗೆ ಆರೈಕೆ ನೀಡುವ ಉದ್ದೇಶದಿಂದ ಯೂನಿಲಿವರ್, ಬಜಾಜ್, ವೇದಾಂತ ಮತ್ತು ಹೀರೋ ತಲಾ 100 ಕೋಟಿ ರುಪಾಯಿ ಘೋಷಿಸಿದ್ದಾರೆ.

ಭಾರತದಲ್ಲಿ ಈವರೆಗೆ ಆ್ಯಕ್ಟಿವ್ ಆಗಿರುವ ಕೇಸ್‌ಗಳು 819 ಇದ್ದು, 80 ಜನರು ಗುಣಮುಖರಾಗಿದ್ದಾರೆ.

English summary

Tata Trust To Give 500 Crore For Coronavirus Fight

Tata Trusts has committed Rs500 crore to fight the menace of the Covid-19 pandemic.
Story first published: Saturday, March 28, 2020, 19:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X